ಲಾಲ್ ಸಿಂಗ್ ಚಡ್ಡಾ ಸೋಲು: ಕಂಗೆಟ್ಟ ಕರಣ್ ಜೋಹರ್ ಗೆ ತನ್ನ ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಶುರುವಾಯ್ತು ಭಯ

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಗೆ ಗರ ಬಡಿದಂತೆ ಆಗಿದೆ. ಅದೇಕೋ ಸ್ಟಾರ್ ಗಳ ಸಿನಿಮಾ ಘೋಷಣೆ ಆದ ಕೂಡಲೇ ನೆಟ್ಟಿಗರಿಂದ ಅವರ ಸಿನಿಮಾಗಳನ್ನು ಬಾಯ್ ಕಾಟ್ ಮಾಡುವ ಅಭಿಯಾನಗಳು ಸಹಾ ಜೋರಾಗಿ ನಡೆಯುತ್ತಿದೆ. ಇತ್ತೀಚಿಗೆ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಅಭಿಯನದ ಲಾಲ್ ಸಿಂಗ್ ಚಡ್ಡಾ ಮತ್ತು ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಸಿನಿಮಾ ಹೀನಾಯ ಸೋಲು ಕಂಡಿವೆ. ಅದರಲ್ಲೂ ಅಮೀರ್ ಖಾನ್ ವೃತ್ತಿ ಜೀವನದಲ್ಲೇ ಇಂತಹುದೊಂದು ದೊಡ್ಡ ಸೋಲನ್ನು ಕಂಡಿರಲಿಲ್ಲ ಎನ್ನುವುದು ನಿಜ. ಈಗ ಈ ಸಿನಿಮಾಗಳ ಸೋಲು ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಕರಣ್ ಜೋಹರ್ ಗೆ ಆತಂಕವನ್ನು ತಂದೊಡ್ಡಿದೆ.

ಹೌದು, ಕರಣ್ ಜೋಹರ್ ನಿರ್ಮಾಣದ, ಅಯಾನ್ ಮುಖರ್ಜಿ ನಿರ್ದೇಶನದ, ರಣಬೀರ್ ಕಪೂರ್ ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾ ಬ್ರಹ್ಮಾಸ್ತ್ರ ತೆರೆಗೆ ಬರಲು ಸಜ್ಜಾಗಿದೆ. ಆದರೆ ಇದೇ ವೇಳೆ ಸೋಶಿಯಲ್ ಮೀಡಿಯಾಗಳಲ್ಲಿ ಬಾಯ್ ಕಾಟ್ ಬ್ರಹ್ಮಾಸ್ತ್ರ ಎನ್ನುವ ಕೂಗು ಕೇಳಿ ಬಂದಿದ್ದು, ಕರಣ್ ಜೋಹರ್ ಗೆ ಇದು ಸಹಜವಾಗಿಯೇ ಭಯವನ್ನು ಉಂಟು ಮಾಡಿದೆ. ತನ್ನ ನಿರ್ಮಾಣದ ಈ ಹೊಸ ಸಿನಿಮಾಕ್ಕೆ ಕೂಡಾ ಬ್ಯಾನ್ ಬಿಸಿ ತಟ್ಟುವುದೇನೋ ಎನ್ನುವ ಆ ತಂ ಕ ಕಾಡಿರುವಾಗಲೇ ಕರಣ್ ಜೋಹರ್ ಇನ್ಸ್ಟಾಗ್ರಾಂ ನಲ್ಲಿ ಹೊಸ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ಫೋಟೋದಲ್ಲಿ ಕರಣ್ ಜೋಹರ್ ಮತ್ತು ಅಯಾನ್ ಮುಖರ್ಜಿ ಜೊತೆಯಲ್ಲಿದ್ದು, ಅಯಾನ್ ಕಣ್ಮುಚ್ಚಿ ಆಲೋಚನೆಯಲ್ಲಿ ಬಿದ್ದಂತೆ ಕಂಡಿದೆ. ಇನ್ನು ಕರಣ್ ಜೋಹರ್ ಈ ಫೋಟೋ ದೊಂದಿಗೆ ಒಂದಷ್ಟು ಸಾಲಗಳನ್ನು ಸಹಾ ಬರೆದುಕೊಂಡಿದ್ದಾರೆ. ಕರಣ್ ತಮ್ಮ ಪೋಸ್ಟ್ ‌ನಲ್ಲಿ, ಪ್ರೀತಿಯು ಒಂದು ಬಲವಾದ ಭಾವನೆಯಾಗಿದೆ. ಅದನ್ನು ವಿಭಜಿಸಬಹುದು ಆದರೆ ಹೇರಳವಾಗಿ ಅನುಭವಿಸಬಹುದು. ನಾನು ನಿನ್ನನ್ನು ಪ್ರೀತಿಸುತ್ತೇನೆ ಅಯಾನ್ ಮತ್ತು ನನ್ನ ಅವಳಿ ಮಕ್ಕಳಿಗೆ ನಾನು ಮಾಡುವಷ್ಟು ರಕ್ಷಣೆಯನ್ನೇ, ನಿಮ್ಮ ಬಗ್ಗೆ ರಕ್ಷಣೆಯನ್ನು ನಾನು ಅನುಭವಿಸುತ್ತೇನೆ.

ನನಗೆ ತಿಳಿದಿದೆ, ನೀವು ನಿಮ್ಮ ಬ್ರಹ್ಮಾಸ್ತ್ರ ಚಲನಚಿತ್ರಕ್ಕಾಗಿ ಒಂದು ದಶಕ ಕಾಲ ಕೆಲಸ ಮಾಡಿದ್ದೀರಿ. ಯಾರಾದರೂ ತಮ್ಮ ವೃತ್ತಿಜೀವನದ ಬಹುಪಾಲು ಒಂದು ಯೋಜನೆಗೆ ನೀವು ಇಟ್ಟಂತೆ ಸಮಯವನ್ನು ಮೀಸಲಿಡುವುದನ್ನು ನಾನು ನೋಡಿಲ್ಲ. ನಾಳೆ ಅಥವಾ ಸೆಪ್ಟೆಂಬರ್ 9 ರಂದು ಬ್ರಹ್ಮಾಸ್ತ್ರದ ಭವಿಷ್ಯ ಏನಾಗಲಿದೆ ಎಂದು ಈ ಕ್ಷಣದಲ್ಲಿ ಊಹಿಸುವುದಕ್ಕೆ ಸಾಧ್ಯ ಇಲ್ಲ! ಆದರೆ ನಿಮ್ಮ ಬದ್ಧತೆ ಮತ್ತು ಕಠಿಣ ಪರಿಶ್ರಮಕ್ಕೆ ಈಗಾಗಲೇ ವಿಜಯವಾಗಿದೆ! ನೀವು ಕೇವಲ ಹಾರಲು! ಸುಮ್ಮನೆ ಮೇಲೇರಿ!

ಕೇವಲ ಉನ್ನತ ಗುರಿಯನ್ನು ಇರಿಸಿಕೊಳ್ಳಿ! ನೀವು ನಿಜವಾಗಿಯೂ ಅವುಗಳನ್ನು ನಂಬಿದರೆ ಮತ್ತು ನೀವು ಹಾಗೆ ಮಾಡುತ್ತೀರಿ ಎಂದು ನನಗೆ ತಿಳಿದಿದ್ದರೆ ಕನಸುಗಳು ನಿಜವಾಗುತ್ತವೆ! ನಿಮ್ಮ ಕನಸು ನಿಮ್ಮ ಪ್ರೀತಿಯ ಶ್ರಮವನ್ನು ಜಗತ್ತು ಶೀಘ್ರದಲ್ಲೇ ನೋಡುತ್ತದೆ! ನಿನ್ನನ್ನು ಪ್ರೀತಿಸುತ್ತೇನೆ ನನ್ನ ಮಗು! ಮತ್ತು ಓಹ್! ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡು, ಅಯಾನ್ ಮುಖರ್ಜಿ ಅವರಿಗೆ ಜನ್ಮದಿನದ ಶುಭಾಶಯವನ್ನು ಕೋರುತ್ತಲೇ ಬ್ರಹ್ಮಾಸ್ತ್ರ ಸಿನಿಮಾಕ್ಕೆ ಏನಾಗುವುದೋ ಎನ್ನುವ ಆತಂಕವನ್ನು ಸಹಾ ಅವರು ತಮ್ಮ ಬರಹದಲ್ಲಿ ಹಂಚಿಕೊಂಡಿದ್ದಾರೆ.

Leave a Comment