ರೋಗಗಳನ್ನು ದೂರ ಮಾಡಿ, ಉತ್ತಮ ಆರೋಗ್ಯ ಪಡೆಯಲು ಯಾವ ಸಮಯದಲ್ಲಿ ಸ್ನಾನ ಮಾಡುವುದು ಸೂಕ್ತ??

Written by Soma Shekar

Published on:

---Join Our Channel---

ಪ್ರತಿ ನಿತ್ಯ ಸ್ನಾನವನ್ನು ಮಾಡುವುದು ಒಂದು ಉತ್ತಮವಾದ ಅಭ್ಯಾಸ ಎನ್ನುವುದನ್ನು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದೇಶದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಸಹಾ ಪರದಾಡುವ ಜನರಿಗೆ ನಿತ್ಯ ಸ್ಯಾನದ ಮಾತು ನಿಜಕ್ಕೂ ಅನ್ವಯವಾಗುವುದಿಲ್ಲವೇನೋ ಎನ್ನುವ ಮಟ್ಟಕ್ಕೆ ನೀರಿನ ಕೊರತೆಯುಂಟಾಗುತ್ತಿದೆ. ಆದರೆ ಸ್ನಾನ ಎನ್ನುವುದು ಒಂದು ಆರೋಗ್ಯಕರ ಅಭ್ಯಾಸ ಎನ್ನುವುದು ಕೂಡಾ ವಾಸ್ತವ. ಸ್ನಾನ ಮಾಡುವುದರಿಂದ ನಾವು ಅನೇಕ ರೋಗಗಳನ್ನು ನಮ್ಮಿಂದ ದೂರ ಮಾಡಬಹುದು ಹಾಗೂ ದೇಹ ಆರೋಗ್ಯವಾಗಿದ್ದರೆ, ಮನಸ್ಸು ಸಹಾ ಆರೋಗ್ಯವಾಗಿರುತ್ತದೆ. ಶರೀರ ಮಾತ್ರವಲ್ಲದೇ ಮಾನಸಿಕ ನೆಮ್ಮದಿಯನ್ನು ಪಡೆಯಲು ಸಹಾ ನಿತ್ಯ ಸ್ನಾನವನ್ನು ಮಾಡುವುದು ಬಹಳ ಮುಖ್ಯವಾಗಿದೆ.

ಬೆಳಿಗ್ಗೆ ಎದ್ದ ಕೂಡಲೇ ಮನಸ್ಸಿನ ಏಕಾಗ್ರತೆ ಹಾಗೂ ಅದರ ನಿಯಂತ್ರಣಕ್ಕೆ ಶರೀರವು ಶುದ್ಧವಾಗಿರುವುದು ಅತ್ಯಾವಶ್ಯಕ ಆಗಿದ್ದು, ಬೆಳಿಗ್ಗೆ ಸ್ನಾನವನ್ನು ಮಾಡುವುದು ಒಂದು ಉತ್ತಮವಾದ ಅಭ್ಯಾಸ. ಹೀಗೆ ಬೆಳಿಗ್ಗೆ ಎದ್ದ ಕೂಡಲೇ ಸ್ನಾನವನ್ನು ಮಾಡುವುದರಿಂದ ಮನಸ್ಸಿಗೆ ನಿರಾಳ ಎನಿಸುತ್ತದೆ. ನಮ್ಮ ಕೆಲಸಗಳನ್ನು ಮಾಡಲು ನಮ್ಮಲ್ಲಿ ಒಂದು ಹೊಸ ಚೈತನ್ಯ ಮೂಡುತ್ತದೆ. ಮಾಡುವ ಕೆಲಸಗಳ ಬಗ್ಗೆ ನಮಗೆ ಆಸಕ್ತಿಯನ್ನು ಉಂಟು ಮಾಡುತ್ತದೆ. ಇನ್ನು ಸಂಜೆಯ ವೇಳೆ ಸ್ನಾನ ಮಾಡುವುದರಿಂದಲೂ ನಮಗೆ ಅನೇಕ ಲಾಭಗಳಿವೆ ಅಂದರೆ ಸಂಜೆ ಸ್ನಾನವೂ ಆರೋಗ್ಯಕ್ಕೆ ಲಾಭಕಾರಿಯಾಗಿರುತ್ತವೆ.

ಬೆಳಿಗ್ಗೆ ಯಿಂದ ಮಾಡಿದ ಕೆಲಸಗಳಿಂದ ಮೈಗೆ ಅಂಟಿದ ಧೂಳು, ಬಂದ ಬೆವರು ಹಾಗೂ ವೈರಸ್ ಗಳನ್ನು ಸಂಜೆ ಸ್ನಾನ ಮಾಡಿದಾಗ ನಮ್ಮಿಂದ ದೂರ ಮಾಡಬಹುದು. ಸಂಜೆ ಸ್ನಾನ ಮಾಡುವುದರಿಂದ ನಮ್ಮ ಚರ್ಮದ ಕಾಂತಿ ಸಹಾ ಹೆಚ್ಚುತ್ತದೆ ಎನ್ನಲಾಗಿದೆ. ಸಂಜೆ ಸ್ನಾನದಿಂದ‌ ರಾತ್ರಿ ಚೆನ್ನಾಗಿ ನಿದ್ರೆ ಸಹಾ ಬರುತ್ತದೆ. ದಣಿದ ದೇಹ ಹಾಗೂ ಮನಸ್ಸಿಗೆ ಸಂಜೆಯ ಸ್ನಾನ ಒಂದು ನೆಮ್ಮದಿಯನ್ನು ನೀಡುತ್ತದೆ. ಹೀಗೆ ಬೆಳಿಗ್ಗೆ ಮತ್ತು ಸಂಜೆ ಎರಡೂ ವೇಳೆಯಲ್ಲಿ ಮಾಡುವ ಸ್ನಾನಗಳು ಸಹಾ ನಮ್ಮ‌ ದೇಹ ಹಾಗೂ ಆರೋಗ್ಯದ ಮೇಲೆ ಉತ್ತಮವಾದ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಬಹುದು.

ಹೀಗೆ ದಿನ ನಿತ್ಯ ಸ್ನಾನವನ್ನು ಮಾಡುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ದೇಹದ ಶಾಖ, ಉಷ್ಣತೆಯು ಕಡಿಮೆಯಾಗಿ ದೇಹದ ಶಾಖವನ್ನು ಸಮತೋಲನವಾಗಿಡಲು ನೆರವನ್ನು ನೀಡುವುದು. ಉತ್ತಮವಾದ ನಿದ್ರೆಗೆ ಸಹಾಯಕವಾಗಿದೆ. ‌ಹೀಗೆ ನಿತ್ಯ ಎರಡು ಬಾರಿ ಸ್ನಾನವನ್ನು ಮಾಡಿದರೆ ಆರೋಗ್ಯದ ದೃಷ್ಟಿಯಿಂದ ಅದು ಬಹಳ ಉತ್ತಮ ಎನ್ನಲಾಗಿದೆ. ಎರಡು ಬಾರಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಒಂದು ಬಾರಿಯಾದರೂ ಸ್ನಾನ ಮಾಡುವುದು ಅತ್ಯಾವಶ್ಯಕ. ಅದರಲ್ಲೂ ಕೊರೊನಾ ದಂತಹ ಸಾಂಕ್ರಾಮಿಕದ ಈ ಕಾಲದಲ್ಲಿ ನಮ್ಮ ಆರೋಗ್ಯ ನಮ್ಮ‌ ಕೈಯಲ್ಲೇ ಇದೆ.

Leave a Comment