ಬಾಹುಬಲಿ ಸಿನಿಮಾ ನಂತರ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸಾಹೋ ನಂತರ ಅವರ ಜನಪ್ರಿಯತೆ ಕೂಡಾ ಹೆಚ್ಚಾಯಿತು. ಇನ್ನು ಸದ್ಯಕ್ಕೆ ಅವರ ರಾಧೇ ಶ್ಯಾಮ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೆ, ಸಲಾರ್ ಹಾಗೂ ಆದಿ ಪುರುಷ್ ಅವರ ನಾಯಕತ್ವದಲ್ಲಿ ಚಿತ್ರೀಕರಣ ನಡೆಯುತ್ತಿರುವ ಇನ್ನೆರಡು ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ. ಒಂದು ಕಡೆ ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆಗಿ ಜನಪ್ರಿಯತೆ ಏನೋ ಪಡೆಯುತ್ತಿದ್ದಾರೆ, ಆದರೆ ಇನ್ನೊಂದೆಡೆ ಅದೇಕೋ ಉತ್ತರ ಭಾರತದ ಮಂದಿ ಪ್ರಭಾಸ್ ಅವರನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.
ಪ್ರಭಾಸ್ ಅವರ ಫಿಟ್ನೆಸ್ ವಿಚಾರವೇ ಈಗ ಟ್ರೋಲಿಗರ ಟ್ರೋಲ್ ಗೆ ಪ್ರಮುಖ ಕಾರಣವಾಗಿದೆ. ಇತ್ತೀಚಿಗೆ ನಟ ಪ್ರಭಾಸ್ ಅವರು ಕೊಂಚ ಫಿಟ್ನೆಸ್ ವಿಚಾರವಾಗಿ ಹಳಿ ತಪ್ಪಿದ್ದಾರೆ ಎನ್ನುವುದು ವಾಸ್ತವ. ಅಲ್ಲದೇ ಆದಿಪುರುಷ್ ಸಿನಿಮಾ ನಿರ್ದೇಶಕ ಓಂ ರಾವತ್ ಅವರು ಶ್ರೀರಾಮನ ಪಾತ್ರಕ್ಕೆ ಪ್ರಭಾಸ್ ದೇಹದ ತೂಕ ಹೊಂದಾಣಿಕೆ ಆಗುವುದಿಲ್ಲ ಎಂದು ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸುವ ನಿರ್ಧಾರವೊಂದನ್ನು ಮಾಡಿದ್ದಾರೆ ಎನ್ನುವ ಸುದ್ದಿ ಕೂಡಾ ಹೊರ ಬಂದಿತ್ತು.
ಇತ್ತೀಚಿಗೆ ಪ್ರಭಾಸ್ ಅವರ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಫೋಟೋದಲ್ಲಿ ಮೇಕಪ್ ಇಲ್ಲದೇ, ಸ್ವಲ್ಪ ಫ್ಯಾಟ್ ಕೂಡಾ ಹೆಚ್ಚಾದಂತೆ ಕಂಡಿದ್ದರು ಪ್ರಭಾಸ್. ದಕ್ಷಿಣದಲ್ಲಿ ಅವರನ್ನು ಹೆಚ್ಚಾಗಿ ಯಾವುದೇ ರೀತಿಯಲ್ಲಿ ಟ್ರೋಲ್ ಮಾಡುತ್ತಿಲ್ಲ. ಆದರೆ ಉತ್ತರದ ಮಂದಿ ಮಾತ್ರ ಹಿಯಾಳಿಸುವುದರಲ್ಲಿ ಹಾಗೂ ಟ್ರೋಲ್ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಪ್ರಭಾಸ್ ಅವರನ್ನು ಚೋಟಾ ಭೀಮ್ ಎಂದು ಕರೆದು ವ್ಯಂಗ್ಯ ಮಾಡಿದ್ದಾರೆ.
ಇದು ಮಾತ್ರವೇ ಅಲ್ಲದೇ ಈ ಹೀರೋಗಳು ವಯಸ್ಸಾದ ಮೇಲೆ ನಿವೃತ್ತಿ ಪಡೆಯಬೇಕು. ಇಲ್ಲವಾದರೆ ತಮಗೆ ಹೊಂದುವಂತಹ ಪಾತ್ರ ಮಾಡ ಬೇಕು. ಅದು ಬಿಟ್ಟು ತಮ್ಮ ಅರ್ಧ ವಯಸ್ಸಿನ ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡುವುದು ಸರಿಯಲ್ಲ ಎನ್ನುವ ಸಲಹೆಯನ್ನು ನೀಡಿದ್ದಾರೆ. ಕಾಮೆಂಟ್ ಗಳನ್ನು ಮಾಡಿ ಹೀಗಳೆಯುವುದು, ವ್ಯಂಗ್ಯ ಮಾಡುವುದು, ಟೀಕೆ ಮಾಡುವುದನ್ನು ಮುಂದುವರೆಸಿದ್ದಾರೆ. ಟ್ರೋಲ್ ಗಳ ಕಾಟ ಸದ್ಯಕ್ಕೆ ತಪ್ಪುವ ಹಾಗಿಲ್ಲ ಎನ್ನುವಂತಾಗಿದೆ.
ನಟ ಪ್ರಭಾಸ್ ಆದಿಪುರುಷ್ ಸಿನಿಮಾ ಮೂಲಕ ಬಾಲಿವುಡ್ ನಲ್ಲಿ ತಮ್ಮ ಚಾರ್ಮ್ ತೋರಿಸಲು ಸಜ್ಜಾಗಿದ್ದಾರೆ. ಇದೇ ವೇಳೆ ಟ್ರೋಲ್ ಗಳು ಒಂದು ರೀತಿಯಲ್ಲಿ ಪ್ರಭಾಸ್ ಅವರನ್ನು ಒಂದಲ್ಲಾ ಒಂದು ರೀತಿ ಪ್ರಚಾರದಲ್ಲಿ ಇರುವಂತೆ ಮಾಡುತ್ತಿದೆ ಎಂದು ಹೇಳಬಹುದಾಗಿದ್ದು, ಟ್ರೋಲ್ ಗಳ ಮೂಲಕವೇ ಆದಿಪುರುಷ್ ಸಿನಿಮಾಕ್ಕೆ ಭರ್ಜರಿ ಪ್ರಚಾರ ಸಿಕ್ಕರೂ ಆಶ್ಚರ್ಯ ಪಡಬೇಕಿಲ್ಲ. ಇನ್ನು ಪ್ರಭಾಸ್ ಅವರ ಈ ದೇಹ ತೂಕ ಹೆಚ್ಚಳಕ್ಕೆ ಕಾರಣ ತಿಳಿಯಲು ಹಾಗೂ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವುದು ಖಚಿತ ಎನ್ನಲಾಗಿದೆ.