ಲೈಗರ್ ಸೋಲಿನ ಬೆನ್ನಲ್ಲೇ ಪೂರಿ ಜಗನ್ನಾಥ್ ಗೆ ದೊಡ್ಡ ಶಾಕ್: ಸಹಾಯಕ ನಿರ್ದೇಶಕನ ನಿರ್ಧಾರಕ್ಕೆ ಕಂಗಾಲಾದ ನಿರ್ದೇಶಕ!
ಸಿನಿಮಾ ರಂಗದಲ್ಲಿ ಯಶಸ್ಸು ಎನ್ನುವುದು ಅದೃಷ್ಟ ದ ಆಟ ಇದ್ದಂತೆ. ಯಾವಾಗ, ಯಾವ ಸಿನಿಮಾ, ನಾಯಕ, ನಿರ್ದೇಶಕ ಸೂಪರ್ ಹಿಟ್ ಆಗಿ ಬಿಡುತ್ತಾರೆ ಎಂದು ಯಾರೂ ಊಹೆ ಮಾಡುವುದಕ್ಕೆ ಸಾಧ್ಯ ಇಲ್ಲ. ಬಿಡುಗಡೆಗೆ ಮುನ್ನ ನಟ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು ಅಭಿಮಾನಿಗಳು ಮತ್ತು ಚಿತ್ರ ತಂಡ. ನಟ ವಿಜಯ ದೇವರಕೊಂಡ ತಮ್ಮದೇ ಸ್ಟೈಲ್ ನಲ್ಲಿ ತಮ್ಮ ಸಿನಿಮಾ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಲಿದೆ, ನಾವೆಲ್ಲಾ ವಾಟ್ ಲಗಾದೇಂಗೆ ಎಂದು ಹೇಳಿಕೊಂಡು ಅಬ್ಬರಿಸಿದ್ದರು. ಆದರೆ ಬಿಡುಗಡೆ ನಂತರ ಸಿನಿಮಾಕ್ಕೆ ಪ್ರೇಕ್ಷಕರಿಂದ ಸಿಕ್ಕಿದ್ದು ನೀರಸ ಪ್ರತಿಕ್ರಿಯೆ, ಪರಿಣಾಮ ಸಿನಿಮಾ ಹೀನಾಯ ಸೋಲನ್ನು ಕಂಡಿದೆ.
ಸಿನಿಮಾ ಸೋಲಿನ ಹಿನ್ನೆಲೆಯಲ್ಲಿ ಈ ಸಿನಿಮಾದ ನಿರ್ದೇಶಕ ಪೂರಿ ಜಗನ್ನಾಥ್ ಅವರಿಗೂ ಸಹಾ ದೊಡ್ಡ ಹಿನ್ನಡೆ ಉಂಟಾಗಿದೆ. ಅವರ ಮೊದಲ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಸೋಲು ಕಂಡಿದ್ದು ಅವರಿಗೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಸಾಲದೆಂಬಂತೆ ಅವರ ಮುಂದಿನ ಪ್ರಾಜೆಕ್ಟ್ ಜನಗಣಮನ ಕ್ಕೆ ಸಹಾ ಬ್ರೇಕ್ ಬಿದ್ದಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಹೊಸ ಸುದ್ದಿಯೊಂದು ಹೊರ ಬಂದಿದ್ದು, ನಿರ್ದೇಶಕ ಪೂರಿ ಜಗನ್ನಾಥ್ ಅವರ ಸಹಾಯಕ ನಿರ್ದೇಶಕ ಸಾಯಿಕುಮಾರ್ ಆ ತ್ಮ ಹ ತ್ಯೆ ಗೆ ಶರಣಾಗಿದ್ದು, ಈ ವಿಚಾರ ನಿರ್ದೇಶಕ ಪೂರಿ ಜಗನ್ನಾಥ್ ಅವರಿಗೂ ಸಹಾ ಶಾ ಕ್ ನೀಡಿದೆ.
ಸಾಯಿ ಕುಮಾರ್ ಪೂರಿ ಜಗನ್ನಾಥ್ ಬಳಿ ಹಲವು ಸಿನಿಮಾಗಳಲ್ಲಿ ಕೆಲಸವನ್ನು ಮಾಡಿ, ಸಹಾಯಕ ನಿರ್ದೇಶಕರಾಗಿ ಸಾಕಷ್ಟು ಮನ್ನಣೆಯನ್ನು ಪಡೆದುಕೊಂಡಿದ್ದರು. ಸಾಯಿಕುಮಾರ್ ಅವರು ಸಾಲ ಬಾಧೆಯನ್ನು ತಾಳಲಾರದೇ ದುರ್ಗಂ ಹೊಂಡಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಯಿಕುಮಾರ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೋಲಿಸರು ಮಾಹಿತಿಯನ್ನು ನೀಡಿದ್ದಾರೆ. ಈ ವಿಷಯ ಇದೀಗ ಟಾಲಿವುಡ್ ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಲೈಗರ್ ನಂತರ ನಿರ್ದೇಶಕ ಪೂರಿ ಜಗನ್ನಾಥ್ ಅವರ ಪರಿಸ್ಥಿತಿ ಸಹಾ ಚೆನ್ನಾಗಿಲ್ಲ ಎನ್ನಲಾಗಿದೆ.