ರಾಯನ್ ಜನ್ಮದಿನದಲ್ಲಿ ಧೃವ ಸರ್ಜಾ ಕುಟುಂಬದ ಯಾರೂ ಕಾಣಲಿಲ್ಲವೇಕೆ? ಈ ಕುರಿತು ಮೇಘನಾ ರಾಜ್ ಹೇಳಿದ್ದೇನು?

0 2

ನಿನ್ನೆ ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರಿಗೆ ಎರಡು ಸಂಭ್ರಮ‌, ಒಂದು ತಮ್ಮ ಮುದ್ದಿನ ಮಗನಿಗೆ ಮೊದಲನೇ ವರ್ಷದ ಜನ್ಮದಿನವಾದರೆ, ತಾಯಿಯಾಗಿ ತಾನು ಒಂದು ವರ್ಷ ಪೂರ್ತಿ ಮಾಡಿದ ಸಂಭ್ರಮ ಮೇಘನಾ ಅವರಲ್ಲಿ ಕಂಡಿತ್ತು. ಮಗನ ಜನ್ಮದಿನದ ಹಿನ್ನಲೆಯಲ್ಲಿ ಮೊನ್ನೆ ಮಧ್ಯರಾತ್ರಿಯೇ ವಿಶೇಷ ಫೋಟೋಗಳನ್ನು ಹಂಚಿಕೊಂಡು ಮಗನಿಗೆ ವಿಶ್ ಮಾಡಿದ್ದರು. ಇನ್ನು ನಿನ್ನೆ ಮಗನ ಮೊದಲನೇ ವರ್ಷದ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಬೇಕೆಂದು ಕಾಡಿನ ಥೀಮ್ ನಲ್ಲಿ ಪಾರ್ಟಿ ಅರೇಂಜ್ ಮಾಡಿದ್ದರು.ಸ್ಯಾಂಡಲ್ವುಡ್ ನ ಹಲವು ಕಲಾವಿದರಿಗೆ ಮಗನ ಜನ್ಮದಿನದ ಸಂಭ್ರಮದಲ್ಲಿ ಭಾಗಿಯಾಗಲು ಆಹ್ವಾನವನ್ನು ನೀಡಿದ್ದರು.

ಕಳೆದ ವರ್ಷ ನೋವಿನ ಛಾಯೆಯು ಮೇಘನಾ ಅವರ ಕುಟುಂಬದ ಮೇಲೆ ಕವಿದಿದ್ದಾಗ ಅವರ ಜೀವನದಲ್ಲಿ ಸಂತಸದ ಬೆಳಕಾಗಿ ಬಂದವನು ರಾಯನ್ ರಾಜ್ ಸರ್ಜಾ. ಆದ್ದರಿಂದಲೇ ಮಗನ ಮೊದಲ ಜನ್ಮದಿನ ಸದಾ ನೆನಪಿನಲ್ಲಿ ಇರುವಂತೆ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ ಮೇಘನಾ. ಸ್ಯಾಂಡಲ್ವುಡ್ ನ ಕಲಾವಿದರು ಸಹಾ ಈ ಸಂಭ್ರಮದಲ್ಲಿ ಭಾಗಿಯಾಗಿ ಮೇಘನಾ ಅವರ ಸಂತೋಷವನ್ನು ಹಂಚಿಕೊಂಡಿದ್ದಾರೆ. ಆದರೆ ಇದರಲ್ಲಿ ಧೃವ ಸರ್ಜಾ ಆಗಲೀ, ಸರ್ಜಾ ಕುಟುಂಬವಾಗಲೀ ಭಾಗಿಯಾಗಿರಲಿಲ್ಲ.

ಸರ್ಜಾ ಕುಟುಂಬ ಹಾಗೂ ಧೃವ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಇನ್ನು ಮೇಘನಾ ಅವರು ಧೃವ ಸರ್ಜಾ ಅವರು ಸಿನಿಮಾ ವಿಷಯವಾಗಿ ವಿಶಾಖಪಟ್ಟಣಂ ನಲ್ಲಿ ಇರುವುದರಿಂದ ಅವರು ಬರುವುದು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಪಾರ್ಟಿಯ ಫೋಟೋಗಳು ವೈರಲ್ ಆದ ಮೇಲೆ ಅದರಲ್ಲಿ ಸರ್ಜಾ ಕುಟುಂಬದ ಯಾರೊಬ್ಬರೂ ಸಹಾ ಕಾಣದೇ ಇರುವುದು ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರವನ್ನು ಉಂಟು ಮಾಡಿದೆ. ಅಲ್ಲದೇ ಏಕೆ ಧೃವ ಅವರಿಗೆ ಸಿನಿಮಾ ಕೆಲಸ ಇರಬಹುದು, ಉಳಿದ ಯಾರೂ ಏಕೆ ಬರಲಿಲ್ಲ ಎನ್ನುವ ಪ್ರಶ್ನೆ ಮೂಡಿದೆ.

ಇನ್ನು ಈ ಹಿಂದೆ ಅರ್ಜುನ್ ಸರ್ಜಾ ಅವರಿಗೆ ತಾವು ನಿರ್ಮಾಣ ಮಾಡಿಸಿರುವ ಹನುಮಾನ್ ದೇಗುಲದಲ್ಲಿ ರಾಯನ್ ನಾಮಕರಣ ಮಾಡುವ ಆಸೆಯಿತ್ತು ಎನ್ನಲಾಗಿದೆ. ಆದರೆ ಅದು ನೇರವೇರಲೇ ಇಲ್ಲ. ಈ ಮಧ್ಯೆ ಎರಡು ಕುಟುಂಬಗಳ ನಡುವೆ ಮನಸ್ತಾಪ ಮೂಡಿದೆ ಎನ್ನುವ ಸುದ್ದಿಗಳು ಹರಿದಾಡಿದವು. ಆದರೆ ಧೃವ ಸರ್ಜಾ ಹಾಗೆಲ್ಲಾ ಏನಿಲ್ಲ ಎನ್ನುವ ಸ್ಪಷ್ಟನೆ ನೀಡಿದರು. ರಾಯನ್ ನಾಮಕರಣದಲ್ಲಿಯೂ ಅರ್ಜುನ್ ಸರ್ಜಾ ಅವರು ಗೈರು ಹಾಜರಾಗಿದ್ದು ದೊಡ್ಡ ಸುದ್ದಿಯಾಯಿತು.

ಇನ್ನು ನಾಮಕರಣದ ನಂತರ ಮೇಘನಾ ಅವರ ತಾಯಿ ಹಿರಿಯ ನಟಿ ಪ್ರಮೀಳಾ ಜೋಷಾಯಿ ಅವರು ಮಾತನಾಡುತ್ತಾ, ನಮ್ಮ ಮಗಳ ಜವಾಬ್ದಾರಿಯನ್ನು ಯಾರೂ ತೆಗೆದುಕೊಂಡಿಲ್ಲ. ಈಗಲೂ, ಇನ್ನು ಮುಂದೆಯೂ ಆಕೆ ಹಾಗೂ ಮೊಮ್ಮಗು ಎರಡೂ ನಮ್ಮ ಜವಾಬ್ದಾರಿಯೇ ಆಗಿದೆ, ನಮಗೆ ಯಾರೂ ಕೂಡಾ ಒಂದು ರೂಪಾಯಿಯನ್ನು ನೀಡಿಲ್ಲ, ಸುಮ್ಮನೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಸ್ವಲ್ಪ ಕಟುವಾಗಿಯೇ ಮಾತನಾಡಿದ್ದರು. ಒಟ್ಟಾರೆ ಏನೇ ಆದರೂ ಆರ್ಯನ್ ನ ಮೊದಲ ಜನ್ಮದಿನ ಸಂಭ್ರಮದಿಂದ ನಡೆದಿದೆ.

Leave A Reply

Your email address will not be published.