ಲವಂಗದಿಂದ ಈ ಸಣ್ಣ ಪರಿಹಾರ ಮಾಡಿ, ಜೀವನದ ಹಲವು ಸಮಸ್ಯೆಗಳಿಗೆ ವಿದಾಯ ಹೇಳಿ

Astrology tips Entertainment Featured-Articles News ಜೋತಿಷ್ಯ

ಜ್ಯೋತಿಷ್ಯ ಶಾಸ್ತ್ರದಲ್ಲಿ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಹಲವು ಪರಿಹಾರ ಮಾರ್ಗಗಳನ್ನು ಸೂಚಿಸಲಾಗಿದೆ. ಇವುಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಶಾಶ್ವತವಾದ ಒಂದು ಶಾಂತಿಯನ್ನು ಕಾಣಬಹುದಾಗಿರುತ್ತದೆ. ಹೀಗೆ ನೀಡುವ ಪರಿಹಾರಗಳ ಭಾಗವಾಗಿ ಜ್ಯೋತಿಷ್ಯದಲ್ಲಿ, ಲವಂಗವನ್ನು ಬಳಸಿ ಅನೇಕ ಪರಿಹಾರಗಳನ್ನು ನೀಡಲಾಗಿದೆ. ಲವಂಗವನ್ನು ಸಹಾ ಪೂಜೆಯ ರೂಪದಲ್ಲಿ ಬಳಸಲಾಗುತ್ತದೆ. ಇದನ್ನು ಪೂಜೆಯಲ್ಲಿ ಅರ್ಪಿಸುವ ಮೂಲಕ ದೇವತೆಗಳು ಪ್ರಸನ್ನರಾಗುತ್ತಾರೆ ಎಂದು ಹೇಳಲಾಗಿದೆ.

ಋಣಾತ್ಮಕ ಶಕ್ತಿ: ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ತೊಡೆದು ಹಾಕಲು, ಲವಂಗದಿಂದ ಈ ಸರಳವಾದ ಪರಿಹಾರವನ್ನು ಮಾಡುವುದು ಬಹಳ ಮಂಗಳಕರವಾಗಿರುತ್ತದೆ. ಇದಕ್ಕಾಗಿ ಶನಿವಾರ ಅಥವಾ ಭಾನುವಾರದಂದು 5 ಲವಂಗ, 3 ಕರ್ಪೂರ ಮತ್ತು 3 ದೊಡ್ಡ ಏಲಕ್ಕಿಯನ್ನು ಸುಡಬೇಕು. ಇದರ ನಂತರ, ಮನೆಯ ಪ್ರತಿಯೊಂದು ಮೂಲೆಯಲ್ಲಿ ಅದರ ಧೂಪವನ್ನು ಹರಡುವಂತೆ ಮಾಡಿ. ಅದು ಸಂಪೂರ್ಣವಾಗಿ ಸುಟ್ಟ ನಂತರ ಅದರ ಬೂದಿಯಲ್ಲಿ ಸ್ವಲ್ಪ ನೀರು ಬೆರೆಸಿ, ಮನೆಯ ಪ್ರವೇಶ ದ್ವಾರದಲ್ಲಿ ಹಾಕಿ. ಇದರಿಂದ ನಕಾರಾತ್ಮಕ ಶಕ್ತಿ ನಿವಾರಣೆಯಾಗುತ್ತದೆ ಎನ್ನಲಾಗಿದೆ.

ರಾಹು ಕೇತು: ವ್ಯಕ್ತಿಯ ಜಾತಕದಲ್ಲಿ ರಾಹು ಮತ್ತು ಕೇತುಗಳ ಸ್ಥಾನ ಸರಿಯಿಲ್ಲ ಎಂದಾಗ, ಶನಿವಾರದ ದಿನ ಲವಂಗವನ್ನು ದಾನ ಮಾಡಿ. ಇದರೊಂದಿಗೆ, 40 ಶನಿವಾರದವರೆಗೆ ಈ ಪರಿಹಾರವನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ಯಾವುದೇ ವ್ಯಕ್ತಿಗೆ ಲವಂಗವನ್ನು ದಾನ ಮಾಡಲು ಸಾಧ್ಯವಾಗದಿದ್ದರೆ, ಈ ಲವಂಗವನ್ನು ಶಿವಲಿಂಗಕ್ಕೆ ಅರ್ಪಿಸಿ. ಹೀಗೆ ಮಾಡಿದರೆ ರಾಹು ಕೇತುಗಳಿಂದಾಗುವ ಸಮಸ್ಯೆಗಳು ಕಡಿಮೆ ಆಗುತ್ತವೆ.

ಸಾಲದ ಹಣ ವಾಪಸ್ ಪಡೆಯಿರಿ: ಯಾವುದೇ ವ್ಯಕ್ತಿ ನೀವು ನೀಡಿದ ಹಣವನ್ನು ಹಿಂತಿರುಗಿಸಲು ತಡ ಮಾಡುತ್ತಿದ್ದರೆ, ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು ರಾತ್ರಿ ಕರ್ಪೂರದಲ್ಲಿ 21 ಲವಂಗವನ್ನು ಸುಡಬೇಕು. ಲಕ್ಷ್ಮೀ ದೇವಿಯನ್ನು ಧ್ಯಾನ‌ ಮಾಡುತ್ತಾ ಹವನವನ್ನು ಮಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಸಾಲದ ಹಣ ಶೀಘ್ರದಲ್ಲೇ ನಿಮಗೆ ಹಿಂತಿರುಗುತ್ತದೆ ಎನ್ನುವುದು ಪ್ರತೀತಿ.

ಆರ್ಥಿಕ ಪ್ರಯೋಜನಗಳು: ಕಠಿಣ ಪರಿಶ್ರಮವನ್ನು ಮಾಡಿದರೂ ಸಹಾ ನಿಮಗೆ ಉತ್ತಮ ಫಲಿತಾಂಶಗಳನ್ನು ಪಡೆಯಲಿಲ್ಲವಾದರೆ, ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮಂಗಳವಾರ ಅಥವಾ ಶನಿವಾರದಂದು ಹನುಮಾನ್ ಫೋಟೋ ಅಥವಾ ವಿಗ್ರಹದ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ದೀಪವನ್ನು ಹಚ್ಚಿದ ನಂತರ ಅದರಲ್ಲಿ ಎರಡು ಲವಂಗವನ್ನು ಹಾಕಿ. ಇದರ ನಂತರ ಹನುಮಾನ್ ಚಾಲೀಸಾ ಪಠಣೆ ಮಾಡಿ. 21 ಮಂಗಳವಾರ ಅಥವಾ ಶನಿವಾರ ಹೀಗೆ ಮಾಡಿದರೆ ನಿಮಗೆ ಖಂಡಿತ ಯಶಸ್ಸು ಸಿಗುತ್ತದೆ.

Leave a Reply

Your email address will not be published.