ವಂಚಕನ ಜೊತೆಗೆ ಆಪ್ತ ಒಡನಾಟವೇ ಮುಳುವಾಯ್ತಾ? ಸ್ಟಾರ್ ನಟನ ಸಿನಿಮಾದಿಂದ ನಟಿ ಹೊರಕ್ಕೆ!!!

Written by Soma Shekar

Published on:

---Join Our Channel---

ಬಹುಕೋಟಿ ವಂಚಕ ಸುಖೇಶ್ ಚಂದ್ರಶೇಖರ್ ಜೊತೆಗೆ ಬಾಲಿವುಡ್ ನ ಸ್ಟಾರ್ ನಟಿ ಜಾಕ್ವೆಲಿನಾ ಫರ್ನಾಂಡೀಸ್ ಒಡನಾಟದ ವಿಷಯ ಈಗ ಎಲ್ಲೆಡೆ ಜಗಜ್ಜಾಹೀರಾಗಿದೆ‌. ಈ ಒಡನಾಟದ ಕಾರಣದಿಂದಲೇ ನಟಿ ಎರಡು, ಮೂರು ಬಾರಿ ವಿಚಾರಣೆಯನ್ನು ಸಹಾ ಎದುರಿಸಬೇಕಾಯಿತು, ಈ ವಿಷಯ ಸಹಾ ದೊಡ್ಡ ಸುದ್ದಿಯಾಯಿತು. ಅಲ್ಲದೇ ಮಾದ್ಯಮಗಳಲ್ಲಿ ಸುಖೇಶ್ ಜೊತೆಗೆ ನಟಿಯು ಆಪ್ತವಾಗಿರುವ ಫೋಟೋಗಳು ವೈರಲ್ ಆಗಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಯಿತು. ಈ ಎಲ್ಲಾ ಬೆಳವಣಿಗೆಗಳ ನಂತರ ಜಾಕ್ವಿಲಿನಾ ಬಹಳ ಬೇಸರದಲ್ಲಿ ಇದ್ದಾರೆ ಎನ್ನಲಾಗಿದೆ.

ನಟಿ ಈ ವಿಚಾರವಾಗಿ ಮನಸ್ಸಿಗಾದ ವೇದನೆಯಿಂದ ಬೇರೆ ವಿಷಯಗಳ ಕಡೆಗೆ ಯಾವುದೇ ಆಸಕ್ತಿಯನ್ನು ತೋರದೇ, ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಸುಖೇಶ್ ಜೊತೆಗಿನ ಒಂದು ಖಾಸಗಿ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿಯು ಮಾದ್ಯಮಗಳಿಗೆ ತನ್ನ ಖಾಸಗಿ ಜೀವನಕ್ಕೆ ಸ್ಪೇಸ್ ನೀಡಿ, ಮಾದ್ಯಮ ಮಿತ್ರರೇ ನನ್ನ ಫೋಟೋಗಳನ್ನು ಶೇರ್ ಮಾಡಬೇಡಿ ಎನ್ನುವ ಮನವಿಯೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮಾಡಿಕೊಂಡಿದ್ದರು.

ಸುಖೇಶ್ ಹಾಗೂ ತನ್ನ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದರಿಂದ, ಎರಡು ಮೂರು ಬಾರಿ ವಿಚಾರಣೆಗೆ ಹಾಜರಾದ್ದರಿಂದ ನಟಿ ಜಾಕ್ವಿಲಿನಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ನಟಿ ಬಾಲಿವುಡ್ ನ ತಮ್ಮ ಹೊಸ ಸಿನಿಮಾ ಪ್ರಾಜೆಕ್ಟ್ ಗಳಿಂದ ಸಹಾ ಹೊರ ನಡೆದಿದ್ದಾರೆ ಎನ್ನುವುದು ತಿಳಿದು ಬಂದಿದೆ. ಇವೆಲ್ಲವುಗಳ ಬೆನ್ನಲ್ಲೇ ಇನ್ನೊಂದು ಹೊಸ ಸುದ್ದಿಯು ಸಹಾ ಸಿನಿಮಾ ಸುದ್ದಿ ಅಂಗಳದಿಂದ ಹೊರ ಬಂದಿದೆ.

ಹೌದು, ಟಾಲಿವುಡ್ ನಟ ನಾಗಾರ್ಜುನ ಅವರು ನಾಯಕನಾಗಿರುವ ದಿ ಘೋಸ್ಟ್ ಸಿ‌ನಿಮಾ ತಂಡವು ಈಗ ಈ ಸಿನಿಮಾದಿಂದ ನಟಿಯನ್ನು ಹೊರಗಿಟ್ಟಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಬಾಲಿವುಡ್ ನ ಕೆಲವು ಹೊಸ ಪ್ರಾಜೆಕ್ಟ್ ಗಳಿಂದ ಹೊರ ಬಂದಿರುವ ನಟಯಿಂದ ತಮಗೂ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ದಿ ಘೋಸ್ಟ್ ಚಿತ್ರತಂಡ ಮುಂಚಿತವಾಗಿಯೇ ನಟಿಯನ್ನು ತಮ್ಮ ಪ್ರಾಜೆಕ್ಟ್ ನಿಂದ ಕೈ ಬಿಟ್ಟಿದೆ ಎನ್ನಲಾಗುತ್ತಿದೆ.

ಆದರೆ ಜಾಕ್ವೆಲಿನಾ ಅವರನ್ನು ಸಿನಿಮಾದಿಂದ ಕೈ ಬಿಡಲು ಅಧಿಕೃತ ಕಾರಣವೇನೆಂದು ಚಿತ್ರತಂಡ ಏನೂ ಹೇಳಿಲ್ಲವಾದರೂ, ಅದಕ್ಕೆ ಕಾರಣ ಏನೆಂದು ಎಲ್ಲರಿಗೂ ತಿಳಿದೇ ಇದೆ. ಈ ಹಿಂದೆ ನಾಗಾರ್ಜುನ ಅವರ ಇದೇ ಸಿನಿಮಾಕ್ಕೆ ಕಾಜಲ್ ಅಗರ್ವಾಲ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಕಾಜಲ್ ಅಗರ್ವಾಲ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಕಾರಣ ಅವರ ಹೆಸರು ಕೈ ಬಿಡಲಾಗಿತ್ತು. ಅನಂತರ ಆ ಜಾಗಕ್ಕೆ ಜಾಕ್ವೆಲಿನಾ ಫರ್ನಾಂಡೀಸ್ ಆಗಮನವಾಗಿತ್ತು.

ಆದರೆ ಮತ್ತೊಂದು ಕಡೆ ಜಾಕ್ವಿಲಿನಾ ಫರ್ನಾಂಡೀಸ್ ಅವರಿಗೆ ಈ ಸಿನಿಮಾದಲ್ಲಿ ನಟಿಸಲು ಡೇಟ್ಸ್ ಸಮಸ್ಯೆ ಮತ್ತು ಸಂಭಾವನೆ ವಿಷಯದಲ್ಲಿ ಸಹಾ ಹೊಂದಾಣಿಕೆ ಆಗದ ಕಾರಣ, ಚಿತ್ರತಂಡ ಮತ್ತು ನಟಿಯು ಶಾಂತಿಯುತವಾಗಿ ದೂರಾಗುವ ನಿರ್ಧಾರವನ್ನು ಮಾಡಿದ್ದಾರೆ ಎಂದು ಕೂಡಾ ಹೇಳಲಾಗುತ್ತಿದೆ. ಒಟ್ಟಾರೆ ಸಿನಿಮಾ ಮಂದಿಯ ನಿರ್ಧಾರಗಳ ಹಿಂದಿನ ಕಾರಣಗಳು ಮಾತ್ರ ನಿಗೂಢ ಎನ್ನುವುದು ವಾಸ್ತವ.

Leave a Comment