ರೈಲು ಹಳಿಗಳ ನಡುವೆ ಕಲ್ಲು ಹಾಕೋದಾದ್ರೂ ಏಕೆ? ಇಲ್ಲಿದೆ ಅದರ ಹಿಂದಿನ ರೋಚಕ ಕಾರಣಗಳು!!

Written by Soma Shekar

Updated on:

---Join Our Channel---

ರೈಲ್ವೆ ಹಳಿಗಳು ನಮ್ಮ ಕಣ್ಣಿಗೆ ಬಹಳ ಸಾಮಾನ್ಯವಾಗಿ ಕಾಣುತ್ತವೆ. ಆದರೆ ವಾಸ್ತವವಾಗಿ ಅವು ಅಷ್ಟೊಂದು ಸಾಮಾನ್ಯ ಖಂಡಿತ ಅಲ್ಲ. ಹಳಿಗಳ ಕೆಳಗೆ ಕಾಂಕ್ರೀಟ್ ನಿಂದ ಮಾಡಿದ ಪ್ಲೇಟ್ ಗಳು ಇರುತ್ತವೆ. ಇವುಗಳನ್ನು ಸ್ಲೀಪರ್ಸ್ ಎಂದು ಕರೆಯಲಾಗುತ್ತದೆ. ಸ್ಲೀಪರ್ ಗಳ ಕೆಳಗೆ ಕಲ್ಲು ಇರುತ್ತದೆ, ಅದನ್ನು ಬ್ಯಾಲೆಟ್ಸ್ ಎಂದು ಕರೆಯಲಾಗುತ್ತದೆ. ಇದರ ಕೆಳಗೆ ಮಣ್ಣಿನ ಎರಡು ಪದರಗಳು ಇದ್ದು, ಅದರ ಕೆಳಗೆ ಕೊನೆಯ ಹಂತದಲ್ಲಿ ಸಾಮಾನ್ಯ ನೆಲ ಇರುತ್ತದೆ. ಕಬ್ಬಿಣದಿಂದ ತಯಾರಾದ ರೈಲಿನ ತೂಕವು ಸುಮಾರು ಒಂದು ಮಿಲಿಯನ್ ಕಿಲೋ ಗ್ರಾಂ ಇರುತ್ತದೆ ಎನ್ನಲಾಗಿದೆ.

ಇಷ್ಟೊಂದು ಭಾರಿ ತೂಕವನ್ನು ಕೇವಲ ರೈಲ್ವೆ ಹಳ್ಳಿಗಳಿಂದ ನಿಭಾಯಿಸುವುದು ಸಾಧ್ಯವಿಲ್ಲ. ಬಹಳ ತೂಕ ಇರುವ ರೈಲನ್ನು ನಿಭಾಯಿಸುವಲ್ಲಿ ರೈಲ್ವೆ ಹಳಿಗಳು, ಕಾಂಕ್ರೀಟ್ ಸ್ಲೀಪರ್ ಗಳು, ಬ್ಯಾಲೆಟ್ಸ್ ಎಲ್ಲವೂ ತಮ್ಮ ಕೊಡುಗೆಯನ್ನು ನೀಡುತ್ತವೆ. ಆದರೆ ಒಂದು ರೀತಿಯಲ್ಲಿ ನೋಡಿದಾಗ ಹೆಚ್ಚಿನ ಹೊರೆಯು ಕಲ್ಲುಗಳ ಮೇಲೆ ಬೀಳುತ್ತದೆ. ಹಳಿಗಳ ನಡುವೆ ಇರುವ ಕಲ್ಲುಗಳ ಕಾರಣದಿಂದಲೇ ಕಾಂಕ್ರೀಟ್ ನಿಂದ ತಯಾರಿಸಲ್ಪಟ್ಟ ಸ್ಲೀಪರ್ ಗಳು ಪಕ್ಕಕ್ಕೆ ಸರಿಯದೇ ತಮ್ಮ ಸ್ಥಾನದಲ್ಲಿ ಗಟ್ಟಿಯಾಗಿರಲು ಸಾಧ್ಯ ವಾಗಿದೆ.

ರೈಲ್ವೆ ಹಳಿಗಳ ಮೇಲೆ ಕಲ್ಲುಗಳನ್ನು ಹರಡದೆ ಹೋದರೆ ಅಲ್ಲಿ ಸಣ್ಣ ಸಣ್ಣ ಗಿಡಗಳು ಹುಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಮುಂದೆ ಅವು ಬೆಳೆದು ದೊಡ್ಡ ಮರಗಳು ಕೂಡಾ ಆಗಬಹುದು. ಹೀಗೆ ಟ್ರ್ಯಾಕ್ ಗಳ ಮೇಲೆ ಗಿಡ ಮರಗಳು ಬೆಳೆದುಕೊಂಡರೆ ಅದರಿಂದ ರೈಲು ಸಂಚಾರಕ್ಕೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಆದ್ದರಿಂದಲೇ ಅಂತಹ ಪರಿಸ್ಥಿತಿ ಎದುರಾಗದೇ ಇರಲಿ ಎನ್ನುವ ಮುಂದಾಲೋಚನೆಯಿಂದ ಕಲ್ಲುಗಳನ್ನು ಹರಡಲಾಗುತ್ತದೆ.

ಹಳಿಗಳ ಮೇಲೆ ರೈಲು ಚಲಿಸುವಾಗ ಕಂಪನವೊಂದು ಉತ್ಪತ್ತಿಯಾಗುತ್ತದೆ. ಈ ಕಂಪನವು ಉಂಟಾದ ಪರಿಣಾಮದಿಂದ ರೈಲ್ವೆ ಹಳಿಗಳು ಹಿಗ್ಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂತಹ ಪರಿಣಾಮವನ್ನು ತಪ್ಪಿಸುವ ಸಲುವಾಗಿ ಹಾಗೂ ಕಂಪನವನ್ನು ಕಡಿಮೆ ಮಾಡುವ ಸಲುವಾಗಿ ಹಳಿಗಳ ನಡುವೆ ಕಲ್ಲುಗಳನ್ನು ಹರಡಲಾಗುತ್ತದೆ. ರೈಲು ಹಳಿಯ ಮೇಲೆ ಚಲಿಸುವಾಗ ಅದರ ಭಾರವೆಲ್ಲ ಕಾಂಕ್ರೀಟ್ ನಿಂದ ತಯಾರಿಸಲ್ಪಟ್ಟ ಸ್ಲೀಪರ್ ಗಳ ಮೇಲೆ ಬೀಳುತ್ತದೆ.

ಸ್ಲೀಪರ್ ಗಳ ಮೇಲೆ ಇರುವ ಕಲ್ಲುಗಳು ಕಾಂಕ್ರೀಟ್ ಸ್ಲೀಪರ್ ಗಳು ಸ್ಥಿರವಾಗಿರಲು ನೆರವನ್ನು ನೀಡುತ್ತದೆ. ಈ ಕಲ್ಲುಗಳಿಂದಾಗಿ ಸ್ಲೀಪರ್ ಗಳು ಜಾರುವುದಿಲ್ಲ. ಹಳಿಗಳ ಮೇಲೆ ಕಲ್ಲುಗಳನ್ನು ಹಾಕುವ ಮತ್ತೊಂದು ಉದ್ದೇಶ ಏನೆಂದರೆ ಮಳೆ ಅಥವಾ ಇನ್ನಾವುದೇ ಕಾರಣದಿಂದ ನೀರು ನಿಲ್ಲದೇ ಇರಲಿ ಎನ್ನುವುದು ಆಗಿದೆ. ಮಳೆನೀರು ಹಳಿಯ ಮೇಲೆ ಬಿದ್ದಾಗ ಅದು ಕಲ್ಲಿನ ಮುಖಾಂತರ ಹಾದು ಹೋಗುವುದರಿಂದ ನೀರು ನಿಲ್ಲುವ ಸಮಸ್ಯೆ ಉಂಟಾಗುವುದಿಲ್ಲ. ಹಳ್ಳಿಗಳಲ್ಲಿ ಹಾಕಿರುವ ಕಲ್ಲುಗಳು ನೀರಿನಲ್ಲಿ ಹರಿದು ಹೋಗುವುದಿಲ್ಲ.

Leave a Comment