ವಾಯುವೇಗದಲ್ಲಿ ಎಷ್ಟೆಲ್ಲಾ ತಿರುವುಗಳು? ನೂರು ಪ್ರಶ್ನೆಗಳ ಸುಳಿಯಲ್ಲಿ ಜೊತೆ ಜೊತೆಯಲಿ ಪ್ರೇಕ್ಷಕ ಮಹಾಶಯ

Entertainment Featured-Articles Movies News

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳದ್ದೇ ಕಾರು ಬಾರು ಎನ್ನುವುದರಲ್ಲಿ ಎರಡು ಮಾತಿಲ್ಲ. ಬಹುತೇಕ ವಾಹಿನಿಗಳಲ್ಲಿ ಪ್ರಸಾರ ಆಗುತ್ತಿರುವ ಎಲ್ಲಾ ಸೀರಿಯಲ್ ಗಳು ಸಹಾ ಮೆಗಾ ಸೀರಿಯಲ್ ಗಳೇ ಅಗಿವೆ. ಅದರಲ್ಲಿ ಟಿ ಆರ್ ಪಿ ವಿಚಾರದಲ್ಲಿ ಕೆಲವು ಸೀರಿಯಲ್ ಗಳು ಅಗ್ರಸ್ಥಾನದಲ್ಲಿ ಮಿಂಚುತ್ತಿವೆ. ಅಂತಹ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದು ಜೊತೆ ಜೊತೆಯಲಿ ಕೂಡಾ. ಅನು, ಆರ್ಯವರ್ಧನ್ ಎನ್ನುವ ವಿಶೇಷ ಜೋಡಿಯ ಪ್ರೇಮಕಥೆ, ಪುನರ್ಜನ್ಮದ ಸೇ ಡಿ ನ ಕಥೆಯಾಗಿ ಜನರ ಮುಂದೆ ಬಂದ ಸೀರಿಯಲ್ ಪ್ರೇಕ್ಷಕರ ಗಮನವನ್ನು ಸೆಳೆದಿದ್ದು ಮಾತ್ರವೇ ಅಲ್ಲದೇ ಬಹು ಬೇಗ ಜನರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿ ಸೂಪರ್ ಹಿಟ್ ಸೀರಿಯಲ್ ಗಳ ಸಾಲಿಗೆ ಸೇರಿದೆ.

ಇನ್ನು ಇತ್ತೀಚಿಗೆ ಈ ಸೀರಿಯಲ್ ಸಾಕಷ್ಟು ವಿ ವಾ ದಗಳಿಂದಾಗಿ ಸಹಾ ಸಖತ್ ಸೌಂಡ್ ಮಾಡಿದೆ. ಸೀರಿಯಲ್ ನಾಯಕ ನಟ ಅನಿರುದ್ಧ್ ಅವರನ್ನು ಆರ್ಯವರ್ಧನ್ ಪಾತ್ರದಿಂದ ಸೀರಿಯಲ್ ತಂಡ ಕೈ ಬಿಟ್ಟಿದ್ದು, ನಟ, ಸೀರಿಯಲ್ ನಿಂದ ಹೊರಗೆ ಬಂದಿದ್ದು, ಮಾದ್ಯಮಗಳಲ್ಲಿ ಅದರ ಬಗ್ಗೆ ಚರ್ಚೆ, ಪ್ರೇಕ್ಷಕರ ಅಸಮಾಧಾನ ಹೀಗೆ ನಾನಾ ವಿಚಾರಗಳು ನಡೆದವು. ಇವೆಲ್ಲವುಗಳ ನಡುವೆಯೇ ಆ ಪಾತ್ರಕ್ಕೆ ಹೊಸ ನಟ ಎಂಟ್ರಿ ಆಗುತ್ತೆ ಅಂದಾಗ, ಜನರಿಗೆ ಉತ್ತರ ಸಿಕ್ಕಿದ್ದು ನಟ ಹರೀಶ್ ರಾಜ್ ಇನ್ಮುಂದೆ ಆರ್ಯವರ್ಧನ್ ಎನ್ನುವುದು. ಆದರೆ ಈ ವಿಷಯ ಪ್ರೇಕ್ಷಕರಿಗೆ ತಿಳಿಯುವ ವೇಳೆಗೆ ಸೀರಿಯಲ್ ನಲ್ಲಿ ಬಹಳಷ್ಟು ಸಂಗತಿಗಳು ಊಹೆಗೂ ಮೀರಿದ ವೇಗದಲ್ಲಿ ನಡೆದು ಹೋಗಿದೆ.

ಹೌದು, ನಟ ಅನಿರುದ್ಧ್ ಅವರು ಸೀರಿಯಲ್ ನಿಂದ ಹೊರ ಬಂದ ಮೇಲೆ ಸೀರಿಯಲ್ ನಲ್ಲಿ ಮುಂದೇನಾಗಲಿದೆ ಎಂದು ಕಾದಿದ್ದವರಿಗೆ ಸಾಕಷ್ಟು ತಿರುವುಗಳು ಹೊಸ ಕುತೂಹಲ ಮೂಡಿಸಿದೆ. ವಿದೇಶದಿಂದ ಪ್ರಿಯದರ್ಶಿನಿ ಅವರ ಮಗ ವಿಶ್ವಾಸ್ ದೇಸಾಯಿ ಆಗಮನ, ಪುನರ್ಜನ್ಮ ತಳೆದ ಅನು ಹಿಂದಿನ ದ್ವೇ ಷ ಮರೆತು ಗಂಡನ ಮೇಲೆ ತೋರುತ್ತಿರುವ ಪ್ರೇಮ, ಜೇಂಡೇಯೇ ಎಲ್ಲದಕ್ಕೂ ಕಾರಣ ಎನ್ನುವ ಅನುಮಾನ, ಈ ನಡುವೆ ವಿಶ್ವಾಸ್ ಸಾ ವು, ಆರ್ಯನಿಗೆ ಅ ಪ ಘಾತ, ಆರ್ಯ ನಿಗೆ ವಿಶ್ವಾಸ್ ಮುಖದ ಸರ್ಜರಿ, ಹೊರ ಜಗತ್ತಿಗೆ ಆರ್ಯ ಸತ್ತೇ ಹೋದ ಎನ್ನುವ ಸುದ್ದಿ, ಅಲ್ಲದೇ ವಿಶ್ವಾಸ್ ದೇಸಾಯಿ ರೂಪದಲ್ಲಿರುವ ಆರ್ಯನಿಗೆ ಹಿಂದಿನದೇನು ನೆನಪಿನಲ್ಲಿ ಇಲ್ಲ ಎನ್ನುವ ಶಾ ಕಿಂಗ್ ಸುದ್ದಿ.

ಹೀಗೆ ಸಾಲು ಸಾಲು ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಒಂದು ಕಡೆ ಕುತೂಹಲ, ಮತ್ತೊಂದು ಕಡೆ ಗೊಂದಲವನ್ನು ಸಹಾ ಮೂಡಿಸಿದೆ. ಇತ್ತ ಆರ್ಯನೆಂದೇ ಬಿಂಬಿಸಲಾದ ವಿಶ್ಚಾಸ್ ದೇಸಾಯಿ ಪಾರ್ಥಿವ ಶರೀರದ ಮುಂದೆ ಅನು ರೋ ಧ ನೆ ಒಟ್ಟಾರೆ ಸೀರಿಯಲ್ ನಲ್ಲಿ ಕಳೆದ ಕೆಲವೇ ದಿನಗಳಲ್ಲಿ ಸಾಕಷ್ಟು ತಿರುವುಗಳು ಮೂಡಿ ಬಂದಿರುವುದು ಮಾತ್ರವೇ ಅಲ್ಲದೇ ಕಥೆಯ ವೇಗ ಬಹಳ ಜೋರಾಗಿದ್ದು, ಎರಡು ಮೂರು ಎಪಿಸೋಡ್ ಗಳಲ್ಲೇ ಸಾಕಷ್ಟು ವಿಷಯಗಳು ನಡೆದು ಹೋಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಸಹಾ ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡುತ್ತಾ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ತೊಡಗಿದ್ದಾರೆ.

ಈಗ ಪ್ರೇಕ್ಷಕರ ಮುಂದೆ ಇರುವ ಪ್ರಶ್ನೆಗಳು ವಿಶ್ವಾಸ್ ದೇಸಾಯಿ ರೂಪದಲ್ಲಿ ಇರೋ ಆರ್ಯನಿಗೆ ಹಿಂದಿನದು ನೆನಪಾಗಿ ಮರಳಿ ಬರೋದು ಯಾವಾಗ? ವಿಶ್ವಾಸ್ ದೇಸಾಯಿ ರೂಪದ ಆರ್ಯನನ್ನು ಅನು ಒಪ್ತಾಳಾ? ರಾಜನಂದಿನಿಯ ಪುನರ್ಜನ್ಮದ ಉದ್ದೇಶ ನೆರವೇರುತ್ತಾ? ಆರ್ಯನ ಸಾವಿಗೆ ಸಂಚು ಹೂಡಿದವರು ಯಾರು? ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಯಾವಾಗ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ ಇರುವ ಪ್ರೇಕ್ಷಕರಿಗೆ, ಸ್ಪಷ್ಟವಾದ ಉತ್ತರ ಸಿಗಲಿದೆಯೇನು? ಖಂಡಿತ ಇದಕ್ಕೆ ಸೀರಿಯಲ್ ಅಭಿಮಾನಿಗಳು ಕಾಯಲೇಬೇಕಾದ ಅನಿವಾರ್ಯತೆ ಇದೆ.

Leave a Reply

Your email address will not be published.