ರಿವಾಲ್ವರ್ ಹಿಡಿದು ವೀಡಿಯೋ ಮಾಡಿದ ಮಹಿಳಾ ಪೋಲಿಸ್, ಸಿಕ್ಕಾಪಟ್ಟೆ ಟ್ರೋಲಿಂದ ಬೇಸರಗೊಂಡು ಮಾಡಿದ್ರು ಈ ನಿರ್ಧಾರ
ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಆಕರ್ಷಣೆಯಾಗಿದೆ. ಅನೇಕರಿಗೆ ರೀಲ್ಸ್ ವೀಡಿಯೋ ಮಾಡುವುದು ಒಂದು ಕ್ರೇಜ್ ಆಗಿದೆ. ಭಿನ್ನ ವಿಭಿನ್ನವಾದ ವಿಡಿಯೋಗಳನ್ನು ಮಾಡುವ ಮೂಲಕ ಅವುಗಳನ್ನು ರೀಲ್ಸ್ ನಲ್ಲಿ ಶೇರ್ ಮಾಡುತ್ತಾರೆ. ಅದರಿಂದ ಬರುವ ಲೈಕ್ ಹಾಗೂ ಕಾಮೆಂಟ್ ಗಳನ್ನು ನೋಡಿ ಖುಷಿಪಡುತ್ತಾರೆ. ಕೆಲವರು ಮಾಡುವ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಕೂಡಾ ಆಗುತ್ತದೆ. ಆದರೆ ಇದೀಗ ಇಂತಹದೊಂದು ವಿಡಿಯೋ ಮಾಡಿದ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ವಿಡಿಯೋ ವೈರಲ್ ಆದ ಮೇಲೆ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ ನಿವಾಸಿಯಾಗಿರುವ ಪ್ರಿಯಾಂಕ ಮಿಶ್ರಾ 2020 ರಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಆಯ್ಕೆಯಾದ ನಂತರ ತಮ್ಮ ಉದ್ಯೋಗವನ್ನು ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಅವರು ಕೈಯಲ್ಲಿ ರಿವಾಲ್ವರ್ ಹಿಡಿದು ಪೊಲೀಸ್ ಠಾಣೆಯಲ್ಲಿ ವಿಡಿಯೋವೊಂದನ್ನು ಮಾಡಿ, ಅದರಲ್ಲಿ ಅವರು ಒಂದು ಪಕ್ಕಾ ಮಾಸ್ ಡೈಲಾಗ್ ಲಿಪ್ಸ್ ಮೂಮೆಂಟ್ ನೀಡಿದ್ದರು. ಉತ್ತರ ಪ್ರದೇಶದವರದ್ದು ಬಿಂದಾಸ್ ಸ್ಟೈಲ್ ಎನ್ನುವ ಅಬ್ಬರದ ಡೈಲಾಗ್ ಅದಾಗಿತ್ತು.
ಈ ವಿಡಿಯೋವನ್ನು ಪ್ರಿಯಾಂಕ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆನಂತರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯಿತು. ರಿ ವಾಲ್ವ ರ್ ಹಿಡಿದು ಡೈಲಾಗ ಹೇಳಿರುವ ಪ್ರಿಯಾಂಕ ಮಿಶ್ರಾ ಅವರ ವೀಡಿಯೋ ವೈರಲ್ ಆದ ಪ್ರಿಯಾಂಕಾರನ್ನು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಟ್ರೋಲಿಂಗ್ ಮಾಡಲಾಗಿದೆ. ಅಲ್ಲದೇ ಅವರ ವರ್ತನೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರು ಅಸಮಾಧಾನವನ್ನು ಹೊರಹಾಕಿದ್ದಾರೆ.
ಒಬ್ಬ ಪೊಲೀಸ್ ಅಧಿಕಾರಿಯಾಗಿ ಇಂತಹ ವಿಡಿಯೋ ಮಾಡುವುದು ಸರಿಯಲ್ಲ ಎನ್ನುವುದು ಬಹಳಷ್ಟು ಜನರ ಅಭಿಪ್ರಾಯವಾಗಿದ್ದು, ಪ್ರಿಯಾಂಕ ಅವರ ವಿ ರು ದ್ಧ ಕಾಮೆಂಟ್ ಗಳನ್ನು ಮಾಡಿದ್ದಾರೆ. ವಿಡಿಯೋ ಶೇರ್ ಮಾಡಿದ ನಂತರ ಟ್ರೋಲಾದ ಪ್ರಿಯಾಂಕ ಬಹಳ ಬೇಸರಗೊಂಡು ಮತ್ತೊಂದು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಾಕಿ ಜನರಿಗೆ ಇಷ್ಟೊಂದು ಬೇಸರವಾಗಿದ್ದರೆ ಕೆಲಸವನ್ನು ಬಿಡಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೇ ಪ್ರಿಯಾಂಕ ತಮ್ಮ ರಾಜೀನಾಮೆ ಪತ್ರವನ್ನು ಖುದ್ದಾಗಿ ವರಿಷ್ಠಾಧಿಕಾರಿಗಳ ಕಛೇರಿಗೆ ಹೋಗಿ ನೀಡಿ ಬಂದಿದ್ದಾರೆ. ಆದರೆ ವರಿಷ್ಠಾಧಿಕಾರಿಗಳು ಆಕೆಯ ರಾಜೀನಾಮೆಯನ್ನು ಅಧಿಕೃತವಾಗಿ ಇನ್ನೂ ಅಂಗೀಕರಿಸಿಲ್ಲ ಎಂದು ಹೇಳಲಾಗಿದೆ. ಮಾಧ್ಯಮಗಳ ವರದಿಗಳ ಪ್ರಕಾರ ಕೆಎಸ್ಪಿ ಅವರು ಪ್ರಿಯಾಂಕಾ ತಮ್ಮ ಕೈಗೆ ರಾಜೀನಾಮೆಯನ್ನು ನೀಡಿರುವುದು ಸತ್ಯ ಎಂದಿದ್ದಾರೆ.
ಆದರೆ ತಾನು ಅವರು ಹಾಗೂ ಅವರ ಕುಟುಂಬದೊಂದಿಗೆ ಒಮ್ಮೆ ಈ ವಿಚಾರವಾಗಿ ಮಾತುಕತೆ ನಡೆಸಿದ ನಂತರವೇ ರಾಜೀನಾಮೆಯನ್ನು ಸ್ವೀಕರಿಸಬೇಕೋ ಅಥವಾ ಬೇಡವೋ ಎನ್ನುವುದನ್ನು ನಿರ್ಧರಿಸುವುದಾಗಿ ಹೇಳಿದ್ದಾರೆ. ಪ್ರಿಯಾಂಕಾ ಒಂದು ವಾರದ ಹಿಂದೆ ರಿವಾಲ್ವರ್ ಹಿಡಿದಿರುವ ದೃಶ್ಯದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಆದರೆ ಒಂದೇ ವಾರದಲ್ಲಿ ವಿಡಿಯೋ ಭರ್ಜರಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ಮೇಲೆ ಆಗ್ರಾ ಎಸ್‌ಎಸ್‌ಪಿ ಈ ವಿಷಯದಲ್ಲಿ ಪ್ರಿಯಾಂಕ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಂಡು, ಪ್ರಿಯಾಂಕಾ ಮಿಶ್ರಾ ಅವರನ್ನು ಪೊಲೀಸ್ ಠಾಣೆಯಾದ ಮದನ್ ಮೋಹನ್ ಗೇಟ್‌ನಿಂದ ತೆಗೆದು, ಪೋಲಿಸ್ ಲೈನ್‌ಗೆ ಕಳುಹಿಸಿದ್ದರು. ಅಲ್ಲದೆ ವಿಡಿಯೋ ಕುರಿತಾಗಿ ತನಿಖೆಯನ್ನು ನಡೆಸಿ ವರದಿಯನ್ನು ನೀಡುವಂತೆ ಆದೇಶವನ್ನು ಹೊರಡಿಸಿದ್ದರು.