HomeEntertainmentಮದುವೆಯಾಗ್ತೇನೆ ಆದ್ರೆ ಹುಡುಗಿಯಲ್ಲಿ ಈ ಗುಣಗಳಿರಬೇಕು: ರಾಹುಲ್ ಗಾಂಧಿ

ಮದುವೆಯಾಗ್ತೇನೆ ಆದ್ರೆ ಹುಡುಗಿಯಲ್ಲಿ ಈ ಗುಣಗಳಿರಬೇಕು: ರಾಹುಲ್ ಗಾಂಧಿ

Rahul Gandhi : ಕಾಂಗ್ರೆಸ್ ಪಕ್ಷದ ಯುವ ನಾಯಕ ಎಂದೇ ಹೆಸರನ್ನು ಪಡೆದಿರುವ ರಾಹುಲ್ ಗಾಂಧಿ(Rahul Gandhi) ಅವರು ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಅದರಲ್ಲೂ ವಿಶೇಷವಾಗಿ ರಾಹುಲ್ (Rahul Speech) ಭಾಷಣ ಮಾಡುವಾಗ ನೀಡುವ ಕೆಲವೊಂದು ಹೇಳಿಕೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದು ಮಾತ್ರವೇ ಅಲ್ಲದೇ ಅದು ಭರ್ಜರಿ ಟ್ರೋಲ್ ಕೂಡಾ ಆಗುತ್ತದೆ.‌ ವಯಸ್ಸು 52 ಆದರೂ ಇವರಿನ್ನೂ ಮದುವೆಯಾಗದೇ ಬ್ರಹ್ಮಚಾರಿಯಾಗಿಯೇ ಉಳಿದಿದ್ದು, ಸಹಜವಾಗಿಯೇ ಹಲವು ಸಂದರ್ಭಗಳಲ್ಲಿ ಅವರನ್ನು ಮದುವೆ ಕುರಿತಾಗಿ ಮಾದ್ಯಮಗಳು ಪ್ರಶ್ನೆಗಳನ್ನು ಮಾಡುವುದುಂಟು.

ಪ್ರಸ್ತುತ ಅವರ ವಿವಾಹದ ಕುರಿತಾಗಿ ಮತ್ತೊಮ್ಮೆ ಅವರು ಮಾತನಾಡಿದ್ದಾರೆ. ರಾಹುಲ್ ಗಾಂಧಿ ಅವರು ಭಾರತ್ ಜೋಡೋ(Bharath Jodo) ಯಾತ್ರೆಯಲ್ಲಿದ್ದು ಈಗ ಕಾಶ್ಮೀರದಲ್ಲಿ(Kashmir) ಇದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ರಾಹುಲ್ ಗಾಂಧಿ(Rahul Gandhi) ಅವರು ತಮ್ಮ ಮದುಗೆ ಬಗ್ಗೆ ಹಾಗೂ ತಾನು ಮದುವೆಯಾಗುವ ಹುಡುಗಿ ಹೇಗಿರಬೇಕು ಎನ್ನುವ ವಿಚಾರವಾಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸರಿಯಾದ ಹುಡುಗಿ ಸಿಕ್ಕರೆ ಮದುವೆ ಆಗುವೆ. ಬುದ್ಧಿವಂತೆ ಮತ್ತು ಪ್ರೀತಿಸುವ ಹುಡುಗಿಯಾಗಿದ್ದರೆ ಸಾಕು.

ನನ್ನ ಹೆತ್ತವರು ಪ್ರೀತಿಸುವುದನ್ನು ಹತ್ತಿರದಿಂದ ನೋಡಿದ್ದೇನೆ ಆದ್ದರಿಂದಲೇ ನನಗೆ ನಿರೀಕ್ಷೆಗಳು ಸಹಾ ಹೆಚ್ಚಾಗಿದೆ. ರಾಹುಲ್ ಗಾಂಧಿ(Rahul Gandhi Marriage) ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಸಂದರ್ಶಕಿಯು ಈ ಸಂದೇಶವನ್ನು ಎಲ್ಲಾ ಹುಡುಗಿಯರು ಪಡೆಯುತ್ತಿದ್ದಾರೆ ಎಂದಿದ್ದು, ಅದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ ಅವರು, ನೀವು ನನ್ನನ್ನು ತೊಂದರೆಯಲ್ಲಿ ಸಿಲುಕಿಸಿರುವಿರಿ ಎನ್ನುವ ಮಾತನ್ನು ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ತಮ್ಮ ಇಷ್ಟದ ತಿಂಡಿಯ ಬಗ್ಗೆ ಮಾತನಾಡುತ್ತಾ, ನನಗೆ ನಾನ್ ವೆಜ್ ಇಷ್ಟ, ಆದರೆ ಹೆಚ್ಚು ಖಾರ ತಿನ್ನುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

- Advertisment -