ವಯಸ್ಸಿನಲ್ಲಿ ತನಗಿಂತ ಚಿಕ್ಕವನಾದ ಬಾಯ್ ಫ್ರೆಂಡ್ ಗೆ ಈಕೆ ತಿಂಗಳಿಗೆ ಕೊಡ್ತಾಳೆ ಲಕ್ಷ ಲಕ್ಷ ಸಂಬಳ

Entertainment Featured-Articles News
43 Views

ಪ್ರೀತಿಗೆ ವಯಸ್ಸಿನ ಅಡ್ಡಿ ಇಲ್ಲ. ಯಾರಿಗೆ ಯಾರ ಮೇಲೆ ಬೇಕಾದರೂ ಪ್ರೀತಿ ಮೂಡಬಹುದಾಗಿದೆ. ಅದಕ್ಕೆ ಪ್ರೇಮ ಪಾಶದಲ್ಲಿ ಸಿಲುಕಿದವರು ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯ ವಯಸ್ಸಿನ ಬಗ್ಗೆ ಚಿಂತೆ ಮಾಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಇಬ್ಬರು ಪ್ರೇಮಿಗಳ ನಡುವೆ ವಯಸ್ಸಿನ ಅಂತರ ಬಹಳ ಹೆಚ್ಚಾಗಿರುವುದನ್ನು ನಾವು ನೋಡಬಹುದಾಗಿದೆ. ಆದರೆ ನೀವು ಪ್ರೇಮಿಸುತ್ತಿರುವ ಜೋಡಿಗಳಲ್ಲಿ ಒಬ್ಬ ಪಾರ್ಟ್ನರ್ ಇನ್ನೊಬ್ಬರಿಗೆ ಸಂಬಳ ನೀಡುವುದನ್ನು ಕೇಳಿದ್ದೀರಾ?? ಅಥವಾ ನೋಡಿದ್ದೀರಾ?? ಇ‌ಲ್ಲ ಎನ್ನುವುದಾದರೆ ಅಂತಹ ಒಂದು ವಿಲಕ್ಷಣ ವಿಚಾರವನ್ನು ನಾವಿಂದು ನಿಮಗೆ ಹೇಳಲಿದ್ದೇವೆ.

ಹೌದು ಇಂತಹ ಒಂದು ವಿಚಿತ್ರ ಪ್ರೇಮಕಥೆಯಲ್ಲಿ ಮಹಿಳೆಯೊಬ್ಬರು ತನಗಿಂತ ಹದಿನೈದು ವರ್ಷ ಚಿಕ್ಕ ವಯಸ್ಸಿನ ಯುವಕನನ್ನು ಪ್ರೀತಿಸುತ್ತಿದ್ದು, ಆತನಿಗೆ ಪ್ರತಿ ತಿಂಗಳು ಸುಮಾರು 11 ಲಕ್ಷ ರೂ. ವೇತನವನ್ನು ಪಾವತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೂಲಿ ಹೆಸರಿನ ಈ ಮಹಿಳೆ ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತನ್ನ ಬಾಯ್ ಫ್ರೆಂಡ್ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜೂಲಿ ಈ ವೇಳೆಯಲ್ಲಿ ತಾನು ತನ್ನ ಬಾಯ್ ಫ್ರೆಂಡ್ ಗೆ ವೇತನ ನೀಡುತ್ತಿದ್ದು ಅದರ ಬದಲಿಗೆ ಆತನಿಂದ ನನಗೆ ಬೇಕೆನಿಸಿದ ಕೆಲಸಗಳನ್ನು ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

ಅಂದರೆ ಮನೆಯನ್ನು ಸ್ವಚ್ಛವಾಗಿಡುವ ಕಾರ್ಯದಿಂದ ಹಿಡಿದು ಬೇರೆ ಕೆಲಸಗಳನ್ನು ಸಹಾ ಮಾಡಿಸುವುದಾಗಿ ಆಕೆ ಹೇಳಿದ್ದಾರೆ. ಜೂಲಿಯ ವಯಸ್ಸು 44 ಆಗಿದ್ದು ಆಕೆಯ ಬಾಯ್ ಫ್ರೆಂಡ್ ವಯಸ್ಸು 29 ವರ್ಷಗಳಾಗಿದೆ. ಜೂಲಿ ನನ್ನ ಬಾಯ್ ಫ್ರೆಂಡ್ ನಾನು ಹೇಳುವ ಎಲ್ಲಾ ಕೆಲಸಗಳನ್ನು ಮಾಡಬೇಕೆನ್ನುವ ಕಾರಣಕ್ಕೆ ನಾನು ಆತನಿಗೆ ದೊಡ್ಡ ಮೊತ್ತದ ಸಂಬಳವನ್ನು ನೀಡುತ್ತೇನೆ ಎಂದು ಹೇಳುತ್ತಾರೆ. ಆತನಿಂದ ಮನೆಯ ಸ್ವಿಮ್ಮಿಂಗ್ ಪೂಲ್ ನಿಂದ ಹಿಡಿದು, ಮನೆಯ ಎಲ್ಲಾ ಕೆಲಸಗಳನ್ನು ಸಹಾ ಮಾಡಿಸುತ್ತಾಳೆ ಎನ್ನಲಾಗಿದೆ.

ಜೂಲಿ ತಾನು ತನ್ನ ಬಾಯ್ ಫ್ರೆಂಡ್ ಬಯಸಿದ ಎಲ್ಲಾ ವಸ್ತುಗಳನ್ನು ಖರೀದಿ ಮಾಡಿ ತಂದು ಕೊಡುವುದಾಗಿ ಹೇಳುತ್ತಾರೆ. ಅಲ್ಲದೇ ಕೆಲವೊಂದು ತಿಂಗಳಲ್ಲಿ ಬಾಯ್ ಫ್ರೆಂಡ್ ಗಾಗಿ ಹದಿನೈದು ಲಕ್ಷದವರೆಗೂ ಖರ್ಚು ಮಾಡಿರುವುದಾಗಿಯೂ ಸಹಾ ಹೇಳಿದ್ದಾರೆ ಜೂಲಿ. ಅಲ್ಲದೇ ನಾನು ತಿಂಗಳಿಗೆ ಹನ್ನೊಂದು ಲಕ್ಷ ರೂ. ನೀಡುತ್ತಿದ್ದೇನೆ, ಆದರೂ ಕೆಲವೊಮ್ಮೆ ಆತ ಸ್ವಿಮ್ಮಿಂಗ್ ಪೂಲ್ ಸ್ವಚ್ಛ ಮಾಡುವುದು ಮರೆತು ಬಿಡುತ್ತಾನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *