ಲೈಗರ್ ಸೋಲಿನ ಬೆನ್ನಲ್ಲೇ ತಾಯಿಯನ್ನು ಬೈದ ಕರ್ಮ ಎಂದ ನಿರೂಪಕಿ: ಮತ್ತೆ ಭುಗಿಲೆದ್ದ ವಿಜಯ್, ಅನಸೂಯ ಕೋಲ್ಡ್ ವಾರ್!!

Entertainment Featured-Articles Movies News
52 Views

ಟಾಲಿವುಡ್ ನ ಸೆನ್ಸೇಷನಲ್ ಯಂಗ್ ಹೀರೋ ವಿಜಯ ದೇವರಕೊಂಡ ಅಭಿನಯದ, ಭಾರೀ ನಿರೀಕ್ಷೆಗಳೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಅನಂತರ ಡಿಸಾಸ್ಟರ್ ಎನ್ನುವ ಟಾಕ್ ಗೆ ಗುರಿಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಅಸಮಾಧಾನವನ್ನು ಸಹಾ ವ್ಯಕ್ತಪಡಿಸಿದ್ದಾರೆ. ಆದರೆ ವಿಜಯ ದೇವರಕೊಂಡ ಅಭಿಮಾನಿಗಳು ಮಾತ್ರ ನಿರ್ದೇಶಕ ಪೂರಿ ಜಗನ್ನಾಥ್ ಅವರನ್ನು ಟ್ರೋಲ್ ಮಾಡುತ್ತಿದ್ದು, ಕಥೆಯಲ್ಲಿ ಸತ್ವ ಇಲ್ಲ, ವಿಜಯ ದೇವರಕೊಂಡ ಪಟ್ಟ ಶ್ರಮವೆಲ್ಲವನ್ನೂ ನಿರ್ದೇಶಕ ಪೂರಿ ಜಗನ್ನಾಥ್ ವ್ಯರ್ಥ ಮಾಡಿದ್ದಾರೆ ಎಂದು ಟೀಕೆ ಮಾಡಿರುವ ಅಭಿಮಾನಿಗಳು, ಆದರೆ ಇದೇ ವೇಳೆ ಲೈಗರ್ ಸೋಲನ್ನು ಕೆಲವರು ಸಂಭ್ರಮಿಸುತ್ತಿರುವಂತೆ ಕಂಡಿದೆ.

ಈ ವೇಳೆಯಲ್ಲಿ ತೆಲುಗು ಕಿರುತೆರೆಯ ಸ್ಟಾರ್ ನಿರೂಪಕಿ ಮತ್ತು ಸಿನಿಮಾ ನಟಿಯಾಗಿಯೂ ದೊಡ್ಡ ಜನಪ್ರಿಯತೆ ಪಡೆದಿರುವ ಅನಸೂಯ ಮಾಡಿರುವ ಒಂದು ಟ್ಚೀಟ್ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ನಿನ್ನೆಯಿಂದಲೂ ಸಹಾ ಸೋಶಿಯಲ್ ಟ್ಟಿಟರ್ ನಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ನಟ ವಿಜಯ ದೇವರಕೊಂಡ ಮತ್ತು ಆ್ಯಂಕರ್ ಅನಸೂಯ ನಡುವೆ ನಟನ ಅರ್ಜುನ್ ರೆಡ್ಡಿ ಸಿನಿನಾ ಬಂದಾಗಿನಿಂದಲೂ ಕೋಲ್ಡ್ ವಾರ್ ನಡೆಯುತ್ತಿದೆ. ಈಗ ಮತ್ತೊಮ್ಮೆ ಅದು ಸಿಡಿದಿದ್ದು, ಅನಸೂಯ ಟ್ವೀಟ್ ಸಖತ್ ಸದ್ದು ಮಾಡುತ್ತಲಿದೆ.‌ ಇಷ್ಟಕ್ಕೂ ಅನಸೂಯ ಮಾಡಿದ ಟ್ವೀಟ್ ಏನು ತಿಳಿಯೋಣ ಬನ್ನಿ.

ಲೈಗರ್ ಸಿನಿಮಾಕ್ಕೆ ನೀರಸ ಪ್ರತಿಕ್ರಿಯೆಗಳು ಬಂದ ಬೆನ್ನಲ್ಲೇ ಅನಸೂಯ ಟ್ವೀಟ್ ಮಾಡಿದ್ದು, ತಾಯಿಯನ್ನು ಕೆಟ್ಟ ಮಾತು ಅಂದಿದ್ದರ ಪರಿಣಾಮ ತಪ್ಪುವುದಿಲ್ಲ. ಕರ್ಮ ಅನ್ನೋದು ಕೆಲವು ಸಲ ಬರುವುದು ತಡವಾಗುತ್ತೇನೋ ಆದರೆ, ಅದು ಬರುವುದು ಮಾತ್ರ ಪಕ್ಕಾ!! ಎಂದು ಬರೆದುಕೊಂಡಿದ್ದಾರೆ. ಅನಸೂಯಾ ಮಾಡಿದ ಟ್ವೀಟ್ ಬಿರುಗಾಳಿಯಂತೆ ವೈರಲ್ ಆಗಿದೆ. ಆಕೆ ವಿಜಯ ದೇವರಕೊಂಡ ಹೆಸರನ್ನು ಹೇಳದೇ ಹೋದರೂ ಸಹಾ ಎಲ್ಲರಿಗೂ ಇದು ಅರ್ಥವಾಗಿದೆ. ಅಲ್ಲದೇ ನಿನ್ನೆಯಿಂದಲೂ ತನಗೆ ಬರುತ್ತಿರುವ ನೆಗೆಟಿವ್ ಕಾಮೆಂಟ್ ಗಳಿಗೂ ಸಹಾ ಅನಸೂಯ ಉತ್ತರಗಳನ್ನು ನೀಡುತ್ತಾ ಸಾಗಿದ್ದಾರೆ.

ವಿಜಯ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುವ ಡೈಲಾಗ್ ಗಳಿದ್ದು, ನಟ ಆಗ ಸಿನಿಮಾ ಪ್ರಚಾರದ ವೇಳೆ ಕೂಡಾ ಅದನ್ನು ಹೇಳಿದ್ದರು. ಅನಸೂಯ ಆಗ ಅದನ್ನು ವಿ ರೋ ಧಿಸಿದ್ದರು. ಸಂದರ್ಶನಗಳಲ್ಲಿ ಅದರ ಬಗ್ಗೆ ಮಾತನಾಡಿದ್ದರು. ಆಗ ನಟ ವಿಜಯ ದೇವರಕೊಂಡ, ಅನಸೂಯ ಪ್ರಚಾರ ಪಡೆಯಲು ಹಾಗೆಲ್ಲಾ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಅಲ್ಲಿಂದ ಅವರಿಬ್ಬರ ನಡುವೆ ಕೋಲ್ಡ್ ವಾರ್ ಆರಂಭವಾಗಿತ್ತು. ಈಗ ಅದು ಮತ್ತೊಮ್ಮೆ ಜನರ ಮುಂದೆ ಬಂದು ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *