ರೋಮ್ಯಾನ್ಸ್ ದೃಶ್ಯ ಜಾಸ್ತಿ ಅಂತ ಸೂಪರ್ ಹಿಟ್ ಸಿನಿಮಾಕ್ಕೆ NO ಅಂದಿದ್ರು ಈ ನಟಿ!! ಯಾವುದು ಆ ಸೂಪರ್ ಹಿಟ್ ಸಿನಿಮಾ??

Entertainment Featured-Articles News

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಒಂದು ಹೊಸ ಅಲೆಯನ್ನು ಹಾಗೂ ಸಂಚಲನವನ್ನು ಸೃಷ್ಟಿಸಿದ ಸಿನಿಮಾ ಅರ್ಜುನ್ ರೆಡ್ಡಿ. ಈ ಸಿನಿಮಾ ಒಂದು ವಿಭಿನ್ನವಾದ ಪ್ರೇಮಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬಂದಿತ್ತು. ಈ ಸಿನಿಮಾ ವಿಶೇಷವಾಗಿ
ಯುವಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸು ಪಡೆದುಕೊಂಡಿತ್ತು. ಈ ಸಿನಿಮಾ ತೆಲುಗು ಸಿನಿಮಾ ರಂಗದಲ್ಲಿ ಪ್ರಸ್ತುತ ಸ್ಟಾರ್ ನಟನಾಗಿ ಮಿಂಚುತ್ತಿರುವ ನಟ ವಿಜಯ್ ದೇವರಕೊಂಡ ಅವರ ವೃತ್ತಿ ಜೀವನದಲ್ಲಿ ಅವರಿಗೆ ಬಹುದೊಡ್ಡ ಬ್ರೇಕ್ ನೀಡಿದ ಸಿನಿಮಾವೂ ಆಗಿತ್ತು. ಅಲ್ಲದೇ ಸಿನಿಮಾ ಒಂದು ರೀತಿಯ ಹೊಸ ಕಿಕ್ ಒಂದನ್ನು ನೀಡುವ ಮೂಲಕ ಎಲ್ಲರನ್ನು ತನ್ನ ಕಡೆಗೆ ಸೆಳೆದಿತ್ತು.

ಹೌದು, ಈ ಸಿನಿಮಾದ ಮೂಲಕ ವಿಜಯ್ ದೇವರಕೊಂಡ ಯುವಕರ ಅಭಿಮಾನ ನಟನಾಗಿ ಅಪಾರ ಜನಪ್ರಿಯತೆ ಹಾಗೂ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡರು. ಈ ಸಿನಿಮಾ ಬಂಡವಾಳವನ್ನು ಮೀರಿದ ಲಾಭವನ್ನು ಪಡೆದುಕೊಂಡು ಭರ್ಜರಿ ವಿಜಯವನ್ನು ತನ್ನದಾಗಿಸಿಕೊಂಡಿತ್ತು. ನಾಯಕ ವಿಪರೀತ ಕುಡಿಯುವ, ಧೂಮಪಾನ ಮಾಡುವ ಹುಡುಗನಾದರೂ, ತಾನು ಇಷ್ಟಪಟ್ಟ ಹುಡುಗಿ ತನ್ನ ಜೀವನದುದ್ದಕ್ಕೂ ಬಾಳಸಂಗಾತಿಯಾಗಿ ತನ್ನ ಜೊತೆಗಿರಬೇಕೆಂದು ಬಯಸುವ ಹಠ ಮಾರಿ ಯುವಕನಾಗಿ, ಯುವಕ ಯುವತಿಯರ ಮನಸ್ಸನ್ನು ಗೆದ್ದಿದ್ದನು.

ಇಷ್ಟೆಲ್ಲಾ ಸದ್ದು ಮಾಡಿದ ಈ ಸಿನಿಮಾದಲ್ಲಿ ನಾಯಕಿಯಾಗಲು ಸಿಕ್ಕ ಅವಕಾಶವನ್ನು ನಟಿಯೊಬ್ಬರು ತಿರಸ್ಕರಿಸಿದ್ದರು ಎಂದರೆ ಆಶ್ಚರ್ಯ ಆಗಬಹುದು. ಹೌದು, ಈ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ನಟಿ ಪಾರ್ವತಿ ನಾಯರ್ ಅವರಿಗೆ ದಕ್ಕಿತ್ತು ಎನ್ನುವ ವಿಚಾರವನ್ನು ಖುದ್ದು, ನಟಿಯೇ ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ಪಾರ್ವತಿ ನಾಯರ್ ಅವರನ್ನು ಅಭಿಮಾನಿಯೊಬ್ಬರು ಈ ಕುರಿತಾಗಿ ಪ್ರಶ್ನೆ ಮಾಡಿದ್ದಾರೆ.

ಅಭಿಮಾನಿಯು ನಟಿಯನ್ನು ಪ್ರಶ್ನೆ ಮಾಡುತ್ತಾ, “ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಹೆಚ್ಚು ರೋಮ್ಯಾನ್ಸ್ ದೃಶ್ಯಗಳು ಇದೆ ಎನ್ನುವ ಕಾರಣಕ್ಕೆ ನೀವು ಸಿನಿಮಾ ತಿರಸ್ಕರಿಸಿದ್ದು ನಿಜವೇನು?? ಹಾಗೆ ಸಿನಿಮಾ ತಿರಸ್ಕರಿಸಿದ್ದಕ್ಕೆ ಪಶ್ಚಾತಾಪ ಪಡುತ್ತಿರುವಿರಾ? ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ನೀಡಿರುವ ನಟಿ ಪಾರ್ವತಿ ನಾಯರ್ ಅವರು ಹೌದು ನಾನು ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದು ನಿಜವಾದ ವಿಷಯವಾಗಿದೆ. ಅದೊಂದು ಸೂಪರ್ ಹಿಟ್ ಸಿನಿಮಾ. ನಾನು ಸಿನಿಮಾ ಮಿಸ್ ಮಾಡಿಕೊಳ್ಳಬಾರದಿತ್ತು ಎಂದಿದ್ದಾರೆ.‌

ಅಲ್ಲದೇ ಇದೇ ವೇಳೆ, ನಾನು ಒಂದು ವಿಚಾರವನ್ನು ನಂಬುತ್ತೇನೆ. ನಮ್ಮದು ಅಥವಾ ನಮಗೆ ಸೇರಬೇಕು ಎನ್ನುವುದಾದರೆ ಅದು ಯಾವುದಾದರೂ ಒಂದು ಹಾದಿಯಲ್ಲಿ ನಮ್ಮನ್ನು ಹುಡುಕಿಕೊಂಡು ಬಂದು ಸೇರುತ್ತದೆ. ಹೀಗಾಗಿ ಇನ್ನು ಉತ್ತಮ ಕಥೆಗಳು ನನ್ನನ್ನು ಹುಡುಕಿಕೊಂಡು ಬರುತ್ತವೆ ಎನ್ನುವ ಧನಾತ್ಮಕ ವಿಚಾರಧಾರೆಯನ್ನು ಅವರು ಹಂಚಿಕೊಂಡಿದ್ದಾರೆ. ನಟಿ ಪಾರ್ವತಿ ನಾಯರ್ ಕನ್ನಡದ ವಾಸ್ಕೋಡಿಗಾಮ ಸಿನಿಮಾದಲ್ಲಿ ನಟಿಸಿದ್ದರು.

Leave a Reply

Your email address will not be published.