ಲೈಗರ್ ಸೋಲಿನ ಪರಿಣಾಮ ನಿಂತೇ ಹೋಯ್ತು ವಿಜಯ ದೇವರಕೊಂಡ ಹೊಸ ಸಿನಿಮಾ? ಅಭಿಮಾನಿಗಳು ಶಾಕ್ !!

Entertainment Featured-Articles Movies News

ನಟ ವಿಜಯ ದೇವರಕೊಂಡ ಹಾಗೂ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಲೈಗರ್ ಸಿನಿಮಾ ಬರುತ್ತಿದೆ ಎಂದಾಗ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಈ ಸಿನಿಮಾ ಹುಟ್ಟು ಹಾಕಿದ್ದ ಕುತೂಹಲ, ನಟ ವಿಜಯ ದೇವರಕೊಂಡ ಸಿನಿಮಾ ಬಗ್ಗೆ ಹೇಳಿದ ವಿಚಾರಗಳು ಹೀಗೆ ಎಲ್ಲವೂ ಸಹಾ ಹೈಪ್ ಕ್ರಿಯೇಟ್ ಮಾಡಿತ್ತು. ಅಲ್ಲದೇ ಲೈಗರ್ ಸಿನಿಮಾ ಆರಂಭವಾದ ಬೆನ್ನಲ್ಲೇ ಇದೇ ನಿರ್ದೇಶಕ ಮತ್ತು ನಟನ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಜನಗಣಮನ ಘೋಷಣೆಯಾಗಿತ್ತು. ಮುಂಬೈನಲ್ಲಿ ನಾಯಕನ ಹೊರತಾಗಿ ನಾಯಕಿ ಹಾಗೂ ಇತರೆ ಕಲಾವಿದರೊಂದಿಗೆ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆದಿತ್ತು.

ಜನಗಣಮನ ಸಿನಿಮಾದ ಬಗ್ಗೆ ಸಹಾ ಸಾಕಷ್ಟು ಕುತೂಗಲ ಮೂಡಿಸಿತ್ತು‌. ಲೈಗರ್ ಸಿನಿಮಾ ನಂತರ ಜನಗಣಮನ ಸಿನಿಮಾ ಚಿತ್ರೀಕರಣ ಬಹಳ ಜೋರಾಗಿ ನಡೆಯಲಿದೆ ಎನ್ನುವ ನಿರೀಕ್ಷೆಗಳಿದ್ದವು. ಆದರೆ ಎಲ್ಲವೂ ಅಂದುಕೊಂಡಂತೆ ಆಗಿಲ್ಲ. ಬಹು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿದ್ದ ಲೈಗರ್ ಮೊದಲನೇ ಶೋ ನಂತರವೇ ನೆಗೆಟಿವ್ ರಿವ್ಯೂಗಳು ಬರಲು ಆರಂಭಿಸಿದವು. ಸಿನಿಮಾ ಹೀನಾಯ ಸೋಲನ್ನು ಅನುಭವಿಸಿತು. ನಟನ ಅತಿಯಾದ ಆತ್ಮವಿಶ್ವಾಸ, ನಿರ್ದೇಶಕನು ಪೂರ್ವ ತಯಾರಿ ಮಾಡಿಲ್ಲ, ನಾಯಕಿಯ ನಟನೆ ತೀರಾ ಕೆಟ್ಟದ್ದಾಗಿದೆ, ಹಳೆ ಕಥೆಗೆ ಹೊಸ ರೂಪ ಎಂದೆಲ್ಲಾ ಟೀಕೆಗಳು ಹರಿದು ಬಂದವು.

ಸಿನಿಮಾಕ್ಕೆ ಹಾಕಿದ ಬಂಡವಾಳ ಸಹಾ ಬರಲಿಲ್ಲ ಎಂದು ಸುದ್ದಿಯಾಗಿದೆ‌. ಅಲ್ಲದೇ ಸಿನಿಮಾ ಸೋಲಿನ ಹೊಣೆಗಾರಿಕೆಯನ್ನು ನಟ ವಿಜಯ ದೇವರಕೊಂಡ ಮತ್ತು ನಿರ್ದೇಶಕ ಪೂರಿ ಜಗನ್ನಾಥ್ ತಮ್ಮದೇ ಎಂದಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಮತ್ತೊಂದು ಹೊಸ ಸುದ್ದಿ ಹೊರ ಬಂದಿದೆ. ಅದೇನೆಂದರೆ ಲೈಗರ್ ಸಿನಿಮಾ ವೇಳೆಯೇ ಅದು ಸೇರಿ ಒಟ್ಟು ಮೂರು ಸಿನಿಮಾಗಳನ್ನು ಮಾಡಲು ಪೂರಿ ಜಗನ್ನಾಥ್ ಮತ್ತು ವಿಜಯ ದೇವರಕೊಂಡ ಯೋಜನೆ ಸಿದ್ಧ ಮಾಡಿಕೊಂಡಿದ್ದರು. ಅದರಲ್ಲಿ ಎರಡನೆಯದು ಜನಗಣಮನ ಸಿನಿಮಾ. ಅದಕ್ಕೆ ಚಾಲನೆ ಸಹಾ ನೀಡಲಾಗಿತ್ತು.

ಆದರೆ ಈಗ ಬಂದಿರುವ ಹೊಸ ಸುದ್ದಿಗಳ ಪ್ರಕಾರ ನಟ ಮತ್ತು ನಿರ್ದೇಶಕ ಇಬ್ಬರೂ ಸಹಾ ನಿರ್ಧಾರವೊಂದನ್ನು ಮಾಡಿದ್ದು, ಅದರ ಅನ್ವಯ ಜನಗಣಮನ ಸಿನಿಮಾವನ್ನು ನಿಲ್ಲಿಸಲಾಗಿದೆ ಎನ್ನಲಾಗಿದೆ‌. ಹೊಸ ಸಿನಿಮಾ ನಿರ್ಮಾಣಕ್ಕೆ ಬಜೆಟ್ ಕೊರತೆ ಉಂಟಾಗಿರುವ ಕಾರಣದಿಂದಾಗಿಯೇ ಸಿನಿಮಾವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ. ಇದೇ ವೇಳೆ ಅವರು ಈ ಸಿನಿಮಾ ಮಾಡುವುದಿಲ್ಲ ಎನ್ನುವ ಸುದ್ದಿಗಳು ಸಹಾ ಹರಡಿವೆ. ನಟ ವಿಜಯ ದೇವರಕೊಂಡ ಸಹಾ ಜನಗಣ ಮನ ಸಿನಿಮಾ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ‌

Leave a Reply

Your email address will not be published.