ವಾರದ ಕೊನೆಗೆ ಬಿಗ್ ಬಾಸ್ ನಲ್ಲಿ ಬಿಗ್ ಟ್ವಿಸ್ಟ್: 3 ಜನ ಮನೆಯಿಂದ ಔಟ್..

Entertainment Featured-Articles News
33 Views

ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸೆಕೆಂಡ್ ಇನ್ನಿಂಗ್ಸ್ ಇನ್ನೇನು ಕೊನೆಯ ಹಂತವನ್ನು ತಲುಪಿದೆ. ಈ ಬಾರಿ ಕನ್ನಡ ಬಿಗ್ ಬಾಸ್ ಆರಂಭವಾಗಿದ್ದೇ ತಡವಾಗಿ. ಅಲ್ಲದೇ ಆರಂಭವಾದ ಮೇಲೆ ಸಹಾ ನಿರ್ವಿಘ್ನವಾಗಿ ನಡೆಯುತ್ತಿದ್ದ ಶೋ ಗೆ ಕೊರೊನಾ ಆತಂಕವು ಎದುರಾಯಿತು. ಇದರ ಕಾರಣದಿಂದ ಬಿಗ್ ಬಾಸ್ ಅರ್ಧದಲ್ಲೇ ನಿಂತಿತು. ಮನೆಯಲ್ಲಿ ಆ ವೇಳೆಗೆ ಉಳಿದಿದ್ದ ಹನ್ನೆರಡು ಜನ ಸ್ಪರ್ಧಿಗಳನ್ನು ಅವರವರ ಮನೆಗಳಿಗೆ ಕಳುಹಿಸಲಾಯಿತು. ಬಿಗ್ ಬಾಸ್ ಅಭಿಮಾನಿಗಳಿಗೆ ನಿರಾಶೆಯಾಯಿತು. ಅಲ್ಲದೇ ಮತ್ತೆ ಬಿಗ್ ಬಾಸ್ ಆರಂಭ ಆಗುವ ಭರವಸೆ ಇಲ್ಲವಾಯಿತು. ಕೆಲವು ಕಡೆ ಬಿಗ್ ಬಾಸ್ ಇವರೇ ಎನ್ನುವ ಸುಳ್ಳು ಸುದ್ದಿಗಳು ಸಹಾ ಹರಿದಾಡಿದವು. ಆದರೆ ಎಲ್ಲವುಗಳ ನಡುವೆಯೇ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಮೂಲಕ ಮತ್ತೊಮ್ಮೆ ಜನರ ಮುಂದೆ ಬಂದೇ ಬಿಟ್ಟಿತು.

ಕೊರೊನಾ ಕಾರಣದಿಂದ ನಿಂತಾಗ ಇದ್ದ ಅದೇ ಹನ್ನೆರಡು ಜನ ಸ್ಪರ್ಧೆಗಳೊಂದಿಗೆ ಎರಡನೇ ಇನ್ನಿಂಗ್ಸ್ ನ ಭರ್ಜರಿ ಪಯಣ ಆರಂಭವಾಯಿತು. ಮೊದಲ ಸೀಸನ್ ನಲ್ಲಿ ಬ್ರೇಕ್ ಪಡೆದು ಹೊರ ಬಂದಿದ್ದ ಸ್ಪರ್ಧಿಗಳು ತಮ್ಮ ಜರ್ನಿಯ ಅವಲೋಕನ ಮಾಡಿಕೊಂಡು ಮೊದಲಿಗಿಂತ ಉತ್ತಮವಾದ ತಯಾರಿಯನ್ನು ಮಾಡಿಕೊಂಡು ಬಂದರು. ಅಲ್ಲದೇ ಬಿಗ್ ಬಾಸ್ ಸಹಾ ಹೆಚ್ಚುವರಿ ವಾರಗಳ ವರೆಗೆ ಮುಂದುವರೆದಿದೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಆರಂಭದ ವಾರದಲ್ಲಿ ಎಲಿಮಿನೇಷನ್ ಇರಲಿಲ್ಲ. ಆದರೆ ಎರಡನೇ ವಾರದಲ್ಲಿ ಸೆಕೆಂಡ್ ಇನ್ನಿಂಗ್ಸ್ ನ ಮೊದಲ ಎಲಿಮಿನೇಷನ್ ಆಗಿ ನಿಧಿ ಸುಬ್ಬಯ್ಯ ಹೊರ ಬಂದರು.

ಅದಾದ ನಂತರ ಮೂರನೇ ವಾರ ರಘು ಹೊರ ಬಂದರೆ, ನಾಲ್ಕನೇ ವಾರ ಎಲಿಮಿನೇಷನ್ ಇಲ್ಲದ ಕಾರಣ ಐದನೇ ವಾರ ಪ್ರಿಯಾಂಕ ಹೊರ ಬಂದರು. ಇದಾದ ಮೇಲೆ ಆರನೇ ವಾರ ಯಾವುದೇ ಎಲಿಮಿನೇಷನ್ ಆಗಲಿಲ್ಲವಾದರೂ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಚಕ್ರವರ್ತಿ ಚಂದ್ರಚೂಡ್ ಅವರು ಮನೆಯಿಂದ ಹೊರ ಬಂದಾಗಿದೆ. ಇನ್ನು ಶೋ ಫಿನಾಲೆ ಕಡೆ ನಡೆದಿದೆ. ಫಿನಾಲೆ ವಾರದಲ್ಲಿ ಮನೆಯಲ್ಲಿ ಟಾಪ್ ಐದು ಸ್ಪರ್ಧಿಗಳು ಇರುತ್ತಾರೆ. ಆದರೆ ಮನೆಯಲ್ಲಿ ಇನ್ನೂ ಕೂಡಾ ಎಂಟು ಜನ ಸದಸ್ಯರು ಉಳಿದುಕೊಂಡಿದ್ದಾರೆ. ಹಾಗಾದರೆ ಈ ವಾರ ಮೂರು ಜನರನ್ನು ಔಟ್ ಮಾಡಿ ಬಿಗ್ ಬಾಸ್ ಶಾಕ್ ಕೊಡ್ತಾರೆ ಎನ್ನುವಂತೆ ಇದೆ ವಾತಾವರಣ.

ಮುಂದಿನವಾರ ಫಿನಾಲೇ ವಾರ ವಾಗಿರೋದರಿಂದ ಈ ವಾರದ ಅಂತ್ಯದಲ್ಲಿ ಡಬಲ್ ಎಲಿಮಿನೇಷನ್ ಆಗಲಿದೆಯಾ?? ಮುಂದಿನ ವಾರ ಸಹಾ ವಾರದ ಮಧ್ಯೆ ಮತ್ತೊಬ್ಬರು ಹೊರಗೆ ಬಂದು ಐದು ಜನರು ಉಳಿಯುವರಾ?? ಎಲ್ಲಾ ಕುತೂಹಲ ಮೂಡಿಸಿದೆ. ಇನ್ನು ಮನೆಯಿಂದ ಹೊರ ಬರುವ ಮೂರು ಮಂದಿ ಯಾರಾಗಲಿದ್ದಾರೆ ಎನ್ನುವುದು ಸಹಾ ತೀವ್ರ ಆಸಕ್ತಿ ಮೂಡಿಸಿದೆ. ಏಕೆಂದರೆ ದಿವ್ಯ ಉರುಡಗ ಕ್ಯಾಪ್ಟನ್ ಆಗಿ ಮುಂದಿನ ವಾರಕ್ಕೆ ಹೋಗಲು ತಮ್ಮ ದಾರಿ ಸುಲಭ ಮಾಡಿಕೊಂಡಿದ್ದಾರೆ. ಇನ್ನುಳಿದಂತೆ ಅನೇಕರು ದಿವ್ಯ ಉರುಡುಗ, ವೈಷ್ಣವಿ, ಪ್ರಶಾಂತ್ ಸಂಬರ್ಗಿ, ಅರವಿಂದ್ ಹಾಗೂ ಮಂಜು ಪಾವಗಡ ಟಾಪ್ ಫೈವ್ ಎನ್ನುತ್ತಿದ್ದಾರೆ.

ಮತ್ತೊಂದು ಕಡೆ ಸೋಶಿಯಲ್ ಮೀಡಿಯಾಗಳಲ್ಲಿ ಶಮಂತ್ ಮತ್ತು ಶುಭ ಪೂಂಜಾ ಸಹಾ ಟಾಪ್ ಫೈವ್ ನಲ್ಲಿ ಇರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಾಗಾದರೆ ಈ ವಾರಾಂತ್ಯಕ್ಕೆ ಬಿಗ್ ಬಾಸ್ ಯಾರಿಗೆ ಶಾಕ್ ನೀಡಲಿದ್ದಾರೆ. ಮನೆಯಿಂದ ಯಾವ ಮೂರು ಜನ ಸ್ಪರ್ಧಿಗಳು ಮನೆಯಿಂದ ಹೊರಗೆ ಬರಲಿದ್ದಾರೆ, ಯಾರು ಐದು ಜನ ಫಿನಾಲೆ ವೀಕ್ ನಲ್ಲಿ ಇರಲಿದ್ದಾರೆ?? ಇನ್ನು ಈ ಬಾರಿ ಅಂದರೆ ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಯಾರಾಗಲಿದ್ದಾರೆ? ಅನ್ನೋದಕ್ಕೆ ಉತ್ತರ ಸಹಾ ಮುಂದಿನ ವಾರ ಸಿಗಲಿದೆ. ಆದರೆ ಅಲ್ಲಿಯವರೆಗೆ ಇರೋ ಕುತೂಹಲಕ್ಕೆ ಉತ್ತರ ಸಿಗೋಕೆ ಕಾಯಲೇಬೇಕಿದೆ.

Leave a Reply

Your email address will not be published. Required fields are marked *