ರೋಲ್ಸ್ ರಾಯ್ಸ್ ಕಂಪನಿಗೆ ಬುದ್ಧಿ ಕಲಿಸಲು, ಕಾರುಗಳನ್ನು ನಗರಪಾಲಿಕೆ ಕಸ ಸಂಗ್ರಹಣೆಗೆ ನೀಡಿದ ಭಾರತದ ದೊರೆ

Entertainment Featured-Articles News
91 Views

ರಾಜಸ್ಥಾನದ ಅಲ್ ವಾರ್ ಜಿಲ್ಲೆಯಲ್ಲಿ ಒಬ್ಬ ರಾಜನಿದ್ದರು. ಅವರ ಹೆಸರು ಜಯಸಿಂಹ ಪ್ರಭಾಕರ್. ಈ ಮಹಾರಾಜನ ಕುರಿತಾಗಿ ಒಂದು ರೋಚಕವಾದ ಕಥೆಯು ಬಹಳಷ್ಟು ಪ್ರಚಲಿತವಾಗಿದೆ. ಮಹಾರಾಜ ಜಯಸಿಂಹ ಪ್ರಭಾಕರ್ ಅವರು ವಿಶ್ವದ ಒಂದು ಐಷಾರಾಮಿ ಕಾರುಗಳನ್ನು ತಯಾರಿಸುವ ಕಂಪನಿಗೆ ಸರಿಯಾದ ಪಾಠವನ್ನು ಕಲಿಸಲು ಮಾಡಿದ್ದರು ಎನ್ನಲಾಗಿರುವ ಕೆಲಸ ಬಹಳಷ್ಟು ಆಸಕ್ತಿಕರ ಹಾಗೂ ರೋಚಕವಾಗಿದೆ. ಈ ಕಥೆಯು 1920 ರ ಕಾಲಾವಧಿಯಲ್ಲಿ ನಡೆದಿತ್ತು ಎನ್ನಲಾಗಿದ್ದು, ಆ ಸಂದರ್ಭದಲ್ಲಿ ಮಹಾರಾಜ ಜಯಸಿಂಹ ಪ್ರಭಾಕರ್ ಅವರು ಅವರು ಲಂಡನ್ ನಗರದಲ್ಲಿ ಇದ್ದರು. ಒಂದು ದಿನ ಮಹಾರಾಜರು ತಮ್ಮ ರಾಜ ಉಡುಗೆಯ ಬದಲಾಗಿ, ಸಾಮಾನ್ಯ ವಸ್ತ್ರಗಳನ್ನು ತೊಟ್ಟು ಲಂಡನ್ ನಗರವನ್ನು ಸುತ್ತಿ ಬರಲು ಹೊರಗಡೆ ಹೋದರು.

ಹಾಗೆ ಅವರು ನಗರವನ್ನು ಸುತ್ತುವಾಗ ಅವರ ದೃಷ್ಟಿಯು ಐಷಾರಾಮಿ ಕಾರುಗಳನ್ನು ಮಾರಾಟ ಮಾಡುವ ರೋಲ್ಸ್ ರಾಯ್ಸ್ ಕಾರುಗಳ ಶೋ ರೂಂ ಒಂದರ ಕಡೆಗೆ ಹರಿಯಿತು. ಆ ಶೋರೂಮ್ ನಲ್ಲಿ ಇದ್ದಂತಹ ಒಂದು ಕಾರು ಅವರಿಗೆ ಬಹಳ ಇಷ್ಟವಾಯಿತು. ಆ ಕಾರನ್ನು ನೋಡುವ ಸಲುವಾಗಿ ಮಹಾರಾಜರು ಶೋ ರೂಮಿ‌ನ ಒಳಗೆ ಹೋದರು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ವಸ್ತ್ರ ತೊಟ್ಟಿದ್ದ ಅವರನ್ನು ನೋಡಿದ ಅಲ್ಲಿನ ಕರ್ಮಚಾರಿಗಳು ಇವರನ್ನು ಒಬ್ಬ ಬಡ ಭಾರತೀಯ ಎಂದು ಪರಿಗಣಿಸಿ, ಅವರು ಬಂದಿರುವ ವಿಚಾರವನ್ನಾಗಲಿ, ಅವರು ಯಾರು ಎನ್ನುವುದನ್ನು ಕೇಳುವುದಾಗಲೀ ಮಾಡದೆ ಶೋರೂಮ್ ನಿಂದ‌ ಹೊರಗಡೆ ಕಳುಹಿಸಿಬಿಟ್ಟರು.

ಶೋರೂಂನಲ್ಲಿ ತನಗೆ ಆದ ಅವಮಾನದಿಂದ ರಾಜಾ ಜಯಸಿಂಹ ಪ್ರಭಾಕರ ಅವರು ಬಹಳ ಬೇಸರ ಪಟ್ಟುಕೊಂಡರು. ರೋಲ್ಸ್ ರಾಯ್ಸ್ ಕಂಪನಿಗೆ ಸರಿಯಾದ ಪಾಠ ಕಲಿಸುವ ನಿರ್ಧಾರ ಮಾಡಿದರು. ಅವರು ಹೋಟೆಲ್ ಗೆ ಹಿಂದಿರುಗಿದ ಮೇಲೆ, ಶೋರೂಮ್ ಗೆ ಕಾರನ್ನು ಖರೀದಿ ಮಾಡಲು ಅಲ್ವಾರ್ ನ ಮಹಾರಾಜ ಬರುತ್ತಿದ್ದಾರೆ ಎನ್ನುವ ಸಂದೇಶ ಕಳುಹಿಸಿದರು. ಆಗ ಅಲ್ಲಿನ ಕರ್ಮಚಾರಿಗಳು ರಾಜನ ಆಗಮನದ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿ ಕೊಂಡರು. ಮಹಾರಾಜ ಜಯಸಿಂಹ ಪ್ರಭಾಕರ್ ಅವರು ರಾಜನ ಪೋಷಾಕು ಧರಿಸಿಕೊಂಡು ಮತ್ತೊಮ್ಮೆ ಶೋರೂಮ್ ಗೆ ಅಡಿಯಿಟ್ಟರು.

ಸ್ವಲ್ಪ ಹೊತ್ತಿಗೆ ಮುಂಚೆಯೇ ಸಾಮಾನ್ಯನೆಂದು ಹೊರಗೆ ಕಳುಹಿಸಿದ ವ್ಯಕ್ತಿಯನ್ನು ರಾಜನ ರೂಪದಲ್ಲಿ ನೋಡಿ ಅಲ್ಲಿನ ಕರ್ಮಚಾರಿಗಳು ಆಶ್ಚರ್ಯ ಪಟ್ಟರು.
ಮಹಾರಾಜ ಜಯಸಿಂಹ ಪ್ರಭಾಕರ್ ಅಲ್ಲಿದ್ದಂತಹ ಏಳು ಕಾರುಗಳನ್ನು ಖರೀದಿ ಮಾಡಿದರು. ಶೋ ರೂಂ ನ ಕರ್ಮಚಾರಿಗಳು ಬಹಳ ಸಂತೋಷಪಟ್ಟರು. ಆದರೆ ಮಹಾರಾಜ ಜಯಸಿಂಹ ಪ್ರಭಾಕರ ಅವರು ಆ ಕಾರುಗಳನ್ನು ಏಮು ಮಾಡಲಿದ್ದಾರೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಮಹಾರಾಜರು ಭಾರತಕ್ಕೆ ಹಿಂದಿರುಗಿದ ಮೇಲೆ ದುಬಾರಿ ಬೆಲೆ ನೀಡಿ ಕೊಂಡುತಂದಿದ್ದ ಸುಪ್ರಸಿದ್ಧ ಕಂಪನಿಯ ಐಷಾರಾಮಿ ಕಾರುಗಳನ್ನು ನಗರಪಾಲಿಕೆಗೆ ಕಾಣಿಕೆಯಾಗಿ ನೀಡಿದರು.

ಅಲ್ಲದೆ ಇನ್ನು ಮುಂದೆ ನಗರದ ರಸ್ತೆಗಳಲ್ಲಿ ಕಸವನ್ನು ಸಂಗ್ರಹಿಸಲು ರೋಲ್ಸ್ ರಾಯ್ಸ್ ಕಾರುಗಳನ್ನು ಬಳಸುವಂತೆ ಆದೇಶ ನೀಡಿದರು. ಇದು ರೋಲ್ಸ್ ರಾಯ್ಸ್ ಕಂಪನಿಯ ಕಾರುಗಳಿಗೆ ಆದಂತಹ ದೊಡ್ಡ ಅವಮಾನವಾಗಿತ್ತು. ರೋಲ್ಸ್ ರಾಯ್ಸ್ ಕಂಪನಿಯ ಜನರು ಬಗ್ಗೆ ವ್ಯಂಗ್ಯ ಮಾಡತೊಡಗಿದರು. ಭಾರತದಲ್ಲಿ ಕಸ ಸಂಗ್ರಹಣೆಗೆ ಬಳಸುವ ಕಾರುಗಳನ್ನು ನಾವೇಕೆ ಕೊಂಡುಕೊಳ್ಳಬೇಕು ಎಂದು ಹಿಂದೇಟು ಹಾಕಿದರು. ಹೀಗೆ ರಾಜಾ ಜಯಸಿಂಹ ಪ್ರಭಾಕರ್ ತನಗೆ ಲಂಡನ್ ನಗರದಲ್ಲಿ ಆದ ಅವಮಾನದ ಬದಲಾಗಿ ರೋಲ್ಸ್ ರಾಯ್ಸ್ ಕಂಪನಿಗೆ ಸರಿಯಾದ ಪಾಠವನ್ನು ಕಲಿಸಿದ್ದರು.

ಇವೆಲ್ಲಾ ಘಟನೆಗಳ ನಂತರ ರೋಲ್ಸ್ ರಾಯ್ಸ್ ಕಾರು ಕಂಪನಿ ಮಹಾರಾಜರಿಗೆ ಒಂದು ಪತ್ರವನ್ನು ಬರೆದು ಎಂದು ತಮ್ಮ ಶೋ ರೂಮಿನ ಕರ್ಮಚಾರಿಗಳು ಮಾಡಿದ ತಪ್ಪಿಗೆ ಕ್ಷಮಾಪಣೆಯನ್ನು ಕೇಳಿತು. ಯಾವಾಗ ರೋಲ್ಸ್ ರಾಯ್ಸ್ ಕಂಪನಿ ಕ್ಷಮೆ ಯಾಚಿಸಿತೋ ಅದಾದ ಮೇಲೆ ರಾಜಾ ಜಯಸಿಂಹ ಪ್ರಭಾಕರ್ ಅವರು ತಾನು ನಗರ ಪಾಲಿಕೆ ಗೆ ಕಸ ಸಂಗ್ರಹಿಸಲು ನೀಡಿದ್ದ ಕಾರುಗಳಲ್ಲಿ ಇನ್ನು ಮುಂದೆ ಕಸ ಸಂಗ್ರಹಣೆ ಮಾಡುವುದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು.

Leave a Reply

Your email address will not be published. Required fields are marked *