ಲೈಗರ್ ಆಫರ್ ರಿಜೆಕ್ಟ್ ಮಾಡಿದ್ದ ಆ ಸ್ಟಾರ್ ನಟ: ವಿಜಯ್ ನಿರ್ದೇಶಕನ ಮೊದಲ ಆಯ್ಕೆ ಆಗಿರಲಿಲ್ವಂತೆ!! ಶಾಕಿಂಗ್ ಸುದ್ದಿ

Entertainment Featured-Articles Movies News

ನೂರು ನಿರೀಕ್ಷೆಗಳೊಂದಿಗೆ, ಹೊಸ ದಾಖಲೆಯನ್ನು ಬರೆಯುವ ಸಿನಿಮಾ ಆಗಲಿದೆ ಎನ್ನುವ ಅಬ್ಬರಿದಿಂದ ಇತ್ತೀಚಿಗೆ ತೆರೆ ಕಂಡ ಸಿನಿಮಾ ಲೈಗರ್. ಟಾಲಿವುಡ್ ನ ಯುವ ಸ್ಟಾರ್ ನಟ ವಿಜಯ ದೇವರಕೊಂಡ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಲೈಗರ್ ಸಿನಿಮಾ ಬಿಡುಗಡೆ ಮುನ್ನ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಸಿನಿಮಾ ಪ್ರಚಾರ ಕಾರ್ಯ ಸಹಾ ಬಹಳ ಜೋರಾಗಿಯೇ ನಡೆದಿತ್ತು. ಆದರೆ ಬಿಡುಗಡೆ ನಂತರ ಸಿನಿಮಾ ಸೋಲನ್ನು ಕಂಡಿದೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿಲ್ಲ. ವಿಜಯ ದೇವರಕೊಂಡ ಅಭಿಮಾನಿಗಳು ಸಹಾ ನಿರಾಸೆಯನ್ನು ಕಂಡಿದ್ದಾರೆ.

ಈ ಸಿನಿಮಾದ ಸೋಲಿನ ಬೆನ್ನಲ್ಲೇ ಈಗ ಹೊಸ ವಿಷಯವೊಂದು ಬಹಳ ಸದ್ದು ಮಾಡಿದೆ. ಹೌದು, ಟಾಲಿವುಡ್ ನಲ್ಲಿ ಹರಿದಾಡಿರುವ ಸುದ್ದಿಗಳ ಪ್ರಕಾರ ಲೈಗರ್ ಸಿನಿಮಾಕ್ಕೆ ನಟ ವಿಜಯ ದೇವರಕೊಂಡ ನಿರ್ದೇಶಕ ಪೂರಿ ಜಗನ್ನಾಥ್ ಅವರ ಮೊದಲ ಆಯ್ಕೆ ಆಗಿರಲಿಲ್ಲ ಎನ್ನಲಾಗಿದೆ‌. ಪೂರಿ ಜಗನ್ನಾಥ್ ಅವರ ಮೊದಲ ಆಯ್ಕೆ ತೆಲುಗಿನ ಒಬ್ಬ ಸ್ಟಾರ್ ನಟನಾಗಿದ್ದು, ಆ ನಟ ಸಿನಿಮಾ ಮಾಡಲು ಒಪ್ಪದ ಕಾರಣ ಅನಂತರ ನಿರ್ದೇಶಕ ಈ ಸಿನಿಮಾಕ್ಕೆ ನಾಯಕನಾಗಿ ನಟ ವಿಜಯ ದೇವರಕೊಂಡ ಅವರನ್ನು ಸಂಪರ್ಕಸಿದರು ಎನ್ನಲಾಗಿದೆ.‌ ಹಾಗಾದರೆ ಲೈಗರ್ ಸಿನಿಮಾ ಮಾಡಬೇಕಿದ್ದ ಆ ಸ್ಟಾರ್ ನಟ ಯಾರು? ತಿಳಿಯೋಣ ಬನ್ನಿ.

ಪೂರಿ ಜಗನ್ನಾಥ್ ಈ ಹಿಂದೆ ಆ ಸ್ಟಾರ್ ನಟನಿಗೆ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು ಎಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಹೌದು, ಲೈಗರ್ ಗೆ ನಟ ಪೂರಿ ಜಗನ್ನಾಥ್ ಅವರ ಮೊದಲ ಆಯ್ಕೆ ಆಗಿದ್ದ ನಟ ಟಾಲಿವುಡ್ ನ ಪ್ರಿನ್ಸ್ ಖ್ಯಾತಿಯ ಮಹೇಶ್ ಬಾಬು ಆಗಿದ್ದರು ಎನ್ನಲಾಗಿದೆ. ಈ ಹಿಂದೆ ಮಹೇಶ್ ಬಾಬು ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಬಂದಿದ್ದ ಪೋಕಿರಿ ಸಿನಿಮಾ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ದಾಖಲೆಗಳನ್ನು ಬರೆದು ಸದ್ದು ಮಾಡಿತ್ತು. ಪೋಕಿರಿ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿತ್ತು.

ಇದಾದ ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಸಿನಿಮಾ ಬ್ಯುಸಿನೆನ್ ಮ್ಯಾನ್, ಹೀಗೆ ಎರಡು ಸಿನಿಮಾಗಳಲ್ಲಿ ಮಹೇಶ್ ಬಾಬು ಮತ್ತು ಪೂರಿ ಜಗನ್ನಾಥ್ ಕಾಂಬಿನೇಶನ್ ಯಶಸ್ಸನ್ನು ಪಡೆದಿತ್ತು. ಅದೇ ಕಾರಣದಿಂದ ವರ್ಷಗಳ ನಂತರ ಮತ್ತೊಮ್ಮೆ ಒಂದು ಹೊಸ ದಾಖಲೆ ಬರೆಯಲು, ಜನರ ಮೆಚ್ಚುಗೆ ಪಡೆದು ಮ್ಯಾಜಿಕ್ ಮಾಡಬೇಕೆಂದು ಪೂರಿ ಜಗನ್ನಾಥ್ ಅವರು ಲೈಗರ್ ಸಿನಿಮಾ ವಿಚಾರವಾಗಿ ನಟ ಮಹೇಶ್ ಬಾಬು ಅವರನ್ನು ಸಂಪರ್ಕಿಸಿದ್ದರು. ಆದರೆ ಮಹೇಶ್ ಬಾಬು ಅವರು ಕೆಲವೊಂದು ಕಾರಣಗಳಿಂದ ಸಿನಿಮಾ ರಿಜೆಕ್ಟ್ ಮಾಡಿದ್ದರು ಎನ್ನಲಾಗಿದ್ದು, ನಂತರ ಅದು ವಿಜಯ ದೇವರಕೊಂಡ ಪಾಲಿಗೆ ಬಂದಿತ್ತು.

Leave a Reply

Your email address will not be published.