ಲೈವ್ ನಲ್ಲಿ ಅಭಿಮಾನಿ ಕೃತಿ ಕರಬಂಧಾನ ಇಂತ ಮುಜುಗರ ಹುಟ್ಸೋ ಪ್ರಶ್ನೇನಾ ಕೇಳೋದು? ಆದ್ರೂ ನಟಿ ಉತ್ತರ ಕೊಟ್ರು
ಸಿನಿಮಾ ಜಗತ್ತು ಎನ್ನುವುದೊಂದು ಮಾಯಾ ಲೋಕ ಇದ್ದಂತೆ. ಈ ಲೋಕದಲ್ಲಿ ಕಾಲಿಟ್ಟವರು ರಾತ್ರೋ ರಾತ್ರಿ ಸ್ಟಾರ್ ಗಳಾಗಿ ಬಿಡುತ್ತಾರೆ. ಸಹಜವಾಗಿಯೇ ಇಂದಿನ ಬಹುತೇಕ ಎಲ್ಲಾ ಸಿನಿಮಾ ನಟ ನಟಿಯರು ಕೂಡಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದಾರೆ. ಈ ಮೂಲಕ ಅವರು ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿಯುವುದು ಸಿನಿಮಾ ನಟ, ನಟಿಯರಿಗೆ ಒಂದು ಅನಿವಾರ್ಯತೆ ಎನ್ನುವಂತೆ ಆಗಿದೆ. ಅವರು ಅದನ್ನು ಬಿಟ್ಟು ದೂರ ಹೋದರೆ ಎಲ್ಲರಿಗಿಂತ ಹೆಚ್ಚು ಬೇಸರ ಪಟ್ಟುಕೊಳ್ಳುವುದು ಎಂದರೆ ಅದು ಅವರ ಅಭಿಮಾನಿಗಳು. ಆದ್ದರಿಂದಲೇ ನಟ ನಟಿಯರು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆಗೆ ಒಂದು ಸಂವಹನವನ್ನು ಹೊಂದಿರುತ್ತಾರೆ.
ನಟಿಯರು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಲೈವ್ ಬರುವ ಮೂಲಕ ತಮ್ಮ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಾರೆ. ಆದರೆ ಕೆಲವೊಮ್ಮೆ ನಟಿಯರ ಮುಂದೆ ಅಭಿಮಾನಿಗಳು ಇಡುವ ಪ್ರಶ್ನೆಗಳು ನಟಿಯರಿಗೆ ಮುಜುಗರ ಉಂಟು ಮಾಡಿ ಬಿಡುತ್ತದೆ. ಹೌದು ನಟಿ ಕೃತಿ ಕರಬಂಧ ಕೆಲವು ತಿಂಗಳ ಹಿಂದೆ ಇನ್ಸ್ಟಾಗ್ರಾಂ ನಲ್ಲಿ ಲೈವ್ ಬಂದ ವೇಳೆಯಲ್ಲಿ ಅವರ ಅಭಿಮಾನಿಗಳು ಅವರನ್ನು ಅವರ ಇಷ್ಟದ ವಿಷಯಗಳ ಕುರಿತಾಗಿ ಕೇಳಿದ್ದಾರೆ. ಅಲ್ಲದೇ ಅವರ ಅಭಿಮಾನಿಗಳಿಗಾಗಿ ಕೃತಿ ಹಾಡನ್ನು ಕೂಡಾ ಹಾಡುವ ಪ್ರಯತ್ನವನ್ನು ಮಾಡಿದ್ದಾರೆ.
ಆದರೆ ಈ ವೇಳೆ ಅಭಿಮಾನಿಯಿಂದ ಒಂದು ವಿಚಿತ್ರವಾದ ಪ್ರಶ್ನೆಯನ್ನು ಅವರು ಎದುರಿಸಬೇಕಾಯಿತು. ಹೌದು ಒಂದು ಪ್ರಶ್ನೆಯಲ್ಲಿ ಕೃತಿ ಅವರನ್ನು ನಿಮ್ಮಿಷ್ಟದ ಪೋ ರ್ನ್ ಸ್ಟಾರ್ ಎಂದು ಕೇಳಿದ್ದಾರೆ?? ಕೃತಿ ಆ ಪ್ರಶ್ನೆ ನಿರ್ಲಕ್ಷ್ಯ ಮಾಡದೇ ತಾನು ಪೋ ರ್ನ್ ನೀಡುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಅಲ್ಲದೇ ಎಂತಹ ಮೂರ್ಖರು ಇರುತ್ತಾರೆ ಎಂದು ಕೃತಿ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೃತಿ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ ಈ ವೀಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.