ವಂಚಕನ ಜೊತೆಗಿತ್ತಾ ಈ ನಟಿಯ ನಂಟು: ಬಾಲಿವುಡ್ ಬೆಡಗಿಯ ಬಹುಕೋಟಿ ಆಸ್ತಿ ಆಯ್ತು ಜಫ್ತಿ!!

Entertainment Featured-Articles News

ವಂಚಕ ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣ ಕೆಲವು ದಿನಗಳ ಹಿಂದೆ ಮಾದ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಮುಖ್ಯ ಕಾರಣವಾಗಿದ್ದು ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗೆ ಬಾಲಿವುಡ್ ನ ಇಬ್ಬರು ಅಂದಗಾತಿಯರ ಹೆಸರು ತಳಕು ಹಾಕಿಕೊಂಡಿದ್ದು. ಹೌದು, ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನಾ ಫರ್ನಾಂಡೀಸ್ ಮತ್ತು ಡ್ಯಾನ್ಸರ್ ಮತ್ತು ನಟಿ ಸಹಾ ಆಗಿರುವ ನೋರಾ ಫತೇಹಿ ಹೆಸರುಗಳು ಈ ಪ್ರಕರಣದಲ್ಲಿ ಕೇಳಿ ಬಂದು, ಇಡಿ ಇಬ್ಬರು ನಟಿಯರನ್ನು ಕರೆಸಿ ವಿಚಾರಣೆ ನಡೆಸಿತ್ತು. ನೋರಾ ಹೆಸರು ಬೇಗ ಈ ಪ್ರಕರಣದಿಂದ ದೂರವಾಗಿದ್ದು ವಾಸ್ತವ.

ಆದರೆ ನಟಿ ಜಾಕ್ವೆಲಿನಾ ಫರ್ನಾಂಡೀಸ್ ಹಾಗೂ ಸುಕೇಶ್ ಚಂದ್ರಶೇಖರ್ ತೀರಾ ಆತ್ಮೀಯವಾಗಿ ಇರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮೇಲೆ ಈ ಇಬ್ಬರ ನಡುವೆ ಏನೋ ಇತ್ತು ಎನ್ನುವುದು ಸ್ಪಷ್ಟ ಆಯಿತು. ಆದರೆ ನಟಿ ಆತ ತಾನೊಬ್ಬ ನಿರ್ಮಾಪಕ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಎನ್ನುವ ಮಾತನ್ನು ಹೇಳಿದ್ದರು. ಇಡಿ ನಟಿಯನ್ನು ಹಲವು ಬಾರಿ ಈ ವಿಚಾರವಾಗಿ ಪ್ರಶ್ನೆ ಮಾಡಿತ್ತು. ಇವೆಲ್ಲವುಗಳ ನಂತರ ಇದೀಗ ಹೊಸ ಬೆಳವಣಿಗೆ ಒಂದು ನಡೆದಿದೆ.

ಹೌದು, ಜಾರಿ ನಿರ್ದೇಶನಾಲಯ ( ಇಡಿ ) ಬಾಲಿವುಡ್ ನಟಿ ಜಾಕ್ವೆಲಿನಾ ಫರ್ನಾಂಡೀಸ್ ಗೆ ಸೇರಿದ 7.27 ಕೋಟಿ ಮೌಲ್ಯದ ಆಸ್ತಿಯನ್ನು ಶನಿವಾರ ಜಫ್ತಿ ಮಾಡಿದೆ. ನಟಿಯು ಸುಲಿಗೆ ಮಾಡಿದ ಹಣದ ಫಲಾನಭವಿಯಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಜಾಕ್ವೆಲಿನಾ ಅವರ ಆಸ್ತಿಯನ್ನು ಜಫ್ತಿ ಮಾಡಲಾಗಿದೆ ಎಂದು ಇಡಿ ವಿವರಣೆಯನ್ನು ನೀಡಿದೆ. ಇದರಲ್ಲಿ ನಟಿಯ ಸ್ಥಿರ ಠೇವಣಿಗಳನ್ನು ಲಗತ್ತಿಸಲಾದ ಆಸ್ತಿಗಳು ಸೇರಿವೆ.

ಸುಕೇಶ್ ಚಂದ್ರಶೇಖರ್ ತಾನು ಬೇರೆಯವರನ್ನು ವಂಚಿಸಿ ಸುಲಿಗೆ ಮಾಡಿದ ಹಣದಲ್ಲಿ ನಟಿ ಜಾಕ್ವೆಲಿನಾ ಫರ್ನಾಂಡೀಸ್ ಅವರಿಗೆ 5.71 ಕೋಟಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದನು ಎನ್ನುವ ಬಗ್ಗೆ ಇಡಿ ಅಧಿಕಾರಿಗಳಿಗೆ ಸಾಕ್ಷಿ ದೊರೆತಿದೆ ಎನ್ನಲಾಗಿದೆ. ಸುಕೇಶ್ ನಟಿಗೆ ಮಾತ್ರವೇ ಅಲ್ಲದೇ ಅವರ ಕುಟುಂಬದವರಿಗೆ 173, 000 ಯುಎಸ್ ಡಾಲರ್ ಗಳು ಮತ್ತು 27,000 ಆಸ್ಟ್ರೇಲಿಯನ್ ಡಾಲರ್ ಗಳನ್ನು ನೀಡಿದ್ದ ಎಂದು ಸಹಾ ಹೇಳಲಾಗಿದೆ.

Leave a Reply

Your email address will not be published.