ಲಕ್ಷ್ಮೀ ನಾರಾಯಣನ ಕೃಪೆ ದೊರೆಯಲು ಈ ಗಿಡವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿಟ್ಟು ನೋಡಿ: ಸುಖ, ಸಮೃದ್ಧಿ ಒಲಿದು ಬರುವುದು

0 1

ಹಿಂದೂ ಧರ್ಮದಲ್ಲಿ, ಕೆಲವು ಮರಗಳು ಮತ್ತು ಸಸ್ಯಗಳಲ್ಲಿ ಸಹಾ ದೈವಿಕ ಶಕ್ತಿಗಳ ವಾಸಸ್ಥಾನವಿದೆ ಎಂದು ನಂಬಲಾಗುತ್ತದೆ. ಆದ್ದರಿಂದಲೇ ಅವುಗಳನ್ನು ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೇ ಅಂತಹ ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಮತ್ತು ಮನೆಯಲ್ಲಿ ಎಲ್ಲಾ ದುಃಖ-ಕಷ್ಟಗಳು ದೂರವಾಗುತ್ತವೆ. ವಾಸ್ತು ಶಾಸ್ತ್ರದಲ್ಲಿ ಕೆಲವು ಸಸ್ಯಗಳ ಬಗ್ಗೆ ತಿಳಿಸಲಾಗಿದ್ದು, ಈ ಸಸ್ಯಗಳನ್ನು ಮನೆಯಲ್ಲಿ ನೆಡುವುದರಿಂದ ಅದು ಧನಾತ್ಮಕತೆಯನ್ನು ವೃದ್ಧಿಸುತ್ತದೆ ಎಂದು ಹೇಳಲಾಗಿದೆ. ಅಂತಹ ಸಸ್ಯಗಳಲ್ಲಿ ಒಂದರ ಬಗ್ಗೆ ನಾವೀಗ ತಿಳಿಯೋಣ.

ವಾಸ್ತು ಶಾಸ್ತ್ರದಲ್ಲಿ ಅರಿಶಿನದ ಗಿಡಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಈ ಗಿಡವನ್ನು ನೆಟ್ಟರೆ ಲಕ್ಷ್ಮಿ ನಾರಾಯಣನ ಆಶೀರ್ವಾದ ಸಿಗುತ್ತದೆ ಎನ್ನುವ ಪ್ರತೀತಿ ಇದೆ. ಅಲ್ಲದೇ ಮಹಾಲಕ್ಷ್ಮಿಯು ಪ್ರಸನ್ನಳಾಗಿ ಭಕ್ತರನ್ನು ಆಶೀರ್ವದಿಸುವಳು. ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಅರಿಶಿನ ಗಿಡವನ್ನು ನೆಡಲು ಸಲಹೆಯನ್ನು ನೀಡಲಾಗಿದೆ. ಗಿಡವನ್ನು ನೆಟ್ಟು ಸರಿಯಾದ ಆರೈಕೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಸಂತೋಷವಾಗುತ್ತದೆ. ಅರಿಶಿಣ ಗಿಡವನ್ನು ನೆಡಲು ಸರಿಯಾದ ದಿಕ್ಕು ಯಾವುದು?? ಮತ್ತು ಅದರ ಪ್ರಯೋಜನಗಳನ್ನು ತಿಳಿಯೋಣ ಬನ್ನಿ.

ಅರಿಶಿನ ಸಸ್ಯವನ್ನು ನೆಟ್ಟು ಅದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬೇಕಾದರೆ ಮೊದಲು ಅದನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಬಹಳ ಮುಖ್ಯ. ಈ ಸಸ್ಯವನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ನೆಡುವುದರಿಂದ ಅಥವಾ ಇಡುವುದರಿಂದ ಮನೆಯಲ್ಲಿನ ವಾಸ್ತು ದೋಷಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಅದೇ ಸಮಯದಲ್ಲಿ, ಮನೆಯ ಸಮಸ್ಯೆಗಳನ್ನು ಹೋಗಲಾಡಿಸಲು ಇದನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇಡುವುದು ಮಂಗಳಕರ ಎಂದು ಪರಿಗಣಿಸಲಾಗಿದೆ.

ಅರಿಶಿನ ಸಸ್ಯದಿಂದಾಗುವ ಪ್ರಯೋಜನಗಳು:
ಇದನ್ನು ಮನೆಯ ಅಂಗಳದಲ್ಲಿ ನೆಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಅದೇ ಸಮಯದಲ್ಲಿ, ಕುಟುಂಬದ ಸದಸ್ಯರ ನಡುವೆ ಪರಸ್ಪರ ಪ್ರೀತಿ ಇರುತ್ತದೆ. ವಿಷ್ಣುವಿಗೆ ಅರಿಶಿನದ ತಿಲಕವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಮನೆಯಲ್ಲಿ ಅರಿಶಿನ ಗಿಡವನ್ನು ನೆಟ್ಟರೆ ವಿಷ್ಣುವಿನ ಆಶೀರ್ವಾದವೂ ಸದಾ ದೊರೆಯುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.