ವರನಿಗೆ 37, ವಧುವಿಗೆ 70 ವಯಸ್ಸು: ವೃದ್ಧೆಯ ಕೈ ಹಿಡಿದ ವ್ಯಕ್ತಿ! ಇಂತ ಪ್ರೇಮಕಥೆ ನೀವು ಕೇಳಿರೋಕೆ ಸಾಧ್ಯವಿಲ್ಲ
ಪ್ರೀತಿಗೆ ಕಣ್ಣಿಲ್ಲ, ಪ್ರೇಮದಲ್ಲಿ ಮುಳುಗಿದವರಿಗೆ ಜಗತ್ತು ಕಾಣದು. ಪ್ರೇಮದ ಮಾಯೆಯಲ್ಲಿ ಕಳೆದು ಹೋದವರಿಗೆ ಜಗದ, ಜನರ ಜೊತೆಗೆ ಯಾವುದೇ ಪ್ರಮೇಯ ಇಲ್ಲ ಎನ್ನುವಂತೆ ತಮ್ಮ ಲೋಕದಲ್ಲಿ ತಾವು ತೇಲುತ್ತಾ ಇರುತ್ತಾರೆ. ಅವರಿಗೆ ವಯಸ್ಸು, ಜಾತಿ, ಧರ್ಮ, ದೇಶ ಯಾವುವು ಸಹಾ ಗಡಿಗಳನ್ನು ಹಾಕಲಾರವು ಎಂದು ಹೇಳುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ಇಂತಹ ಪ್ರೇಮ ಕಥೆಗಳ ವಿಚಾರಗಳು ಸುದ್ದಿಯಾದಾಗ ಅದನ್ನು ನೋಡಿ, ತಿಳಿದುಕೊಂಡು ನಾವು ಅಚ್ಚರಿಯನ್ನು ಪಡುತ್ತೇವೆ. ಕೆಲವೊಂದು ವಿಚಿತ್ರ ಪ್ರೇಮ ಕಥೆಗಳು ನಮ್ಮನ್ನು ಆಲೋಚನೆಯಲ್ಲಿ ಮುಳುಗಿಸುವಂತೆ ಮಾಡುತ್ತವೆ ಎನ್ನುವುದು ಸಹಾ ವಾಸ್ತವವಾಗಿದೆ. ಅಂತಹುದೇ ಒಂದು ಪ್ರೇಮ ಕಥೆ ಪಾಕ್ ನಲ್ಲಿ ನಡೆದಿದ್ದು, ಸಖತ್ ಸುದ್ದಿಯಾಗಿದೆ.
ಈ ಪ್ರೇಮಕಥೆ ಖಂಡಿತ ವಿಚಿತ್ರವಾದುದೇ ಆಗಿದೆ. ಈ ಕಥೆಯ ನಾಯಕ ಇಫ್ತಿಕರ್ ನಾಯಕಿಯ ಹೆಸರು ಕಿಶ್ವರ್ ಬೇಬಿ. ಇಫ್ತಿಕರ್ ಬಾಲ್ಯದಲ್ಲೇ ಕಿಶ್ವರ್ ಬೇಬಿಯನ್ನು ಬಹಳ ಇಷ್ಟಪಟ್ಟಿದ್ದ, ಪ್ರೀತಿಸಿದ್ದ. ಇಫ್ತಿಕರ್ ಮತ್ತು ಕಿಶ್ವರ್ ಬೇಬಿ ನಡುವೆ ಪ್ರೇಮ ಚಿಗುರಿತ್ತು. ಇಬ್ಬರೂ ಒಬ್ಬರೊನ್ನಬ್ಬರು ಪ್ರೀತಿಸುತ್ತಿದ್ದರು. ವಯಸ್ಸು ಬೆಳೆಯುತ್ತಾ ಹೋದಂತೆ ಇಫ್ತಿಕರ್ ತಾನು ಕಿಶ್ವರ್ ಳನ್ನು ಪ್ರೇಮಿಸುತ್ತಿದ್ದ ವಿಚಾರವನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾನೆ. ಆದರೆ ಇಫ್ತಿಕರ್ ಮತ್ತು ಕಿಶ್ವರ್ ನಡುವೆ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದ್ದ ಕಾರಣ ಆತನ ತಾಯಿ ಅದನ್ನು ಒಪ್ಪಲಿಲ್ಲ.
ಹೀಗೆ ವಯಸ್ಸಿನ ನಡುವಿನ ಅಂತರವು ಇಫ್ತಿಕರ್ ಮತ್ತು ಕಿಶ್ವರ್ ಬೇಬಿಯನ್ನು ದೂರ ಮಾಡಿತ್ತು. ಜೀವನದ ಬೇರೊಂದು ದಿಕ್ಕಿಗೆ ತಿರುಗಿತು. ಇಫ್ತಿಕರ್ ಬೇರೊಂದು ಮದುವೆಯಾದ, ಆತನಿಗೆ ಆರು ಜನ ಮಕ್ಕಳಿದ್ದಾರೆ. ಆದರೆ ಮತ್ತೊಂದು ಕಡೆ ಕಿಶ್ವರ್ ಬೇಬಿ ಮಾತ್ರ ವಯಸ್ಸು 70 ಆದರೂ ಮದುವೆಯಾಗದೇ ಅವಿವಾಹಿತೆಯಾಗಿಯೇ ಉಳಿದು ಹೋಗಿದ್ದಾರೆ. ಈಗ ದಶಕಗಳ ನಂತರ ಈ ಪ್ರೇಮಿಗಳು ಮತ್ತೆ ಒಂದಾಗಿದ್ದಾರೆ. 37 ವರ್ಷದ ಇಫ್ತಿಕರ್ ಈಗ ಕಿಶ್ವರ್ ಬೇಬಿಯನ್ನು ಮದುವೆಯಾಗಿದ್ದಾರೆ. ಇಬ್ಬರು ಈಗ ಜೊತೆಯಾಗಿದ್ದಾರೆ. ಅದು ಮಾತ್ರವೇ ಅಲ್ಲದೇ ಹನಿಮೂನ್ ಗೆ ಹೋಗಲು ಅವರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.