ಲಕ್ಷ ಲಕ್ಷ ಹಣ ನೀಡಿ ನಾಯಿಯ ರೂಪ ಪಡೆದು ಕನಸು ನನಸು ಮಾಡಿಕೊಂಡ!! ಅಚ್ಚರಿ ಎನಿಸಿದರೂ ಇದು ವಾಸ್ತವ

Entertainment Featured-Articles News Viral Video Wonder

ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ನೂರಾರು ಕನಸುಗಳಿರುತ್ತವೆ. ಕೆಲವರು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸನ್ನು ಕಂಡರೆ ಇನ್ನೂ ಕೆಲವರು ತಾವು ಹಣ, ಐಶ್ವರ್ಯಗಳನ್ನು ಗಳಿಸಬೇಕು ಎನ್ನುವ ಕನಸನ್ನು ಕಾಣುತ್ತಾರೆ. ಇದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ. ನಿಸ್ಸಂಶಯವಾಗಿ ನಮಗೂ ಸಹಾ ನಮ್ಮ ಜೀವನದ ಕುರಿತಾಗಿಯೂ ಬಹಳಷ್ಟು ಕನಸುಗಳು ಇವೆ. ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನವನ್ನು ಸಹಾ ನಾವು ಮಾಡುತ್ತಿದ್ದೇವೆ ಎನ್ನುವುದು ವಾಸ್ತವ. ಏಕೆಂದರೆ ಕನಸುಗಳೇ ಇಲ್ಲದೇ ಜೀವನ ಖಂಡಿತ ಇಲ್ಲ.

ಆದರೆ ಕೆಲವರ ಕನಸುಗಳು ಮಾತ್ರ ಬಹಳ ವಿಚಿತ್ರವಾಗಿಯೂ, ವಿಲಕ್ಷಣವಾಗಿಯೂ ಇರುತ್ತದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇಂತಹ ಘಟನೆಗಳು ನಡೆದಾಗ ಭಾವ ಚಿತ್ರಗಳನ್ನು ನೋಡಿದಾಗ ಇಂತಹ ಜನರು ಇದ್ದಾರೆಯೇ ? ಎನ್ನುವ ಅನುಮಾನವು ನಮ್ಮನ್ನು ಕಾಡತೊಡಗುತ್ತದೆ‌. ಪ್ರಸ್ತುತ ಅಂತಹದೇ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬರು ತಾನು ಪ್ರಾಣಿಯಂತೆ ಕಾಣಬೇಕು ಎನ್ನುವ ಕನಸನ್ನು ನನಸು ಮಾಡಿಕೊಳ್ಳಲು ಲಕ್ಷ ಲಕ್ಷ ಗಳಷ್ಟು ಹಣವನ್ನು ಖರ್ಚು ಮಾಡಿ ನಾಯಿಯ ರೂಪವನ್ನು ಪಡೆದುಕೊಂಡಿದ್ದಾರೆ.

ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬರು ಮಾಡಿದ ನಾಯಿಯ ರೂಪದ ಫೋಟೋಗಳು ಭರ್ಜರಿ ವೈರಲ್ ಆಗುತ್ತಿದ್ದು ಇದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಈ ಫೋಟೋಗಳು ಜನರನ್ನು ಆಕರ್ಷಿಸುತ್ತಿದೆ. ಜನ ಫೋಟೋಗಳನ್ನು ನೋಡಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ನಾಯಿಯ ವೇಷಧಾರಿ ಯಾದ ವ್ಯಕ್ತಿಯು ತಮಗೆ ಬಹಳ ಪ್ರಿಯವಾದ ನಾಯಿಯ ರೂಪವನ್ನು ತಾಳಿರುವುದು, ನಾಯಿಯಂತೆ ಸಂಪೂರ್ಣವಾಗಿ ರೂಪಾಂತರಗೊಂಡಿರುವುದು ನೆಟ್ಟಿಗರಿಗೆ ಒಂದು ಅದ್ಭುತ ಎನಿಸುವಂತಹ ಅನುಭೂತಿಯನ್ನುಂಟು ಮಾಡಿದೆ.

ವ್ಯಕ್ತಿಯ ಇದರ ಕುರಿತಾಗಿ ಯೂಟ್ಯೂಬ್ ನಲ್ಲಿ ಒಂದು ವಿಡಿಯೋವನ್ನು ಕೂಡಾ ಶೇರ್ ಮಾಡಿದ್ದಾರೆ. ಆ ವಿಡಿಯೋವನ್ನು ನೋಡಿದಾಗ ಅವರು ನಾಯಿಯಂತೆ ವರ್ತಿಸುವುದನ್ನು ನಾವು ಗಮನಿಸಬಹುದಾಗಿದೆ. ವೀಡಿಯೋದ ಶೀರ್ಷಿಕೆಯಲ್ಲಿ ಅವರು, “ನೀವು ಎಂದಾದರೂ ಪ್ರಾಣಿಯಾಗಲು ಬಯಸಿದ್ದೀರಾ?? ನಾನು ಬಯಸಿದೆ, ನನ್ನ ಕನಸನ್ನು ನನಸು ಮಾಡಿಕೊಂಡೆ” ಎಂದು ಬರೆದುಕೊಂಡಿದ್ದಾರೆ. ಅದಕ್ಕೆ 40 ದಿನಗಳ ಅವಧಿ ಹಿಡಿಯಿತು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published.