ರಾಶಿ ಖನ್ನಾ ಹೊಸ ಅವತಾರಕ್ಕೆ ಪಡ್ಡೆಗಳು ಫಿದಾ: ಹೊಸ ಅವಕಾಶಗಳಲ್ಲಿ ನಟಿ ಫುಲ್ ಬ್ಯುಸಿ

Entertainment Featured-Articles Movies News

ದಕ್ಷಿಣ ಸಿನಿಮಾ ರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿರುವ ನಟಿ ರಾಶಿ ಖನ್ನಾ ಅವರು ಬಾಲಿವುಡ್ ಗೂ ಎಂಟ್ರಿ ನೀಡಿಯಾಗಿದೆ. ಟಾಲಿವುಡ್ ಅಂಗಳದಲ್ಲಿ ತನಗಾಗಿ ಒಂದು ಸ್ಥಾನ ಪಡೆದುಕೊಂಡಿರುವ ನಟಿ ರಾಶಿ ಖನ್ನಾ ಬೇರೆ ನಟಿಯರ ಜೊತೆಗೆ ಸ್ಟಾರ್ ನಟಿಯ ಪಟ್ಟದ ರೇಸ್ ನಿಂದ ಸದಾ ದೂರವಾಗೇ ಇದ್ದು, ಒಂದರ ನಂತರ ಒಂದು ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಬ್ಯುಸಿ ನಟಿಯಾಗಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ಇಂದಿನ ಎಲ್ಲಾ ಯುವ ಸ್ಟಾರ್ ನಟರೊಂದಿಗೆ ರಾಶಿ ಖನ್ನ ನಟಿಸಿ, ದೊಡ್ಡ ಅಭಿಮಾನಿಗಳ ಬಳಗವನ್ನು ಪಡೆದುಕೊಂಡಿದ್ದಾರೆ.

ರಾಶಿ ಖನ್ನಾ ಆಗಾಗ ಹಾಟ್ ಅವತಾರವನ್ನು ತಾಳುವ ಮೂಲಕ ತಮ್ಮ ಅಭಿಮಾನಿಗಳು ಮಾತ್ರವೇ ಅಲ್ಲದೇ ಸಿನಿಮಾ ಪ್ರೇಮಿಗಳು ಹಾಗೂ ನೆಟ್ಟಿಗರ ಹೃದಯಕ್ಕೆ ಕಿಚ್ಚು ಹಚ್ಚುವಂತೆ ಕಾಣಿಸಿಕೊಂಡು ಸುದ್ದಿ ಮಾಡುತ್ತಾರೆ. ರಾಶಿ ಖನ್ನಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಆ್ಯಕ್ಟೀವ್ ಆಗಿದ್ದು, ಅವರನ್ನು ಹಿಂಬಾಲಿಸುವ ದೊಡ್ಡ ಬಳಗವೇ ಇದ್ದು, ನಟಿ ಶೇರ್ ಮಾಡುವ ಫೋಟೋಗಳು ಹಾಗೂ ವೀಡಿಯೋಗಳಿಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಗಳು ಹರಿದು ಬರುತ್ತವೆ.

ಪ್ರಸ್ತುತ ರಾಶಿ ಖನ್ನಾ ಅವರು ತೆಲುಗು, ತಮಿಳು ಹಾಗೂ ಹಿಂದಿ ಹೀಗೆ ಮೂರು ಭಾಷೆಗಳಲ್ಲಿ ಸಹಾ ಬ್ಯುಸಿಯಾಗಿದ್ದಾರೆ, ಒಂದರ ನಂತರ ಮತ್ತೊಂದು ಎನ್ನುವಂತೆ ನಟಿಗೆ ಅವಕಾಶಗಳು ಅರಸಿ ಬರುತ್ತಿವೆ. ರುದ್ರ: ದಿ ಎಡ್ಜ್ ಆಫ್ ಡಾರ್ಕ್ ನೆಸ್ ವೆಬ್ ಸಿರೀಸ್ ನಲ್ಲಿ ನಟಿಸುವ ಮೂಲಕ ಓಟಿಟಿಗೆ ಸಹಾ ನಟಿ ಕಾಲಿಟ್ಟಿದ್ದಾರೆ.‌ ಈಗ ಮತ್ತೊಂದು ಹಿಂದಿ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ ರಾಶಿ ಖನ್ನಾ. ಫರ್ಜಿ ಹೆಸರಿನ ಈ ವೆಬ್ ಸಿರೀಸ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ.

Leave a Reply

Your email address will not be published.