ಲೈಗರ್ ಸೋಲು, ಕಂಗೆಟ್ಟ ಚಿತ್ರತಂಡ, ಆದರೆ ನಾಯಕಿ ಅನನ್ಯಾಗೆ ಅದರ ಚಿಂತೆಯೇ ಇಲ್ಲ? ಇಟಲಿಯಲ್ಲಿ ನಟಿ ಫುಲ್ ಎಂಜಾಯ್!!

Entertainment Featured-Articles Movies News

ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಗೆ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ವಿಜಯ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಜೋಡಿಯಾಗಿ ಕಾಣಿಸಿಕೊಂಡ, ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಬಿಡುಗಡೆ ನಂತರ ನೀರಸ ಪ್ರತಿಕ್ರಿಯೆ ಪಡೆದು, ಹೀನಾಯ ಸೋಲನ್ನು ಕಂಡಾಗಿದೆ. ಸಿನಿಮಾ ಸೋಲಿನ ನಂತರ ನಟ ವಿಜಯ ದೇವರಕೊಂಡ, ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ಸಹ ನಿರ್ಮಾಪಕಿ ನಟಿ ಚಾರ್ಮಿ ಕೌರ್ ಎಲ್ಲರೂ ತಮ್ಮ ಬೇಸರವನ್ನು ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಚಾರ್ಮಿ ಸೋಶಿಯಲ್ ಮೀಡಿಯಾಗಳಿಂದ ಕೊಂಚ ಕಾಲ ದೂರ ಉಳಿಯುವ ನಿರ್ಧಾರವನ್ನು ಮಾಡಿದ್ದಾರೆ.

ನಿರ್ದೇಶಕ ಪೂರಿ ಜಗನ್ನಾಥ್ ಮುಂಬೈಗೆ ಗುಡ್ ಬೈ ಹೇಳಿ ಹೈದ್ರಾಬಾದ್ ಗೆ ವಾಪಸಾಗುತ್ತಿದ್ದಾರೆ. ಇನ್ನು ನಟ ವಿಜಯ ದೇವರಕೊಂಡ ತನ್ನ ಸಂಭಾವನೆ ವಾಪಸ್ಸು ನೀಡುವ ನಿರ್ಧಾರವನ್ನು ಮಾಡಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಸಿನಿಮಾದಲ್ಲಿನ ತನ್ನ ನಟನೆಯ ವಿಚಾರವಾಗಿ ಸಿಕ್ಕಾಪಟ್ಟೆ ಟ್ರೋಲ್ ಆದ ನಟಿ ಅನನ್ಯಾ ಪಾಂಡೆ ಮಾತ್ರ ಎಲ್ಲೂ ಕಾಣುತ್ತಿಲ್ಲ, ನಟಿ ಕೂಡಾ ಬೇಸರದಿಂದ ಮನೆ ಸೇರಿ ಬಿಟ್ಟರಾ? ನಟಿಗೆ ಈ ಸೋಲು ನೋವನ್ನು ನೀಡಿತೇನು? ಎಂದೆಲ್ಲಾ ನೀವು ಅಂದು ಕೊಂಡರೆ ಇದು ಅಕ್ಷರಶಃ ಸುಳ್ಳಾಗುತ್ತದೆ. ಏಕೆಂದರೆ ನಟಿ ಅನನ್ಯಾ ಪಾಂಡೆ ಇಟಲಿಯಲ್ಲಿ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ.

ಹೌದು, ಲೈಗರ್ ಸಿನಿಮಾ ನಂತರ ಬ್ರೇಕ್ ಪಡೆದಿರುವ ನಟಿ ಅನನ್ಯಾ ಪಾಂಡೆ ಇಟಲಿಗೆ ಹಾರಿದ್ದು, ಅಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾ ದಿನಗಳನ್ನು ಕಳೆಯುತ್ತಿದ್ದಾರೆ. ತಮ್ಮ ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಂಡು ನಟಿ ಖುಷಿ ಪಡುತ್ತಿದ್ದಾರೆ. ಇದೇ ವೇಳೆ ನೆಟ್ಟಿಗರು ಒಂದು ಕಡೆ ಸಿನಿಮಾ ಸೋಲಿನಿಂದ ಚಿತ್ರ ತಂಡ ಕಂಗೆಟ್ಟಿರುವಾಗ ನಾಯಕಿ ಅನನ್ಯಾ ಪಾಂಡೆ ಮಾತ್ರ ಯಾವುದೇ ಬೇಸರವೂ ಇಲ್ಲದೇ, ಖುಷಿಯಾಗಿ ದಿನಗಳನ್ನು ಕಳೆಯುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ ವೈರಲ್ ಆದ ಫೋಟೋಗಳನ್ನು ನೋಡಿ ಟೀಕೆಗಳನ್ನು ಸಹಾ ಮಾಡುತ್ತಿದ್ದಾರೆ.

ನಟಿಯು ಇಟಲಿಯ ಸುಪ್ರಸಿದ್ಧ ಸ್ಥಳಗಳಲ್ಲಿ ಸಂಚರಿಸುತ್ತಾ, ತನ್ನ ಅಂದವಾದ ಫೋಟೋಗಳನ್ನು, ತನ್ನ ಅನುಭವವನ್ನು ಹಂಚಿಕೊಂಡು ಖುಷಿ ಪಡುತ್ತಿದ್ದಾರೆ. ಬಿಕಿನಿ ಧರಿಸಿ ಹಾಟ್ ಹಾಟ್ ಪೋಸ್ ನೀಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ. ನಟಿಯ ಈ ವೈರಲ್ ಫೋಟೋಗಳನ್ನು ನೋಡಿ ಅಂತರ್ಜಾಲದಲ್ಲಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ಇದರಲ್ಲಿ ಪಾಸಿಟಿವ್ ಮಾತ್ರವೇ ಅಲ್ಲದೇ ನೆಗೆಟಿವ್ ಕಾಮೆಂಟ್ ಗಳು ಸಹಾ ಹರಿದು ಬರುತ್ತಿವೆ ಎನ್ನುವುದು ಸಹಾ ವಾಸ್ತವದ ವಿಷಯವಾಗಿದೆ.

Leave a Reply

Your email address will not be published.