ಲಾಕ್ ಅಪ್ ಶೋ ಗೆದ್ದ ಮುನಾವರ್ ಮೇಲೆ ರೊಚ್ಚಿಗೆದ್ದ ಸಹ ಸ್ಪರ್ಧಿ: ಸೋಶಿಯಲ್ ಮೀಡಿಯಾದಲ್ಲಿ ಸಿಟ್ಟು ಹೊರಹಾಕಿದ ನಟಿ

Entertainment Featured-Articles Movies News Viral Video

ಹಲವು ಟೀ ಕೆಗಳ ನಡುವೆಯೇ ನಟಿ ಕಂಗನಾ ನಿರೂಪಣೆಯಲ್ಲಿ, ಓಟಿಟಿಯಲ್ಲಿ ಆರಂಭವಾದ ರಿಯಾಲಿಟಿ ಶೋ ಲಾಕ್ ಅಪ್. ಶೋ ಆರಂಭವಾದ ಕೂಡಲೇ ಅನೇಕರು ಇದು ಬಿಗ್ ಬಾಸ್ ಶೋ ನ ನಕಲು ಎಂದು ವ್ಯಂಗ್ಯ ಮಾಡಿದ್ದರು. ಆದರೆ ಶೋ ಆರಂಭದಲ್ಲೇ ಒಟಿಟಿಯಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಶೋ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿತು. ಅಲ್ಲದೇ ದಿನದಿಂದ ದಿನಕ್ಕೆ ಭರ್ಜರಿ ಜನಪ್ರಿಯತೆಯನ್ನು ಪಡೆದುಕೊಂಡು ಲಾಕ್ ಅಪ್ ಯಶಸ್ಸು ಪಡೆದುಕೊಂಡಿತು. ಇದೇ ವೇಳೆ ಸ್ಪರ್ಧಿಗಳು ಹಂಚಿಕೊಂಡ ಅವರ ಜೀವನದ ರಹಸ್ಯ ವಿಚಾರಗಳು ಸಂಚಲನವನ್ನು ಸೃಷ್ಟಿಸಿದ್ದು ಸಹಾ ವಾಸ್ತವ.

ಈಗ ಇಷ್ಟೆಲ್ಲಾ ಸದ್ದು, ಸುದ್ದಿ ಮಾಡಿದ ಲಾಕ್ ಅಪ್ ಸೀಸನ್ ಒನ್ ಮುಗಿದಾಗಿದೆ‌. ಸ್ಟ್ಯಾಂಡಪ್ ಕಮಿಡಿಯನ್ ಮುನಾವರ್ ಫಾರೂಕಿ ಶೋ ನಲ್ಲಿ ಗೆದ್ದು ಲಾಕ್ ಅಪ್ ಸೀಸನ್ ಒನ್ ನ ವಿನ್ನರ್ ಆಗಿ ಟ್ರೋಫಿ ಮತ್ತು ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಶೋ ಫಿನಾಲೆಯಲ್ಲಿ ಫಾರೂಕ್ ಮುನಾವರ್ ಮತ್ತೊಬ್ಬ ಸ್ಪರ್ಧಿಯಾದ ಪಾಯಲ್ ರಹ್ತೋಗಿಯನ್ನು ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ. ಫಾರೂಕ್ ಮುನಾವರ್ ತನ್ನ ಗೆಲುವಿಗೆ ತನಗೆ ಬೆಂಬಲ ನೀಡಿದ ಎಲ್ಲರಿಗೂ ಸಹಾ ಧನ್ಯವಾದಗಳನ್ನು ಹೇಳಿದ್ದಾರೆ.

ಆದರೆ ಶೋ ನಲ್ಲಿ ಸೋತ ಪಾಯಲ್ ರಹ್ತೋಗಿ ವೇದಿಕೆಯಿಂದ ಇಳಿದು ಅಲ್ಲಿಂದ ಹೊರಟು ಹೋದರು. ಆಕೆ ಯಾವುದೇ ಶೋ ನ ವೇದಿಕೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದರು. ಆದರೆ ಅನಂತರ ಸೋಶಿಯಲ್ ಮೀಡಿಯಾಗಳಲ್ಲಿ ಪಾಯಲ್ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಪಾಯಲ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫಾರೂಕ್ ಮುನಾವರ್ ನ ಒಂದು ಹಳೆಯ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಹಿಂದೊಮ್ಮೆ ವಿ ವಾ ದಕ್ಕೆ ಕಾರಣವಾಗಿ ಫಾರೂಖ್ ಜೈಲಿಗೆ ಸಹಾ ಹೋಗಬೇಕಾಗಿ ಬಂದಿತ್ತು.

ನಂತರ ಜಾಮೀನು ಪಡೆದು ಹೊರ ಬಂದ ಫಾರೂಕ್ ತನ್ನ ಆ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡುತ್ತಾ, ಅವರು ಆಡಿದ ಮಾತುಗಳನ್ನು ತಪ್ಪಾಗಿ ತೆಗೆದುಕೊಳ್ಳಲಾಗಿದೆ, ಯಾವುದೇ ಭಾವನೆಗಳನ್ನು ನೋಯಿಸುವ ಇಚ್ಛೆ ನನಗೆ ಇರಲಿಲ್ಲ ಎನ್ನುವ ಮಾತನ್ನು ಫಾರೂಖ್ ಹೇಳಿದ್ದರು. ಪಾಯಲ್ ಇದೇ ವೀಡಿಯೋವನ್ನು ಶೇರ್ ಮಾಡಿಕೊಂಡು, ಅದರ ಜೊತೆಗೆ ಕೆಲವು ಸಾಲುಗಳನ್ನು ಬರೆದುಕೊಂಡು, ಫಾರೂಖ್ ಮುನಾವರ್ ಅವರನ್ನು ಕಟುವಾದ ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ.

ಪಾಯಲ್ ಅವರು, “ಲಾಕ್ ಅಪ್ ನ ವಿನ್ನರ್ ನ ವಿಡಿಯೋ ಅಪಲೋಡ್ ಮಾಡಿದ್ದೇನೆ. ತಮ್ಮ ಕೆರಿಯರ್ ಅನ್ನು ಮುಂದೆ ತೆಗೆದುಕೊಂಡು ಹೋಗಲು ಧರ್ಮವನ್ನು ಹೀಗೆ ಬಳಸಿಕೊಳ್ಳುತ್ತಾರೆ. ಅನಂತರ ರಿಯಾಲಿಟಿ ಶೋ ಗಳಲ್ಲಿ ಗೆಲ್ಲವು ತಾವೇ ಬ ಲಿ ಪ ಶು ಗಳಾದೆವು ಎಂದು ಬಿಂಬಿಸಿಕೊಳ್ಳುತ್ತಾರೆ” ಎಂದು ಬರೆದುಕೊಂಡಿದ್ದಾರೆ. ಪಾಯಲ್ ಶೇರ್ ಮಾಡಿದ ವೀಡಿಯೋ ಮತ್ತು ಬರೆದು ಸಾಲುಗಳನ್ನು ನೋಡಿದ ನೆಟ್ಟಿಗರಿಂದ ಸಹಾ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

Leave a Reply

Your email address will not be published. Required fields are marked *