ರೈಲಲ್ಲಿ ಮೊಬೈಲ್ ಕದಿಯೋಕೆ ಹೋಗಿ ತಗ್ಲಾಕ್ಕೊಂಡ ಕಳ್ಳ: ಕಿಟಕಿ ಬಳಿ 10 ಕಿಮೀ ಪಟ್ಟ ಪಾಡು ಅಷ್ಟಿಷ್ಟಲ್ಲ!!
ಬಸ್, ರೈಲು ನಿಲ್ದಾಣಗಳಲ್ಲಿ ಸಾಮಾನ್ಯವಾಗಿಯೇ ವಸ್ತುಗಳನ್ನು ಕದಿಯುವ ಕಳ್ಳ ಕಾಕರ ಆ ತಂ ಕ ಇದ್ದೇ ಇರುತ್ತದೆ. ಆದ್ದರಿಂದಲೇ ಇಂತಹ ಸ್ಥಳಗಳಲ್ಲಿ ಅದರಲ್ಲೂ ಜನ ಹೆಚ್ಚಾಗಿರುವ ಕಡೆಗಳಲ್ಲಿ ನಮ್ಮ ವಸ್ತುಗಳ ಬಗ್ಗೆ ನಾವು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗಿರುತ್ತದೆ. ಏಕೆಂದರೆ ಇಂದಿನ ದಿನಗಳಲ್ಲಿ ಕಳ್ಳರು ಸಹಾ ಬಹಳ ಚಾಲಾಕಿತನವನ್ನು ಪ್ರದರ್ಶನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಕದಿಯಲು ಹೋಗಿ, ತಾನೇ ಸಿಕ್ಕಿ ಬಿದ್ದು, ಪಡಬಾರದ ಪಾಡು ಪಡುತ್ತಾ, ಇನ್ನು ಮುಂದೆ ಕಳ್ಳತನ ಮಾಡುವುದಿಲ್ಲ ಎಂದು ಬೇಡಿಕೊಂಡು ಫಜೀತಿ ಮಾಡಿಕೊಂಡ ಇಡೀ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಕಳ್ಳನಿಗೆ ತಕ್ಕ ಶಿ ಕ್ಷೆ ಆಗಿದೆ ಎಂದು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇಷ್ಟಕ್ಕೂ ಈ ಘಟನೆ ಏನು ಎನ್ನುವ ವಿವರಗಳಿಗೆ ಹೋದರೆ, ಸೆಪ್ಟೆಂಬರ್ 14 ರಂದು ಬಿಹಾರದಲ್ಲಿ ಈ ಘಟನೆಯು ನಡೆದಿದೆ. ರೈಲಿನಲ್ಲಿ ಕಿಟಕಿ ಬಳಿ ಕುಳಿತು ಪ್ರಯಾಣ ಮಾಡುತ್ತಿದ್ದು ಪ್ರಯಾಣಿಕರೊಬ್ಬರ ಮೊಬೈಲ್ ಕಳ್ಳತನ ಮಾಡಲು ಹೋದ ಕಳ್ಳ ಅವರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೇ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಗೋಳಾಡಿದ್ದಾನೆ. ರೈಲು ಬೆಗುಸರಾಯ್ ನಿಂದ ಖಗರಿಯಾಗೆ ಹೊರಟಿತ್ತು. ಮಾರ್ಗ ಮಧ್ಯೆ ಸಾಹೇಬ್ ಪುರ ಕಮಲ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬನು ಕಿಟಕಿಯ ಒಳಗೆ ಕೈ ಹಾಕಿ ಪ್ರಯಾಣಿಕನ ಮೊಬೈಲ್ ಉಡಾಯಿಸಲು ಪ್ರಯತ್ನ ಮಾಡಿದ್ದಾನೆ. ಆದರೆ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಗೆ ಅನಂತರ ನರಳುವಂತಾಗಿದೆ.
ಮೊಬೈಲ್ ಕಸಿದುಕೊಳ್ಳಲು ಕಳ್ಳ ಮಾಡಿದ ಪ್ರಯತ್ನದಿಂದ ಕೂಡಲೇ ಎಚ್ಚೆತ್ತುಕೊಂಡ ಪ್ರಯಾಣಿಕ ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಅದೇ ವೇಳೆ ರೈಲು ಚಲಿಸಲು ಆರಂಭಿಸಿದೆ. ಕಳ್ಳ ಆಗ ತನ್ನ ಕೈಯನ್ನು ದಯವಿಟ್ಟು ಬಿಡಿ ಎಂದು ಪ್ರಯಾಣಿಕರ ಬಳಿ ಬೇಡಿಕೊಂಡು ಗೋಳಾಡಿದ್ದಾನೆ. ಆದರೂ ಪ್ರಯಾಣಿಕ ಮಾತ್ರ ಕಳ್ಳನ ಕೈ ಯನ್ನು ಬಿಟ್ಟಿಲ್ಲ. ಹೀಗೆ ಪ್ರಯಾಣಿಕನ ಕೈಯಿಂದ ಬಿಡಿಸಿಕೊಳ್ಳಲಾಗದೇ ಬರೋಬ್ಬರಿ ಹತ್ತು ಕಿಲೋ ಮೀಟರ್ ದೂರದವರೆಗೂ ಕಳ್ಳ ರೈಲಿನ ಕಿಟಕಿಯ ಬಳಿ ತೂಗಾಡುತ್ತಾ, ಜೋತಾಡುತ್ತಾ ಬಂದಿದ್ದಾನೆ. ಇಡೀ ದೃಶ್ಯದ ವೀಡಿಯೋ ಈಗ ವೈರಲ್ ಆಗಿದೆ.
ಕೊನೆಗೆ ಹತ್ತು ಕಿಲೋಮೀಟರ್ ಹೀಗೆ ಬಂದ ಮೇಲೆ ರೈಲು ಖಗಾರಿಯಾದ ಕಡೆಗೆ ಹೋಗುವಾಗ ಕಳ್ಳನ ಕೈ ಬಿಟ್ಟಿದ್ದಾರೆ ಎನ್ನಲಾಗಿದ್ದು, ಅನಂತರ ಕಳ್ಳ ಅಲ್ಲಿಂದ ಓಡಿ ಹೋಗಿದ್ದಾನೆಂದು ಸ್ಥಳೀಯರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವೀಡಿಯೋ ನೋಡಿ ಜನರು ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಬಹಳಷ್ಟು ಜನರು ಅವನು ಇನ್ನೆಂದೂ ಕೂಡಾ ರೈಲಿನಲ್ಲಿ ಕಳ್ಳತನ ಮಾಡುವ ಧೈರ್ಯ ಮಾಡುವುದಿಲ್ಲ ಎಂದಿದ್ದಾರೆ. ಮತ್ತೆ ಕೆಲವರು ಅವನಿಗೆ ಸರಿಯಾದ ಪಾಠವನ್ನು ಕಲಿಸಿದ್ದಾರೆ, ಕಷ್ಟಪಟ್ಟು ಗಳಿಸಿದವರಿಗೆ ವಸ್ತುಗಳು ಕಳೆದುಕೊಂಡಾಗ ಆಗುವ ವೇದನೆ ಅವರಿಗೆ ಮಾತ್ರ ಗೊತ್ತು ಎಂದಿದ್ದಾರೆ.