ಲಕ್ಷ ₹ ಪೆಟ್ರೋಲ್ ಉಚಿತ, ಯೂಟ್ಯೂಬರ್ ಕ್ರೇಜಿ ಆಫರ್: ಹಬ್ಬ ಮಾಡಿಕೊಂಡ ವಾಹನ ಸವಾರರು!!

Entertainment Featured-Articles News Viral Video

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಈಗಾಗಲೇ ಸಾಮಾನ್ಯನ ಬೆನ್ನಿನ ಮೇಲೆ ಹೊರಲಾಗದ ಭಾರವಾಗಿ ಪರಿಣಮಿಸಿದೆ. ಲೀಟರ್ ಪೆಟ್ರೋಲ್ ದರವು ಸೆಂಚುರಿ ದಾಟಿದೆ. ಡೀಸಲ್ ನ ದರ ಕೂಡಾ ಹತ್ತಿರದಲ್ಲೇ ಇದೆ. ಬೆಲೆ ಕಡಿಮೆ ಮಾಡಬೇಕೆಂದು ಜನರು ಮನವಿಯನ್ನು ಸಹಾ ಮಾಡುತ್ತಿದ್ದಾರೆ.‌ ಕೆಲವೇ ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ನ ಮೇಲೆ ಬೆಲೆಯನ್ನು ಕಡಿಮೆ ಕೂಡಾ ಮಾಡಿರುವ ವಿಷಯವು ಈಗಾಗಲೇ ಸುದ್ದಿಯಾಗಿದೆ. ಇದು ಸಾಮಾನ್ಯ ಜನರಿಗೆ ಸ್ವಲ್ಪಮಟ್ಟಿಗೆ ನೆಮ್ಮದಿಯನ್ನು ನೀಡುವಂತಹ ವಿಚಾರವಾಗಿದೆ.

ಇನ್ನು ಇವೆಲ್ಲವುಗಳ ನಡುವೆಯೇ ಒಬ್ಬ ಯೂಟ್ಯೂಬರ್ ತಾನು ಜನರಿಗೆ ಒಂದು ಲಕ್ಷ ರೂ. ಬೆಲೆಯ ಪೆಟ್ರೋಲ್ ಉಚಿತವಾಗಿ ಕೊಡುವುದಾಗಿ ತಿಳಿಸಿದ್ದಾನೆ. ಶಾಕಿಂಗ್ ಆಗ್ತಿದೆ ಅಲ್ವಾ?? ಈ ವಿಷಯ ಖಂಡಿತ ಸುಳ್ಳಲ್ಲ. ಆದರೆ ಇಲ್ಲೊಂದು ಟ್ವಿಸ್ಟ್ ಸಹಾ ಇದೆ. ಅದೇನೆಂದರೆ ಉಚಿತ ಪೆಟ್ರೋಲ್ ನೀಡುವ ಭರವಸೆಯನ್ನು ನೀಡಿದ ಯೂಟ್ಯೂಬರ್ ಅಲ್ಲೊಂದು ಕಂಡೀಶನ್ ಸಹಾ ಹಾಕಿದ್ದ. ಅದೇ ನೆಂದರೆ ತನ್ನ ಯೂಟ್ಯೂಬ್ ಅನ್ನು ಫಾಲೋ ಮಾಡುತ್ತಿರುವವರು ತನ್ನ ವೀಡಿಯೋವನ್ನು ವೈರಲ್ ಮಾಡಬೇಕು ಎನ್ನುವುದು.

ಯೂಟ್ಯೂಬರ್ ನ ಈ ಕಂಡೀಶನ್ ಗೆ ಆತನ ಫಾಲೋಯರ್ಸ್ ಒಪ್ಪಿಕೊಂಡಿದ್ದಾರೆ. ಆತನಿಗೆ ವೀಡಿಯೋ ವೈರಲ್ ಮಾಡುವ ಭರವಸೆಯನ್ನು ನೀಡಿ ಉಚಿತ ಪೆಟ್ರೋಲ್ ಪಡೆದಿದ್ದಾರೆ. ಪೆಟ್ರೋಲ್ ಬ್ಯಾಂಕ್ ನಲ್ಲಿ ತಾನೇ ಸ್ವತಃ ನಿಂತು ಯೂಟ್ಯೂಬರ್ ಉಚಿತ ಪೆಟ್ರೋಲ್ ವಿತರಣೆ ಮಾಡುತ್ತಾ, ಯೂಟ್ಯೂಬರ್ ಖುಷಿಯನ್ನು ಆನಂದಿಸಿದ್ದಾರೆ. ಇನ್ನು ಆತನ ಫಾಲೋಯರ್ಸ್ ಕೂಡಾ ಕೊಟ್ಟ ಮಾತಿನಂತೆ ಆತನ ಯೂಟ್ಯೂಬ್ ವೀಡಿಯೋವನ್ನು ವೈರಲ್ ಮಾಡಿದ್ದಾರೆ. ಆತನ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ.

ಇಷ್ಟಕ್ಕೂ ಆ ಯೂಟ್ಯೂಬರ್ ನ‌ ಚಾನೆಲ್ ಹೆಸರೇನು ಎನ್ನುವಿರಾ? ಆತನ ಯೂಟ್ಯೂಬ್ ಚಾನೆಲ್ ಹೆಸರು ಕ್ರೇಜಿ ಎಕ್ಸ್ ವೈ ಜೆಡ್. ಇದನ್ನು ನಡೆಸುತ್ತಿರುವ ವ್ಯಕ್ತಿಯ ಹೆಸರು ಅಮಿತ್. ಆತ ಉಚಿತವಾಗಿ ಪೆಟ್ರೋಲ್ ಹಂಚುತ್ತಿರುವ ವೀಡಿಯೋಗೆ ಬರೋಬ್ಬರಿ ನಲ್ವತ್ತು ಲಕ್ಷ ವೀಕ್ಷಣೆಗಳು ಬಂದಿವೆ. ಅಂದರೆ ಆತ ಉಚಿತವಾಗಿ ನೀಡಿದ ಪೆಟ್ರೋಲ್ ನ ಹಣ ಆತನಿಗೆ ಮರಳಿ ಬಂದಂತೆ ಕಾಣುತ್ತಿದೆ. ವೀಡಿಯೋ ಇನ್ನಷ್ಟು ವೈರಲ್ ಆದರೆ ಇನ್ನಷ್ಟು ಹಣವನ್ನು ಗಳಿಸಿಕೊಡುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.

ಯೂಟ್ಯೂಬರ್ ಮಾಡಿದ ಈ ಕ್ರೇಜಿ ಕೆಲಸಕ್ಕೆ ಜನರ ಮೆಚ್ಚುಗೆ ದೊರೆತಿರುವುದು ಮಾತ್ರವೇ ಅಲ್ಲದೇ ಆತನ ವೀಡಿಯೋ ಸಹಾ ವೈರಲ್ ಆಗಿದೆ. ಆತನ ಯೂಟ್ಯೂಬ್ ಚಾನೆಲ್ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಆತ ತನ್ನ ವೀಡಿಯೋದಲ್ಲಿ ಒಂದು ಪೆಟ್ರೋಲ್ ಬ್ಯಾಂಕ್ ನ ಮುಂದೆ ಉಚಿತ ಪೆಟ್ರೋಲ್ ಎನ್ನುವ ಬ್ಯಾನರ್ ಹಾಕಿ, ತಾನು ಉಚಿತವಾಗಿ ಪೆಟ್ರೋಲ್ ನೀಡುತ್ತಿರುವುದಾಗಿ ಜನರನ್ನು ಕರೆಯುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ.

Leave a Reply

Your email address will not be published.