ಲೈಗರ್ ನಟಿ ಅನನ್ಯಾ ನಟನೆಗೆ ಬೆಚ್ಚಿದ ನಿರ್ಮಾಪಕರು: ಸ್ಟಾರ್ ನಟನ ಸಿನಿಮಾದಿಂದ ನಟಿ ಹೊರಕ್ಕೆ!!

Entertainment Featured-Articles Movies News

ಟಾಲಿವುಡ್ ನಟ ವಿಜಯ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೋಡಿಯಾಗಿ ನಟಿಸಿದ ಬಿಡುಗಡೆಗೆ ಮುನ್ನ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ, ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾ ಬಿಡುಗಡೆ ಆದ ದಿನವೇ ಜನರಿಂದ ನಕಾರಾತ್ಮಕ ಪ್ರತಿಕ್ರಿಯೆಗಳು ಹರಿದು ಬಂದಿದ್ದವು. ಸಿನಿಮಾ ನೋಡಿದ ವಿಮರ್ಶಕರು ಸಹಾ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂ ಗಳನ್ನು ನೀಡಿದ್ದರು. ಸಿನಿಮಾ ಆತುರವಾಗಿ ನಿರ್ಮಾಣ ಮಾಡಿದ ಹಾಗಿದೆ. ಕಥೆಗೆ ಪ್ರಾಮುಖ್ಯತೆ ನೀಡಿಲ್ಲ ಎಂದೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿದೆ. ಇವೆಲ್ಲವುಗಳ ನಡುವೆ ಅತಿ ಹೆಚ್ಚು ಟ್ರೋಲ್ ಆಗಿದ್ದು ಅಥವಾ ಸಿನಿಮಾ ನಂತರ ಸಿಕ್ಕಾಪಟ್ಟೆ ಚರ್ಚೆಯಾಗಿದ್ದು ಯಾರು ಎನ್ನುವುದಾದರೆ ಅದು ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಬಾಲಿವುಡ್ ನಟಿ ಅನನ್ಯಾ ಪಾಂಡೆ.

ಬಾಲಿವುಡ್ ನಟಿ ಅನನ್ಯಾ ಪಾಂಡೆಯನ್ನು ಈ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯ ಮಾಡಲಾಗಿತ್ತು. ಅಲ್ಲದೇ ನಟಿ ಪೂರಿ ಜಗನ್ನಾಥ್ ಸಹಾ ಈ ಹಿಂದೆ ಒಮ್ಮೆ ಸಂದರ್ಶನದಲ್ಲಿ ಈ ಸಿನಿಮಾಕ್ಕೆ ಮೊದಲ ಆಯ್ಕೆ ಜಾನ್ವಿ ಕಪೂರ್ ಆಗಿದ್ದರು ಆದರೆ ಡೇಟ್ ಹೊಂದಾಣಿಕೆ ಆಗದ ಕಾರಣ ಕರಣ್ ಜೋಹರ್ ಅವರ ಸಲಹೆಯಂತೆ ಅನನ್ಯಾ ಪಾಂಡೆಯನ್ನು ನಾಯಕಿಯನ್ನಾಗಿ ಮಾಡಲಾಯಿತು. ಅನನ್ಯಾ ಸಹಾ ಉತ್ತಮ ಅಭಿನಯ ನೀಡಿದ್ದಾರೆ ಎಂದಿದ್ದರು. ಆದರೆ ಸಿನಿಮಾ ನೋಡಿದ ನಂತರ ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ನಿರ್ದೇಶಕನ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿತ್ತು.

ಲೈಗರ್ ಸಿನಿಮಾ ನೋಡಿದ ನಂತರ ಪ್ರೇಕ್ಷಕರು ಹಾಗೂ ವಿಮರ್ಶಕರಿಗೆ ಅನನ್ಯಾ ಪಾಂಡೆ ನಟನೆ ಇಷ್ಟವಾಗಿಲ್ಲ. ಅನೇಕರು ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ನಟಿ ನಟನೆಯ ಕುರಿತಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ನಟಿಗೆ ಆಸ್ಕರ್ ನೀಡಿ ಎಂದು ವ್ಯಂಗ್ಯ ಮಾಡಲಾಗಿದೆ.‌ ಇವೆಲ್ಲವುಗಳ ಬೆನ್ನಲ್ಲೇ ಬಾಲಿವುಡ್ ಬೆಡಗಿಯನ್ನು ತಮ್ಮ ಹೊಸ ಸಿನಿಮಾಗಳಿಗೆ ನಾಯಕಿ ಯನ್ನಾಗಿ ಮಾಡಬೇಕು ಎಂದು ಆಲೋಚನೆ ಮಾಡಿದ್ದ ನಿರ್ಮಾಪಕರು ಮತ್ತು ನಿರ್ದೇಶಕರು ಲೈಗರ್ ನಲ್ಲಿ ಅನನ್ಯಾ ನಟನೆ ನೋಡಿ ಬೆಚ್ಚಿ ಬಿದ್ದಿದ್ದಾರೆ ಎನ್ನುವ ಸುದ್ದಿಯೊಂದು ಹರಡಿದೆ.

ಲೈಗರ್ ನಂತರ ನಟಿ ಅನನ್ಯಾ ಪಾಂಡೆಯನ್ನು ಇದೀಗ ಸ್ಟಾರ್ ನಟನ ಸಿನಿಮಾವೊಂದರಿಂದ ಕೈ ಬಿಡಲಾಗಿದೆ ಎಂದು ಹೊಸ ಸುದ್ದಿಯೊಂದು ಈಗ ಸದ್ದು ಮಾಡುತ್ತಿದೆ. ಬಾಲಿವುಡ್ ನ ಹಿರಿಯ ನಟ ಚಂಕಿ ಪಾಂಡೆ ಮಗಳು, ಸ್ಟಾರ್ ಕಿಡ್ ಎನ್ನುವ ಕಾರಣ ಮತ್ತು ಕರಣ್ ಜೋಹರ್ ಪ್ರೋತ್ಸಾಹ ಎನ್ನುವಂತೆ ಅನನ್ಯಾ ಪಾಂಡೆಗೆ ಅವಕಾಶಗಳು ಸಿಕ್ಕಿದ್ದವು. ಲೈಗರ್ ಸಿನಿಮಾ ನಂತರ ಜೂನಿಯರ್ ಎನ್ ಟಿ ಆರ್ ಅವರ ಹೊಸ ಸಿನಿಮಾಕ್ಕೆ ನಿರ್ಮಾಪಕರು ಅನನ್ಯಾ ಪಾಂಡೆಯನ್ನು ನಾಯಕಿಯನ್ನಾಗಿ ಮಾಡುವ ಆಲೋಚನೆಯಲ್ಲಿ ಇದ್ದರು ಮತ್ತು ನಟಿಗೆ ಆಫರ್ ನೀಡಿದ್ದರು ಎನ್ನಲಾಗಿತ್ತು.

ಆದರೆ ಅನನ್ಯಾ ಪಾಂಡೆ ಲೈಗರ್ ನಂತರ ನಿರ್ಧಾರ ಮಾಡುವುದಾಗಿ ಹೇಳಿದ್ದರು. ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ನಟಿ ಅನನ್ಯ ಪಾಂಡೆಯ ನಟನೆ ಹಾಗೂ ಅದಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿದ ನಂತರ ಎನ್ ಟಿ ಆರ್ ಅವರ ಮೂವತ್ತನೇ ಸಿನಿಮಾಕ್ಕೆ ನಿರ್ಮಾಪರು ಅನನ್ಯಾ ಪಾಂಡೆ ಬೇಡವೇ ಬೇಡ, ಬೇರೊಬ್ಬ ನಾಯಕಿಯನ್ನು ಆಯ್ಕೆ ಮಾಡೋಣ ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದ್ದು, ಅನನ್ಯಾ ಪಾಂಡೆ ಸ್ಟಾರ್ ನಟನ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದಾರೆ.

Leave a Reply

Your email address will not be published.