ವಯಸ್ಸು 67 ಆದ್ರು ತಗ್ಗಲಿಲ್ಲ ಚಾರ್ಮ್: ಜನ್ಮ ದಿನದಂದೇ ಅಬ್ಬರಿಸಿದ ಮೆಗಾಸ್ಟಾರ್ ಚಿರಂಜೀವಿಗೆ ಅಭಿಮಾನಿಗಳ ಸಾಥ್

Entertainment Featured-Articles Movies News

ತೆಲುಗು ಸಿನಿಮಾ ರಂಗದಲ್ಲಿ ಹಿರಿಯ ನಟ, ದಿಗ್ಗಜ ನಟನಾಗಿ, ಅಭಿಮಾನಿಗಳಿಂದ ಮೆಗಾಸ್ಟಾರ್ ಎನ್ನುವ ಪಟ್ಟವನ್ನು ಪಡೆದುಕೊಂಡಿರುವ ಚಿರಂಜೀವಿ ಅವರಿಗೆ ಇಂದು ಅಂದರೆ ಆಗಸ್ಟ್ 22 ರಂದು ಜನ್ಮದಿನದ ಸಂಭ್ರಮ. ನಟನ ಜನ್ಮದಿನ ಎಂದ ಮೇಲೆ ಅವರ ಅಭಿಮಾನಿಗಳಿಗೆ ಇಂದು ಹಬ್ಬದ ದಿನವಿದ್ದಂತೆ ಎಂದರೆ ತಪ್ಪಾಗುವುದಿಲ್ಲ. ಅಭಿಮಾನಿಗಳು ತಮ್ಮ ಅಭಿಮಾನ ನಟನ ಜನ್ಮದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುವುದು ಉಂಟು. ಇನ್ನು ಇಂದು ಅಭಿಮಾನಿಗಳಿಗೆ ಖುಷಿಯನ್ನು ನೀಡಲು, ಅವರ ಸಂಭ್ರಮವನ್ನು ಹೆಚ್ಚಿಸಲು, ಚಿರಂಜೀವಿ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಗಾಡ್ ಫಾದರ್ ನ ಟೀಸರ್ ಬಿಡುಗಡೆಯಾಗಿದೆ.

ಗಾಡ್ ಫಾದರ್ ಸಿನಿಮಾ‌ ಮಲೆಯಾಳಂ ನ ಸೂಪರ್ ಹಿಟ್ ಸಿನಿಮಾ ಲೂಸಿಫರ್ ನ ತೆಲುಗು ರೀಮೇಕ್ ಆಗಿದ್ದು, ಈ ಸಿನಿಮಾದ ಒಂದು ಅತಿಥಿ ಪಾತ್ರದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಿದ್ದು , ಈ ಸಿನಿಮಾ ಮೂಲಕ ಸಲ್ಮಾನ್ ಖಾನ್ ದಕ್ಷಿಣ ಸಿನಿಮಾ ರಂಗಕ್ಕೆ ಎಂಟ್ರಿ ಯನ್ನು ನೀಡುತ್ತಿದ್ದಾರೆ. ಮಲೆಯಾಳಂ ನಲ್ಲಿ ನಟ ಮೋಹನ್ ಲಾಲ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಚಿರಂಜೀವಿ ನಿರ್ವಹಿಸುತ್ತಿದ್ದು, ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಅಭಿಮಾನಿಗಳು ಸಿನಿಮಾದ ಬಿಡುಗಡೆಯ ದಿನಕ್ಕೆ ಕಾಯುತ್ತಿದ್ದು, ಮೆಗಾಸ್ಟಾರ್ ಸಿನಿಮಾ ನೋಡಲು ಬಹಳ ಕಾತರರಾಗಿದ್ದಾರೆ.

ಈಗ ಅಭಿಮಾನಿಗಳ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡುವಂತೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ 70 ಲಕ್ಷಕ್ಕೂ ಮೀರಿದ ವೀಕ್ಷಣೆಗಳನ್ನು ಕಂಡಿದೆ ಟೀಸರ್. ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹಾಗೂ ಕಾಮೆಂಟ್ ಗಳು ಸಹಾ ಹರಿದು ಬರುತ್ತಿವೆ. ಸಿನಿಮಾದಲ್ಲಿ ದಕ್ಷಿಣ ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟೀಸರ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಗಾಡ್ ಫಾದರ್ ಸಿನಿಮಾವನ್ನು ಮೋಹನ್ ರಾಜ ನಿರ್ದೇಶನ ಮಾಡುತ್ತಿದ್ದಾರೆ.

ಮೆಗಾಸ್ಟಾರ್ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ಸೋಶಿಯಲ್ ಮೀಡಿಯಾಗಳಲ್ಲಿ ಅವರ ಅಭಿಮಾನಿಗಳು ಮಾತ್ರವೇ ಅಲ್ಲದೇ ಚಿತ್ರರಂಗದ ಅನೇಕ ಕಲಾವಿದರು, ಸ್ಟಾರ್ ಗಳು ಸಹಾ ನಟನಿಗೆ ಜನ್ಮ ದಿನದ ಶುಭಾಶಯವನ್ನು ಕೋರುತ್ತಿದ್ದಾರೆ. ಗಾಡ್ ಫಾದರ್ ಸಿನಿಮಾದ ಟೀಸರ್ ಅನ್ನು ಹಿಂದಿ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. 67 ವರ್ಷ ವಯಸ್ಸಾದರೂ ನಟನ ಮೇಲೆ ಅಭಿಮಾನಿಗಳಿಗೆ ಅಭಿಮಾನ ಕಡಿಮೆಯಾಗಿಲ್ಲ ಎನ್ನುವಂತೆ ಟೀಸರ್ ಗೆ ವೀಕ್ಷಣೆಗಳು ಹರಿದು ಬರುತ್ತಿರುವುದು ವಿಶೇಷವಾಗಿದೆ.

Leave a Reply

Your email address will not be published.