ವದಂತಿಗಳೇ ನಿಜವಾಯ್ತು: ಡಿವೋರ್ಸ್ ನಿಜ ಎಂದು ಅಧಿಕೃತ ಘೋಷಣೆ ಮಾಡಿದ ಸಮಂತಾ ನಾಗಚೈತನ್ಯ

0
206

ಕಳೆದ ಕೆಲವು ದಿನಗಳಿಂದಲೂ ಸಹಾ ಟಾಲಿವುಡ್ ನ ಕ್ಯೂಟ್ ಕಪಲ್ ಸಮಂತಾ ಮತ್ತು ನಾಗ ಚೈತನ್ಯ ಅವರ ವೈವಾಹಿಕ ಜೀವನದ ವಿಷಯವೇ ದೊಡ್ಡ ಸುದ್ದಿಯಾಗಿತ್ತು. ಅವರ ನಡುವೆ ಸಮಸ್ಯೆ ಎದುರಾಗಿದ್ದು ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ಮೂಲಕ ಬೇರೆಯಾಗಲಿದ್ದಾರೆ ಎನ್ನುವ ಮಾತುಗಳು ಸುದ್ದಿಯಾಗಿತ್ತು. ಅಲ್ಲದೇ ಈ ಬಗ್ಗೆ ಎಷ್ಟೇ ಸುದ್ದಿಗಳು ಹರಿದಾಡಿದರೂ ಸಹಾ ಸಮಂತಾ ಅಥವಾ ನಾಗಚೈತನ್ಯ ಮಾತ್ರ ಅಧಿಕೃತವಾಗಿ ವಿಚ್ಛೇದನದ ಬಗ್ಗೆ ಏನನ್ನೂ ಹೇಳಲಿಲ್ಲ. ಮಾದ್ಯಮಗಳ ಮುಂದೆ ಆ ವಿಷಯ ಮಾತನಾಡಲೂ ಇಲ್ಲ. ಆದರೆ ಸಮಂತಾ ಕುಟುಂಬದ ಖುಷಿಯಲ್ಲಿ ಗೈರು ಹಾಜರಾಗಿದ್ದು ಅನುಮಾನಗಳನ್ನು ಮೂಡಿಸಿತ್ತು.

ಸಂದರ್ಶನಗಳಲ್ಲಿ ಸಹಾ ನಾಗಚೈತನ್ಯ ಮತ್ತು ಸಮಂತಾ ಇಬ್ಬರೂ ತಮ್ಮ ಸಂಬಂಧದ ವಿಷಯವಾಗಿ ಮಾತನಾಡಲು ಆಸಕ್ತಿಯನ್ನು ತೋರಲಿಲ್ಲ. ಆದರೆ ಇವೆಲ್ಲವುಗಳ ನಡುವೆಯೇ ಇದೆಲ್ಲಾ ಕೇವಲ ವದಂತಿಗಳು, ಅವರ ನಡುವೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಮಾತುಗಳು ಕೇಳಿ ಬಂದವು. ಆದರೆ ಈಗ ಈ ವದಂತಿಗಳನ್ನು ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಅಧಿಕೃತವಾಗಿ ವಾಸ್ತವ ಎಂದು ಒಪ್ಪಿಕೊಂಡಿದ್ದಾರೆ.

ನಾಗಚೈತನ್ಯ ಮತ್ತು ಸಮಂತಾ ಇಬ್ಬರೂ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಾವು ಬೇರೆ ಬೇರೆ ಯಾಗಲಿರುವ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಹೌದು, ಪೋಸ್ಟ್ ಶೇರ್ ಮಾಡಿರುವ ಸಮಂತಾ ಮತ್ತು ನಾಗಚೈತನ್ಯ ಅದರಲ್ಲಿ, ” ಹೆಚ್ಚು ಆಲೋಚನೆ ಮಾಡಿದ ನಂತರ ನಾವು ದೂರವಾಗಲು ನಿರ್ಧರಿಸಿದ್ದೇವೆ. ಗಂಡ ಮತ್ತು ಹೆಂಡತಿಯಾಗಿದ್ದ ನಾವು ಈಗ ನಮ್ಮದೇ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿದ್ದೇವೆ. ಸ್ನೇಹವೇ ನಮ್ಮ ಸಂಬಂಧದ ಹೂರಣ. ಒಂದು ದಶಕದಿಂದ ನಾವಿಬ್ಬರು ಸ್ನೇಹಿತರಾಗಿದ್ದದ್ದು ನಮ್ಮ ಅದೃಷ್ಟ.”

“ಈ ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಬೆಂಬಲವನ್ನು ನೀಡಿ ಹಾಗೂ ನಮ್ಮ ವೈಯಕ್ತಿಕ ಬದುಕನ್ನು ಗೌರವಿಸಲು ಅಭಿಮಾನಿಗಳು, ಹಿತೈಷಿಗಳು ಹಾಗೂ ಮಾಧ್ಯಮಗಳಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು’’ ಎಂದು ಬರೆದುಕೊಂಡು ತಮ್ಮ ವಿವಾಹ ಸಂಬಂಧವನ್ನು ಕೊನೆಗೊಳಿಸುವ ವಿಚಾರಕ್ಕೆ ಅಧಿಕೃತ ಮೊಹರನ್ನು ಒತ್ತಿದ್ದಾರೆ ಸಮಂತಾ ಮತ್ತು ನಾಗಚೈತನ್ಯ.

ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ನೀವು ಬೇರೆಯಾಗಬಾರದಿತ್ತು, ನಿಮ್ಮ‌ ಈ ನಿರ್ಧಾರವನ್ನು ನಮ್ಮಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ, ನಮ್ಮ‌ ಮನಸ್ಸಿಗೆ ಬಹಳ ನೋವಾಗುತ್ತಿದೆ. ಎಂದೆಲ್ಲಾ ಬರೆದುಕೊಂಡು ಅಭಿಮಾನಿಗಳು ಸಮಂತಾ ಮತ್ತು ನಾಗಚೈತನ್ಯ ಅವರ ನಿರ್ಧಾರದ ಬಗ್ಗೆ ತಮ್ಮ ಬೇಸರವನ್ನು ಹಾಗೂ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here