ಲೈಗರ್: ಅರೆ ಬೆತ್ತಲಾದ ವಿಜಯ್ ದೇವರಕೊಂಡಗೆ ಬಟ್ಟೆ ಹಾಕಿದ ನೆಟ್ಟಿಗರು: ವೈರಲ್ ಆಯ್ತು ಫೋಟೊ ಗಳು

Entertainment Featured-Articles Movies News

ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಪೋಸ್ಟರ್ ಬಿಡುಗಡೆಯ ನಂತರ ನಟ ಹಿಂದೆಂದೂ ಕಾಣಿಸಿಕೊಳ್ಳದಂತಹ ಒಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಅದೇ ವೇಳೆ ಈ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಗೆ ಸಹಾ ಗುರಿಯಾಗಿದೆ. ಇನ್ನೊಂದು ಕಡೆ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳಿಂದ ನಟನ ಬೋಲ್ಡ್ ಲುಕ್ ಗೆ ಮೆಚ್ಚುಗೆಗಳು ಪ್ರವಾಹದಂತೆ ಹರಿದು ಬರುತ್ತಿದೆ. ಪೋಸ್ಟರ್ ನಲ್ಲಿ ಕೈಗೆ ಗ್ಲೌಸ್ ಮಾತ್ರ ಧರಿಸಿರುವ ಮೈಮೇಲೆ ಬಟ್ಟೆ ಧರಿಸಿಲ್ಲ, ಬದಲಾಗಿ ಖಾಸಗಿ ಭಾಗವನ್ನು ಹೂವಿನಿಂದ ಮುಚ್ಚಿಕೊಂಡಿದ್ದಾರೆ.

ಈ ಫೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಯುವ ನಾಯಕ ನಟನ ಬೋಲ್ಡ್ ಫೋಟೋ ಸೆನ್ಸೇಷನ್ ಆಗಿದ್ದು, ನಟನ ಅರೆ ನ ಗ್ನ ಫೋಟೋಗೆ ಸೆ ಕ್ಸಿ ಯೆಸ್ಟ್ ಪೋಸ್ಟರ್ ಎನ್ನುವ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಟ್ರೆಂಡ್ ಸೃಷ್ಟಿಸಿದೆ. ಪೋಸ್ಟರ್ ವೈರಲ್ ಆದ ಕೆಲವೇ ಗಂಟೆಗಳಲ್ಲಿ ನೆಟ್ಟಿಗರು ಸಹಾ ನಟನ ಹೊಸ ಲುಕ್ ಗೆ ಫಿದಾ ಆಗಿ ತಮ್ಮ ಮೆಚ್ಚುಗೆಯನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ ಹಾಗೂ ಕೆಲವರಂತೂ ಅರೆ ನ ಗ್ನ ಅವತಾರದಲ್ಲಿ ಕಾಣಿಸಿಕೊಂಡ ನಟನಿಗೆ ಬಟ್ಟೆ ಹಾಕುವ ಕೆಲಸವನ್ನು ಸಹಾ ಮಾಡಿದ್ದಾರೆ.

ಹೌದು, ಟ್ರೋಲ್ ಮಾಡುವುದರ ಜೊತೆಗೆ ನಟನ ಪೋಸ್ಟರ್ ಅನ್ನು ಮರುಸೃಷ್ಟಿ ಮಾಡುತ್ತಿದ್ದಾರೆ. ಇದರಲ್ಲಿ ವಿ ವಸ್ತ್ರ ಆಗಿದ್ದ ನಟನ ಮೈಮೇಲೆ ಬಟ್ಟೆಯನ್ನು ಹಾಕಿದ್ದಾರೆ ನೆಟ್ಟಿಗರು. ಕೆಲವು ಕಡೆ ನಟನಿಗೆ ಪ್ಯಾಂಟ್ ಹಾಕಲಾಗಿದೆ. ಇನ್ನೂ ಕೆಲವು ಕಡೆ ಶರ್ಟ್ ಮತ್ತು ಪ್ಯಾಂಟ್ ಎರಡನ್ನೂ ಸಹಾ ಹಾಕಲಾಗಿದೆ. ಇದೇ ವೇಳೆ ಒಂದು ಫೋಟೋದಲ್ಲಂತೂ ಹಿರಿಯ ನಟ ಬಾಲಕೃಷ್ಣ ವಿಜಯ್ ದೇವರಕೊಂಡ ಪೋಸ್ಟರ್ ಗೆ ವಸ್ತ್ರ ಹಾಕುತ್ತಿರುವಂತೆಯೂ ಪೋಸ್ಟರ್ ಮರು ಸೃಷ್ಟಿ ಮಾಡಲಾಗಿದೆ.

ಮರುಸೃಷ್ಟಿ ಮಾಡಿದ ಫೋಟೋಗಳು ವೈರಲ್ ಆದ ಬೆನ್ನಲ್ಲೇ ನಟ ವಿಜಯ್ ದೇವರಕೊಂಡ ಸಹಾ ಈ ಫೋಟೋಗಳಲ್ಲಿ ಕೆಲವು ಫೋಟೋಗಳಿಗೆ ಪ್ರತಿಕ್ರಿಯೆ ನೀಡಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಸಿನಿಮಾ ಪೋಸ್ಟರ್ ನೋಡಿದ ನಂತರ ಅಭಿಮಾನಿಗಳು ಸಖತ್ ಥ್ರಿಲ್ಲಾಗಿದ್ದು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಒಟ್ಟಾರೆ ನಿನ್ನೆಯಿಂದಲೂ ಲೈಗರ್ ಸಿನಿಮಾದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ ಎನ್ನುವುದು ನಿಜವಾಗಿದೆ.

Leave a Reply

Your email address will not be published.