ಸಿನಿಮಾಗಳಲ್ಲಿ ಜನರನ್ನು ನಗಿಸುತ್ತಿದ್ದ ಹಾಸ್ಯ ನಟನಿಂದ ಈಗ ಮದ್ಯ ಮಾರಾಟ: ಈ ಸಂಕಷ್ಟಕ್ಕೆ ಕಾರಣವೇನು?

0 4

ಕೊರೊನಾ ಲಾಕ್ ಡೌನ್ ಎನ್ನುವುದು ಅದೆಷ್ಟೋ ಜನರಿಗೆ ಅವರ ಜೀವನದ ಆಸರೆಯನ್ನೇ ದೂರ ಮಾಡಿದ್ದು ಸುಳ್ಳಲ್ಲ. ಉಳ್ಳವರು, ಶ್ರೀಮಂತ ಸ್ಟಾರ್ ಗಳಿಗೇನೂ ಲಾಕ್ ಡೌನ್ ಅಷ್ಟಾಗಿ ಸಮಸ್ಯೆ ಆಗಲಿಲ್ಲವಾದರೂ, ಸಾಮಾನ್ಯ ಜನರು, ಸಣ್ಣ ಪುಟ್ಟ ಕಲಾವಿದರು, ಕಾರ್ಮಿಕರ ಜೀವನ ಮಾತ್ರ ಸಂಕಷ್ಟಕ್ಕೆ ಸಿಲುಕಿತು. ತೆಲುಗು ಸಿನಿಮಾ ರಂಗದಲ್ಲಿ ಹಾಸ್ಯ ನಟ ರಘು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿರುವ ನಟ, ಸುಮಾರು 60 ಸಿ‌ನಿಮಾಗಳಲ್ಲಿ ಅವರು ಈಗಾಗಲೇ ನಟಿಸಿ, ತನ್ನ ಛಾಪು ಮೂಡಿಸಿದ್ದಾರೆ. ಹಾಸ್ಯ ನಟ ಮತ್ತು ಹಾಸ್ಯ ವಿಲನ್ ಆಗಿಯೂ ಜನರನ್ನು ರಂಜಿಸಿದ್ದಾರೆ.

ಇಷ್ಟೆಲ್ಲಾ ಜನಪ್ರಿಯತೆ ಇದ್ದರೂ ಲಾಕ್ ಡೌನ್ ಅವರಿಗೂ ಸಮಸ್ಯೆಗಳನ್ನು ತಂದೊಡ್ಡಿತ್ತು. ಆಗ ಏನು ಮಾಡಬೇಕೆಂದು ತಿಳಿಯದೇ ಆದಾಗ, ಅವರು ತರಕಾರಿ ಮಾರಾಟವನ್ನು ಮಾಡಲು ಆರಂಭಿಸಿದ್ದರು. ತಮ್ಮ ಮನೆಯ ಸುತ್ತ ಮುತ್ತ ತರಕಾರಿ ಬೆಳೆದು ಮಾರಾಟ ಮಾಡಿದ್ದ ಅವರು ನಂತರ ಜಮೀನು ಲೀಸ್ ಗೆ ಪಡೆದು ತಮ್ಮ ಈ ಕೃಷಿಯನ್ನು ಮುಂದುವರೆಸಿದ್ಧರು. ಈಗ ಅದರ ಬೆನ್ನಲ್ಲೇ ಮತ್ತೊಂದು ಹೊಸ ಬ್ಯುಸಿನೆಸ್ ಅನ್ನು ರಘು ಅವರು ಆರಂಭಿಸಿದ್ದು, ಈಗ ಅವರ ಈ ಹೊಸ ಬ್ಯುಸಿನೆಸ್‌ ನ ವಿಷಯ ಎಲ್ಲೆಡೆ ಸುದ್ದಿಯಾಗಿದೆ.

ರಘು ಅವರು ಮದ್ಯದ ವ್ಯಾಪಾರಕ್ಕೆ ಕಾಲಿಟ್ಟಿದ್ದಾರೆ.‌ ಮದ್ಯದ ಅಂಗಡಿಗಳ ಪರವಾನಗಿ ನೀಡಲು ಸರ್ಕಾರ ನಡೆಸಿದ್ದ ಲಕ್ಕಿ ಡ್ರಾ ನಲ್ಲಿ, ರಘು ಅವರು ಎರಡು ವೈನ್ ಶಾಪ್ ಗಳನ್ನು ಸ್ವಂತ ಮಾಡಿಕೊಂಡಿದ್ದಾರೆ. ನಲ್ಗೊಂಡ ಪಟ್ಟಣ, ಶಿವಾರು ಚರ್ಲಪಲ್ಲಿಯ ಹತ್ತಿರ ಮರ್ರಿಗೂಡ ಬೈಪಾಸ್ ಹತ್ತಿರದ ಷಾಪ್ ನಲ್ಲಿ ರಘು ಸ್ವತಃ ತಾನೇ ಮುಂದೆ ನಿಂತು ವೈ ನ್ ಬಾಟಲ್ ಗಳನ್ನು ಜೋಡಿಸಿ, ತಾನೇ ವ್ಯಾಪಾರಕ್ಕೆ ಕೂಡಾ ಇಳಿದಿದ್ದು, ಅವರು ವೈನ್ ಮಾರಾಟ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಬಹುತೇಕ ಸ್ಟಾರ್ ನಟರೆಲ್ಲರ ಸಿನಿಮಾಗಳಲ್ಲಿ ನಟಿಸಿರುವ ರಘು ಅವರು, ಈ ಹಿಂದೆ ಈ ಟಿವಿ ಯಲ್ಲಿ ಪ್ರಸಾರ ವಾಗುವ ಕಾಮಿಡಿ ಶೋ ಜಬರ್ದಸ್ತ್ ಮತ್ತು ಹಿರಿಯ ಹಾಸ್ಯ ಕಲಾವಿದ ಆಲಿ ಅವರೊಡನೆ ಆಲಿ ತೋ ಜಾಲಿಗಾ ಶೋ ನಲ್ಲಿ ಕೂಡಾ ಕೆಲಸವನ್ನು ಮಾಡಿದ್ದರು. ಇತ್ತೀಚಿಗೆ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದು, ಸ್ವಂತ ಬ್ಯುಸಿನೆಸ್ ಮಾಡಲು ಅವರು ಆಸಕ್ತಿಯನ್ನು ತೋರಿಸಿದ್ದಾರೆ.

Leave A Reply

Your email address will not be published.