ಲವರ್ ತಾಯಿಗೆ ತನ್ನ ಕಿಡ್ನಿ ಕೊಟ್ಟ ಪ್ರೇಮಿ:ಆದ್ರೆ ಒಂದು ಕಿಡ್ನಿಯವನು ಬೇಡವೆಂದು ಇನ್ನೊಬ್ಬನ ಕೈ ಹಿಡಿದ್ಲು ಪ್ರಿಯತಮೆ

0
156

ಪ್ರೇಮ ಅನ್ನೋದು ಒಂದು ಮಾಯೆ, ಅದೊಂದು ಸುಮಧುರ ಅನುಭೂತಿ ಎಂದೆಲ್ಲಾ ವರ್ಣನೆ ಮಾಡಲಾಗುತ್ತದೆ. ಈ ಪ್ರೇಮದ ಮಾಯೆಯಲ್ಲಿ ಬಿದ್ದವರು ತಮ್ಮ ತಂದೆ ತಾಯಿಯನ್ನು ಸಹಾ ಪ್ರೇಮಿಗಾಗಿ ಬಿಡಲು ಸಜ್ಜಾಗಿ ಬಿಡುತ್ತಾರೆ. ಇನ್ನೂ ಕೆಲವರು ತಮ್ಮ ಪ್ರೇಮಕ್ಕೆ ಮನೆಯವರ ಒಪ್ಪಿಗೆ ಸಿಗದೇ ಹೋದಾಗ ಪ್ರಾಣವನ್ನೇ ಕಳೆದುಕೊಳ್ಳುವುದು ಸಹಾ ಉಂಟು. ಆದರೆ ಕೆಲವರು ಇದೇ ಪ್ರೇಮದ ಮಾಯೆಯಲ್ಲಿ ಬಿದ್ದು ಮೋಸ ಹೋಗುವುದು ಉಂಟು. ಪ್ರಸ್ತುತ ಅಂತಹುದೇ ಒಂದು ಘಟನೆ ವರದಿಯಾಗಿದ್ದು, ಎಲ್ಲರ ಗಮನವನ್ನು ಸೆಳೆದಿದೆ.

ಕ್ಯಾಲಿಫೋರ್ನಿಯಾದ ಮೂಲದ‌ ಉಜ್ಜೈಲ್ ಮಾರ್ಟಿನ್ ಎನ್ನುವ ತಾನು ಪ್ರೀತಿಸಿದ ಹುಡುಗಿಗಾಗಿ ತಾನು ತ್ಯಾಗವನ್ನು ಮಾಡಿದ್ದು, ಆದರೆ ಆ ತ್ಯಾಗಕ್ಕೆ ಸಿಕ್ಕ ಪ್ರತಿಫಲವು ಅವರ ಜೀವನದಲ್ಲಿ ಒಂದು ದೊಡ್ಡ ಆ ಘಾ ತವನ್ನೇ ನೀಡಿದೆ. ಇಷ್ಟಕ್ಕೂ ಘಟನೆ ಏನು ಎನ್ನುವುದಾದರೆ, ಉಜ್ಜೈಲ್ ಪ್ರೇಮಿಸಿದ್ದ ಯುವತಿಯ ತಾಯಿಯನ್ನು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎನ್ನಲಾಗಿದ್ದು, ಅಲ್ಲಿ ವೈದ್ಯರು ಆಕೆಯ ಪರೀಕ್ಷೆ ಮಾಡಿದ ನಂತರ, ಕಿಡ್ನಿ ಸಮಸ್ಯೆ ಎಂದು ತಿಳಿಸಿ, ಹೊಸ ಕಿಡ್ನಿ ಅಳವಡಿಸಬೇಕು ಎಂದು ಹೇಳಿದ್ದಾರೆ.

ವೈದ್ಯರು ಹಾಗೆ ಹೇಳಿದ ಕೂಡಲೇ ಉಜ್ಜೈಲ್ ತಾನೇ ತನ್ನ ಪ್ರಿಯತೆಮೆಯ ತಾಯಿಗೆ ಒಂದು ಕಿಡ್ನಿ ಯನ್ನು ನೀಡಲು ಮುಂದಾಗಿದ್ದಾನೆ. ತನ್ನ ಪ್ರೇಮ ಎಷ್ಟು ಸತ್ಯ ಎಂದು ಸಾಬೀತು ಮಾಡಲು ಆತ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದ್ದಾರೆ. ಉಜ್ಜೈಲ್ ಕಿಡ್ನಿ ನೀಡಿದ ಮೇಲೆ ಆತನ ಪ್ರಿಯತಮೆಯ ತಾಯಿಯ ಕಿಡ್ನಿ ಶ ಸ್ತ್ರ ಚಿ ಕಿತ್ಸೆ ನಡೆದಿದ್ದು, ಆಕೆ ಕೆಲವು ದಿನಗಳ ನಂತರ ಚೇತರಿಸಿಕೊಂಡಿದ್ದಾರೆ. ಆದರೆ ಒಂದು ತಿಂಗಳ ನಂತರ ನಡೆದ ಘಟನೆ ಮಾತ್ರ ಉಜ್ಜೈಲ್ ಗೆ ದೊಡ್ಡ ಆ ಘಾ ತ ವನ್ನು ನೀಡಿದೆ.

ಹೌದು, ತಾಯಿ ಶ ಸ್ತ್ರ ಚಿ ಕಿ ತ್ಸೆ ನಂತರ ಆಕೆ ಚೇತರಿಸಿಕೊಂಡ ಮೇಲೆ, ಉಜ್ಜೈಲ್ ನ ಪ್ರೇಮಿ ಹುಡುಗಿ, ಒಂದೇ ಕಿಡ್ನಿ ಉಳ್ಳವನ ಜೊತೆ ಜೀವನ ಹೇಗೆ ಮಾಡೋದು? ಎಂದು ಹೇಳಿ ಬೇರೊಬ್ಬನ ಜೊತೆಗೆ ವಿವಾಹ ಮಾಡಿಕೊಂಡಿದ್ದಾಳೆ. ಈ ಘಟನೆಯಿಂದ ಉಜ್ಜೈಲ್ ಕುಸಿದು ಹೋಗಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ನಂತರ ಆ ನೋ ವಿ ನಿಂದ ಹೊರ ಬಂದಿರುವ ಉಜ್ಜೈಲ್ ಟಿಕ್ ಟಾಕ್ ನಲ್ಲಿ ಈ ವಿಷಯವನ್ನು ಎಲ್ಲರ ಜೊತೆಗೆ ಹಂಚಿಕೊಂಡಿದ್ದಾರೆ. ಉಜ್ಜೈಲ್ ಹಂಚಿಕೊಂಡ ವಿಷಯ ಕೇಳಿ ಅನೇಕರು ಅವರಿಗೆ ಸಮಾಧಾನ ಹೇಳಿದ್ದಾರೆ.

ಉಜ್ಜೈಲ್ ತನಗಾದ ಮೋಸ ಹಾಗೂ ಪ್ರೀತಿಯಲ್ಲಿ ತಾನು ಹೇಗೆ ವಂಚನೆಗೆ ಗುರಿಯಾದೆ ಎನ್ನುವುದನ್ನು ಹೇಳಿದಾಗ ಬಹಳಷ್ಟು ಜನರು ಉಜ್ಜೈಲ್ ಅವರಿಗೆ ಧನಾತ್ಮಕ ಮಾತುಗಳನ್ನು ಹೇಳಿದ್ದಾರೆ. ಅನೇಕರು ನಿಮ್ಮನ್ನು ಬಿಟ್ಟು ಹೋದವಳ ಬಗ್ಗೆ ಚಿಂತಿಸಬೇಡಿ, ನಿಮ್ಮ ಒಳ್ಳೆಯ ವ್ಯಕ್ತಿತ್ವವನ್ನು ಆಕೆ ಕಳೆದುಕೊಂಡಿದ್ದಾಳೆ. ನೀವು ಅವಳನ್ನು ಕಳೆದುಕೊಂಡಿದ್ದು ಒಳ್ಳೆಯದೇ ಆಯಿತು. ಇನ್ನು ಮೇಲೆ ಖುಷಿಯಾಗಿದೆ ಎಂದೆಲ್ಲಾ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here