ಲಕ್ಷ ಲಕ್ಷ ಖರ್ಚಿನಲ್ಲಿ ಅದ್ದೂರಿಯಾಗಿ ನಾಯಿಯ ಬರ್ತಡೇ ಪಾರ್ಟಿ: 3 ಜನರ ಅರೆಸ್ಟ್!! ಕಾರಣ ಏನು ಗೊತ್ತಾ???

0 1

ಮನೆಯಲ್ಲಿ ಸಾಕಿರುವ ಪ್ರಾಣಿಗಳ ಮೇಲೆ ಸಹಜವಾಗಿಯೇ ಮನೆಯವರಿಗೆ ಬಹಳ ಪ್ರೀತಿ ಇರುತ್ತದೆ. ಅದರಲ್ಲೂ ನಾಯಿಗಳು ಅಂದರೆ ಬಹಳಷ್ಟು ಜನರಿಗೆ ಅತೀವವಾದ ಪ್ರೀತಿ ಇರುವುದು ಸಾಮಾನ್ಯ. ಅನೇಕರು ನಾಯಿಗಳನ್ನು ತಮ್ಮ ಮನೆ ಮಕ್ಕಳಂತೆ ಸಾಕಿ ಸಲಹುತ್ತಾರೆ. ಅವುಗಳು ಸಹಾ ಕುಟುಂಬದ ಒಂದು ಭಾಗವೇ ಆಗಿರುತ್ತದೆ. ಆದ್ದರಿಂದಲೇ ಕೆಲವರು ನಾಯಿಗಳ ಜನ್ಮದಿನವನ್ನು ಸಹಾ ಆಚರಣೆ ಮಾಡಿ ಖುಷಿ ಪಡುವುದು ಉಂಟು. ಆದರೆ ಈಗ ಇಂತಹುದೇ ಒಂದು ಘಟನೆಯಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಯೊಂದು ಭಾರೀ ಸದ್ದು ಮಾಡಿದೆ.

ಕಳೆದ ಕೆಲವು ದಿನಗಳ ಹಿಂದೆ ಅಹ್ಮದಾ ಬಾದಿನ ಕಿರಣ್ ಪಾರ್ಕ್ ಸೊಸೈಟಿಯಲ್ಲಿ ನಿವಾಸ ಮಾಡುತ್ತಿರುವ ಸಹೋದರರಾದ ಚಿರಾಗ್ ಪಟೇಲ್ ಮತ್ತು ಊರ್ವಿಶ್ ಪಟೇಲ್ ತಮ್ಮ ಮನೆಯಲ್ಲಿ ಸಾಕಿರುವ ತಮ್ಮ ಮುದ್ದಿನ ನಾಯಿಯ ಜನ್ಮದಿನವನ್ನು 7 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಬಹಳ ಅದ್ದೂರಿಯಾಗಿ ನಡೆಸಿದ್ದ ವಿಷಯ ಸುದ್ದಿಯಾಗಿತ್ತು. ಇಬ್ಬರೂ ಸಹೋದರರು ತಮ್ಮ ಮುದ್ದಿನ ನಾಯಿ ಅಬ್ಬಿ ಬರ್ತಡೇ ಪಾರ್ಟಿಯನ್ನು ಬಹಳ ವೈಭವದಿಂದ ವ್ಯವಸ್ಥೆ ಮಾಡಿದ್ದರು.

ಈ ಪಾರ್ಟಿಗೆ ಅವರ ಸ್ನೇಹಿತರು, ಬಂಧುಗಳು, ಪರಿಚಯದವರು ಎಲ್ಲರೂ ಆಗಮಿಸಿದ್ದರು. ಬಣ್ಣಬಣ್ಣದ ವಿದ್ಯುತ್ ಅಲಂಕಾರ, ಫ್ಲೆಕ್ಸಿಗಳು, ಡಿಜೆ ನೈಟ್ ಹೀಗೆ ಅದ್ದೂರಿಯಾಗಿ ನಡೆದ ಪಾರ್ಟಿಯಲ್ಲಿ ನೆರದಿದ್ದವರು ನಾಯಿ ಮರಿಯ ಜನ್ಮದಿನದ ಹೆಸರಿನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿ ಕುಣಿದು, ಕುಪ್ಪಳಿಸಿದ್ದರು. ನಾಯಿಯ ಈ ಅದ್ದೂರಿ ಜನ್ಮದಿನದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಆದರೆ ವೈರಲ್ ವೀಡಿಯೋ ನೋಡಿದ ಮೇಲೆ ಎದುರಾಗಿದೆ ಸಮಸ್ಯೆ.

ವೀಡಿಯೋ ವೈರಲ್ ಆದ ಮೇಲೆ ಪಾರ್ಟಿಯಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ, ಜನ ಎಂಜಾಯ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪಾರ್ಟಿ ಅರೇಂಜ್ ಮಾಡಿದ ಇಬ್ಬರು ಸಹೋದರರು ಹಾಗೂ ಅವರ ಸ್ನೇಹಿತ ದಿವ್ಯೇಶ್ ಮಹೇರಿಯಾನನ್ನು ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಪಾಲಿಸಿಲ್ಲ ಎಂದು ಪೋಲಿಸರು ಕಾರಣವನ್ನು ನೀಡಿ ಪ್ರಕರಣವನ್ನು ದಾಖಲು ಮಾಡಿದ್ದಾರೆ.

Leave A Reply

Your email address will not be published.