ವರಮಹಾಲಕ್ಷ್ಮಿ ಹಬ್ಬದ ದಿನ ಕೆಜಿಎಫ್ 2 ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ನೀಡಿದ ಹೊಂಬಾಳೆ ಫಿಲ್ಮ್ಸ್, ರಾಕಿಂಗ್ ಸ್ಟಾರ್ ಯಶ್

0 2

ಕರ್ನಾಟಕ ಮಾತ್ರವೇ ಅಲ್ಲದೇ ಭಾರತದಾದ್ಯಂತ ಸಿನಿ ಪ್ರೇಮಿಗಳು ಬಹಳ ಕಾತುರದಿಂದ‌ ನಿರೀಕ್ಷೆ ಮಾಡುತ್ತಿರುವ ಸಿನಿಮಾ ಕೆಜಿಎಫ್ ಚಾಪ್ಟರ್ ಟು. ಕೊರೊನಾ ಕಾರಣದ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಆದರೆ ಸಿನಿಮಾದ ಕುರಿತಾಗಿ ಅಪ್ಡೇಟ್ ಗಳನ್ನು ಸಿನಿ ತಂಡವು ಸೋಶಿಯಲ್ ಮೀಡಿಯಾಗಳ ಕೊಡುವ ಮೂಲಕ ಅಭಿಮಾನಿಗಳಿಗೆ ಸಿನಿಮಾದ ಕುರಿತಾಗಿ ಇರುವ ಆಸಕ್ತಿಯನ್ನು ತಣಿಸುವ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಈಗ ವರಮಹಾಲಕ್ಷ್ಮೀ ಹಬ್ಬದ ದಿನದಂದು ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಶುಭ ಸುದ್ದಿಯನ್ನು ನೀಡಿದೆ. ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಟು ಸಿನಿಮಾದ ಸ್ಯಾಟಲೈಟ್ ಪ್ರಸಾರದ ಹಕ್ಕು ಮಾರಾಟದ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದೆ.

ಹೌದು, ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗಲಿರುವ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಟು ನ ಸ್ಯಾಟಲೈಟ್ ಪ್ರಸಾರದ ಹಕ್ಕನ್ನು ಜೀ ವಾಹಿನಿಯು ಪಡೆದುಕೊಂಡಿದೆ. ಅಂದರೆ ದಕ್ಷಿಣದ ನಾಲ್ಕು ಭಾಷೆಗಳಲ್ಲಿ,‌ಕನ್ನಡ, ತೆಲುಗು,‌ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಕೆಜಿಎಫ್ ಟು ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಆಯಾ ಭಾಷೆಯ ಜೀ ವಾಹಿನಿಯು ತನ್ನದಾಗಿಸಿಕೊಂಡಿದೆ. ಈ ಕುರಿತಾಗಿ ಹೊಂಬಾಳೆ ಫಿಲ್ಮ್ಸ್ ನ ಮೂಲಕ ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕ ವಿಜಯ್ ಕಿರಂಗದೂರು ಅವರು ಟ್ವೀಟ್ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದೇ ವಿಷಯವನ್ನು ನಟ ರಾಕಿಂಗ್ ಸ್ಟಾರ್ ಯಶ್ ಅವರು ಸಹಾ ಟ್ವೀಟ್ ಮಾಡಿ ತಿಳಿಸಿದ್ದಾರೆ. ಜೀ ವಾಹಿನಿ ನಾಲ್ಕು ಭಾಷೆಯಲ್ಲಿ ಕೆಜಿಎಫ್ ಚಾಪ್ಟರ್ ಟು ನ ಸ್ಯಾಟಲೈಟ್ ಪ್ರಸಾರ ಹಕ್ಕನ್ನು ಪಡೆದಿರುವುದು ಅಧಿಕೃತವಾಗಿ ಪ್ರಕಟಣೆಯಾಗಿದೆಯಾದರೂ ಅದು ಎಷ್ಟು ಬೆಲೆಗೆ ಈ ಹಕ್ಕನ್ನು ಪಡೆದುಕೊಂಡಿದೆ ಅಥವಾ ಎಷ್ಟು ಬೆಲೆಗೆ ಮಾರಾಟವಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಹಿಂದಿಯಲ್ಲಿ ಎಕ್ಸಲ್ ಎಂಟರ್ಟೈನ್ಮೆಂಟ್ ವಿತರಣ ಹಕ್ಕನ್ನು ಖರೀದಿ ಮಾಡಿದ್ದು, ಸ್ಯಾಟಲೈಟ್ ಹಕ್ಕು ಸಹಾ ಅವರೇ ಮಾರಾಟ ಮಾಡಲಿದ್ದಾರೆ ಎನ್ನಲಾಗಿದೆ. ಕೆಜಿಎಫ್ ಚಾಪ್ಟರ್ ಟು ಬಿಡುಗಡೆ ಯಾವಾಗ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾತರರಾಗಿದ್ದಾರೆ.

Leave A Reply

Your email address will not be published.