ವರಮಾಲೆಯೊಂದಿಗೆ ಬರುತ್ತಿತ್ತು ಡ್ರೋನ್: ಆಗಲೇ ಕೋಪ ನೆತ್ತಿಗೇರಿದ ವರ ಮಾಡಿದ ಕೆಲಸಕ್ಕೆ ಶಾಕ್ ಆದ್ರು ಜನ

Entertainment Featured-Articles News Viral Video

ಸಾಮಾಜಿಕ ಜಾಲತಾಣಗಳು ಎಂತಹ ವೇದಿಕೆಗಳು ಎಂದರೆ ಇಲ್ಲಿ ಪ್ರತಿದಿನವೂ ಏನಾದರೊಂದು ವೈರಲ್ ಆಗುತ್ತಲೇ ಇರುತ್ತದೆ. ಇದರಲ್ಲಿ ಸುದ್ದಿಗಳು, ವೀಡಿಯೋಗಳು ಅಥವಾ ಫೋಟೋ ಗಳು ಯಾವುದಾದರೂ ಸರಿ, ಇದಕ್ಕಿದ್ದಂತೆ ವೈರಲ್ ಆಗಿ ದೊಡ್ಡ ಮಟ್ಟದಲ್ಲಿ ಜನರ ಗಮನವನ್ನು ಸೆಳೆಯುತ್ತವೆ. ಹೀಗೆ ವೈರಲ್ ಆಗುವ ವೀಡಿಯೋಗಳಲ್ಲಿ ಮದುವೆಗೆ ಸಂಬಂಧಿಸಿದ ಫನ್ನಿ ವೀಡಿಯೋಗಳು ಸಹಾ ಸೇರಿರುತ್ತವೆ ಎನ್ನುವುದು ವಾಸ್ತವ. ಮದುವೆಯ ಸಡಗರದ ನಡುವೆ ನಡೆಯುವ ಕೆಲವು ಘಟನೆಗಳ ವೀಡಿಯೋಗಳು ಬಹಳಷ್ಟು ಹಾಸ್ಯಮಯವಾಗಿರುತ್ತವೆ.

ಮದುವೆ ಸಮಾರಂಭಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಧು ಅಥವಾ ವರನು ತಮ್ಮ ತಾಳ್ಮೆ ಕಳೆದುಕೊಂಡು, ಕೋಪದಿಂದ ಮಾಡುವ ಕೆಲವು ಕೆಲಸಗಳು ಸಹಾ ದೊಡ್ಡ ಮಟ್ಟದಲ್ಲಿ ವೀಡಿಯೋಗಳ ರೂಪದಲ್ಲಿ ವೈರಲ್ ಆಗುತ್ತದೆ. ಇಂತಹ ವೀಡಿಯೋ ಗಳನ್ನು ನೋಡಿ ಜನರು ನಕ್ಕು ನಕ್ಕು ಆ ಕ್ಷಣವನ್ನು ಆಸ್ವಾದಿಸುತ್ತಾರೆ ಹಾಗೂ ಅಲ್ಲಿನ ಜನರ ಪರಿಸ್ಥಿತಿ ಹೇಗೆ ಆಗಿರಬೇಕು ಎಂದು ಆಲೋಚನೆ ಮಾಡಿ, ಅದನ್ನು ಸಹಾ ಊಹಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ.

ಈಗ ವೈರಲ್ ಆಗಿರುವ ವೀಡಿಯೋವನ್ನು ನೋಡಿದಾಗ ಇಲ್ಲಿ ಮದುವೆ ಸಮಾರಂಭವೊಂದರಲ್ಲಿ ವರನಿಗೆ ಬಂದ ಕೋಪ, ಆ ಕೋಪದಿಂದ ಆತನು ಮಾಡಿದ ಕೆಲಸವನ್ನು ನೋಡಿ ಮದುವೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಬಂಧುಗಳು, ಆಹ್ವಾನಿತರು ಎಲ್ಲರೂ ಸಹಾ ದಂಗಾಗಿ ಹೋಗಿದ್ದಾರೆ. ಬನ್ನಿ ಹಾಗಾದರೆ ಈ ಫನ್ನಿ ಘಟನೆಯ ಬಗ್ಗೆ ಇನ್ನಷ್ಟು ತಿಳಿಯೋಣ‌. ಇತ್ತೀಚಿನ ದಿನಗಳಲ್ಲಿ ಮದುವೆಗಳು ಸಿಕ್ಕಾಪಟ್ಟೆ ಗ್ಯ್ರಾಂಡ್ ಆಗಿ ಮಾಡುವುದು ಒಂದು ಸಂಪ್ರದಾಯ ಎನ್ನುವಂತಾಗಿದೆ. ಅದಕ್ಕೆ ಹೊಸ ಹೊಸ ಐಡಿಯಾ ಗಳನ್ನು ಮಾಡುತ್ತಾರೆ ಈ ಸಮಾರಂಭಗಳಲ್ಲಿ.

ವೈರಲ್ ವೀಡಿಯೋದಲ್ಲಿ ಜಯಮಾಲಾ ( ಹೂಹಾರವನ್ನು ಬದಲಿಸುವ ಶಾಸ್ತ್ರ ) ಸಂಪ್ರದಾಯವನ್ನು ಯಶಸ್ವಿಯಾಗಿ ಮಾಡಲು, ಇನ್ನಷ್ಟು ಆಕರ್ಷಕ ಹಾಗೂ ಸ್ಮರಣೀಯವಾಗಿ ಮಾಡಲು ಹೂವಿನ ಹಾರವನ್ನು ಡ್ರೋನ್ ಬಳಸಿ ವೇದಿಕೆಯ ಮೇಲೆ ನಿಂತಿರುವ ವಧು ವರನ ಕಡೆಗೆ ತರಲಾಗುತ್ತದೆ. ಸ್ಟೇಜ್ ಮೇಲೆ ಹಾರಕ್ಕಾಗಿ ವಧು ಬರ ಕಾದು ನಿಂತಿರುವಾಗಲೇ, ಅಲ್ಲಿಗೆ ಡ್ರೋನ್ ಮೂಲಕ ಬಂದ ಹಾರವನ್ನು ಮೇಲೆ ಕೆಳಗೆ ಮಾಡಲಾಗುತ್ತದೆ. ಇದರಿಂದ ವರನ ಕೋಪ ನೆತ್ತಿಗೇರಿದೆ. ಆತ ಆ ಕೋಪದಿಂದಲೇ ಸರಿಯಾದ ಸಮಯ ನೋಡಿ ಹಾರವನ್ನು ಗಟ್ಟಿಯಾಗಿ ಎಳೆದು, ಡ್ರೋನ್ ಅನ್ನು ನೆಲಕ್ಕೆ ಅಪ್ಪಳಿಸುವ ಹಾಗೆ ಬೀಳಿಸುತ್ತಾನೆ.

ವರನು ಡ್ರೋನ್ ಮೇಲೆ ತೋರಿಸಿದ ಕೋಪವನ್ನು ನೋಡಿ ಒಂದು ಕ್ಷಣ ಮದುವೆ ಸಮಾರಂಭದಲ್ಲಿ ನೆರೆದಿರುವ ಜನರೆಲ್ಲಾ ದಂಗಾಗಿ ಹೋಗುತ್ತಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ಈಗಾಗಲೇ ಲಕ್ಷಾಂತರ ಜನರು ಈ ವೀಡಿಯೋವನ್ನು ನೋಡಿ ವೈವಿದ್ಯಮಯ ಕಾಮೆಂಟ್ ಗಳನ್ನು ಸಹಾ ಮಾಡಿದ್ದಾರೆ. ವರನ ಕೋಪಕ್ಕೆ ಡ್ರೋನ್ ಬಲಿಯಾಗಿದ್ದನ್ನು ನೋಡಿ ಅನೇಕರು ವ್ಯಂಗ್ಯ ಮಾಡಿ ಕಾಮೆಂಟ್ ಗಳನ್ನು ಸಹಾ ಹಾಕಿದ್ದಾರೆ.

Leave a Reply

Your email address will not be published.