HomeEntertainmentರಾಮ್ ಚರಣ್ ಬೇಡ ಎಂದರೂ ಸಮಂತ ಲಿಪ್ ಲಾಕ್ ಮಾಡಿದ್ರಾ? ರಂಗಸ್ಥಲಂ ಸಿನಿಮಾದ ಮುತ್ತಿನ ಕಥೆ...

ರಾಮ್ ಚರಣ್ ಬೇಡ ಎಂದರೂ ಸಮಂತ ಲಿಪ್ ಲಾಕ್ ಮಾಡಿದ್ರಾ? ರಂಗಸ್ಥಲಂ ಸಿನಿಮಾದ ಮುತ್ತಿನ ಕಥೆ ಮಾಡಿದೆ ಸದ್ದು

ಕಳೆದ ಕೆಲವು ದಿನಗಳಿಂದಲೂ ನಟಿ ಸಮಂತ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ‌. ನಟಿ ಸಮಂತ ಅವರ ಪತಿ ಅಕ್ಕಿನೇನಿ ನಾಗ ಚೈತನ್ಯ ಅವರಿಂದ ದೂರವಾಗಲಿದ್ದಾರೆ ಎನ್ನುವ ಸುದ್ದಿಗಳು ದಟ್ಟವಾಗಿದ್ದು, ನಟಿ ಸಮಂತ ಅವರ ಇತ್ತೀಚಿನ ವರ್ತನೆಗಳು ಸಹಾ ಅದಕ್ಕೆ ಪೂರಕವಾಗಿದೆ. ಹೌದು‌ ಸಮಂತ ತಮ್ಮ ಹೆಸರಿನಿಂದ ಅಕ್ಕಿನೇನಿ ಎನ್ನುವ ಸರ್ ನೇಮ್ ತೆಗೆದು ಹಾಕಿದ್ದು ಮೊದಲಿಗೆ ಎಲ್ಲಾ ಅನುಮಾನಗಳಿಗೆ ಕಾರಣವಾಯಿತು. ಆದರೆ ವಿಷಯ ಅಷ್ಟಕ್ಕೇ ಮುಗಿಯಲಿಲ್ಲ. ಅನಂತರ ಮಾವ ನಾಗಾರ್ಜುನ ಅವರ ಜನ್ಮದಿನದ ಫ್ಯಾಮಿಲಿ ಪಾರ್ಟಿಯಲ್ಲಿ ಸಮಂತ ಗೈರು ಹಾಜರಿ ಕೂಡಾ ಅನುಮಾನ ಹುಟ್ಟು ಹಾಕಿತು.

ಇದಾದ ಬೆನ್ನಲ್ಲೇ ಸಮಂತಾ ಅವರು ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಸ್ಪಷ್ಪವಾಗಿ ಮಾತನಾಡದೇ ಸುಮ್ಮನಾಗಿದ್ದು, ಹೀಗೆ ಒಂದಕ್ಕೊಂದು ತಳಕು ಹಾಕಿಕೊಳ್ಳುತ್ತಾ ಸಾಗಿದ್ದು, ಸಮಂತ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿವೆ. ಈಗ ಇಷ್ಟೆಲ್ಲಾ ಅನುಮಾನಗಳ ನಡುವೆ ಸಮಂತ ಹಾಗೂ ರಾಮ್ ಚರಣ್ ಜೊತೆಯಾಗಿ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ರಂಗಸ್ಥಲಂ ಸಿನಿಮಾದ ಮುತ್ತಿನ ಕಥೆಯೊಂದು ಬಹಿರಂಗವಾಗಿದೆ.

ಹೌದು ನಿರ್ದೇಶಕ ಸುಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ರಂಗಸ್ಥಲಂ ಸಿನಿಮಾ ರಾಮ್ ಚರಣ್ , ಸಮಂತ ಮಾತ್ರವೇ ಅಲ್ಲದೇ ಬಹಳಷ್ಟು ಜನ ಕಲಾವಿದರ ಪಾಲಿಗೆ ಈ ಸಿನಿಮಾ ಒಂದು ತಿರುವನ್ನು, ವೃತ್ತಿ ಬದುಕಿಗೆ ಒಂದು ಬ್ರೇಕ್ ನೀಡಿತ್ತು. ಈ ಸಿನಿಮಾದಲ್ಲಿ ರಾಮ್ ಚರಣ್ ಹಾಗೂ ಸಮಂತ ನಡುವಿನ ಒಂದು ಲಿಪ್ ಲಾಕ್ ಸೀನ್ ಆಗ ಸಾಕಷ್ಟು ಸದ್ದು ಮಾಡಿತ್ತು, ಸಿಕ್ಕಾಪಟ್ಟೆ ಹೈಲೈಟ್ ಆದ ಆ ದೃಶ್ಯದ ಹಿಂದೆ ಒಂದು ಕಥೆಯಿದೆ ಎನ್ನಲಾಗಿದೆ.

ಸಿನಿಮಾದಲ್ಲಿ ನಾಯಕ ನಾಯಕಿಯ ನಡುವಿನ ಪ್ರೇಮ ತೋರಿಸಲು, ಆ ಪ್ರೇಮದ ಉತ್ಕಟತೆಯನ್ನು ಪ್ರದರ್ಶಿಸಲು ಲಿಪ್ ಲಾಕ್ ಸೀನ್ ಅಗತ್ಯವೆ‌ಂದು ನಿರ್ದೇಶಕರು ನಾಯಕ ರಾಮ್ ಚರಣ್ ಅವರಿಗೆ ಹಲವು ಬಾರಿ ಹೇಳಿದರೂ ರಾಮ್ ಚರಣ್ ಅದಕ್ಕೆ ಒಪ್ಪಿರಲಿಲ್ಲ. ತಮ್ಮ ಪತ್ನಿ ಉಪಾಸನಾ ಅವರಿಗೆ ಅಂತಹ ದೃಶ್ಯಗಳು ಇಷ್ಟವಾಗೋದಿಲ್ಲ ಎಂದು ರಾಮ್ ಚರಣ್ ಸ್ಪಷ್ಟವಾಗಿ ಲಿಪ್ ಲಾಕ್ ಸೀನ್ ಗೆ ನೋ ಎಂದು ಹೇಳಿದ್ದಾಗಿತ್ತು.

ಆದರೆ ಚಿತ್ರೀಕರಣ ಮುಗಿಯುವ ವೇಳೆಗೆ ಸುಕುಮಾರ್ ಅವರು ಒಂದು ಪ್ಲಾನ್ ಮಾಡಿ, ನೀವು ನೇರವಾಗಿ ಲಿಪ್ ಲಾಕ್ ಮಾಡುವುದು ಬೇಡ. ದೂರದಿಂದಲೇ ಗಾಳಿಯಲ್ಲಿ ಲಿಪ್ ಲಾಕ್ ಮಾಡಿದಂತೆ ನಟಿಸಿ, ಅದನ್ನು ಗ್ರಾಫಿಕ್ಸ್ ನಲ್ಲಿ ಲಿಪ್ ಲಾಕ್ ರೀತಿ ತೋರಿಸುತ್ತೇವೆ ಎಂದು ಹೇಳಿದಾಗ ರಾಮ್ ಚರಣ್ ತೇಜ ಸಹಾ ಅದಕ್ಕೆ ಒಪ್ಪಿಗೆಯನ್ನು ನೀಡಿದರಂತೆ. ಅದಾದ ಮೇಲೆ ನಿರ್ದೇಶಕರು ಆ ದೃಶ್ಯದ ಚಿತ್ರೀಕರಣದ ಸಿದ್ಧತೆಯನ್ನು ಮಾಡಿಕೊಂಡರಂತೆ.

ಇನ್ನು ಚಿತ್ರೀಕರಣ ಆರಂಭವಾದಂತಹ ಸಂದರ್ಭದಲ್ಲಿ ನಟಿ ಸಮಂತ ನಿಜವಾಗಿಯೇ ರಾಮ್ ಚರಣ್ ಅವರಿಗೆ ಲಿಪ್ ಲಾಕ್ ಮಾಡಿ ಬಿಟ್ಟರಂತೆ. ಹೀಗೆಂದು ಈಗ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿದ್ದು, ಇನ್ನು ಚಿತ್ರ ತಂಡ ಇದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಈ ಹಿಂದೆ ಸಿನಿಮಾ ಬಿಡುಗಡೆ ಆದಾಗ ಈ ಸೀನ್ ಕುರಿತಾಗಿ ಸಾಕಷ್ಟು ಚರ್ಚೆಗಳು ಆಗಿದ್ದು ಮಾತ್ರ ನಿಜ. ಏಕೆಂದರೆ ಸಮಂತಾ ಅಕ್ಕಿನೇನಿ ಕುಟುಂಬದ ಸೊಸೆಯಾಗಿದ್ದರು.

ಆಗ ಅಕ್ಕಿನೇನಿ ನಾಗಾರ್ಜುನ ಅವರ ಪತ್ನಿ ಹಿರಿಯ ನಟಿ ಅಮಲಾ ಅವರು ಪ್ರತಿಕ್ರಿಯೆ ನೀಡಿ ಸಮಂತಾ ಆ ದೃಶ್ಯವನ್ನು ಆ ಪಾತ್ರವಾಗಿ ಮಾಡಿದ್ದಾರೆಯೇ ಹೊರತು ಅಕ್ಕಿನೇನಿ ಕುಟುಂಬದ ಸೊಸೆಯಾಗಿ ಅಲ್ಲ ಎಂದು ತಮ್ಮ ಸೊಸೆಯ ಪರವಾಗಿ ಮಾತನಾಡುವ ಮೂಲಕ ಸುದ್ದಿಯಾಗಿದ್ದು ಮಾತ್ರವೇ ಅಲ್ಲದೇ ಅವರ ಬಗ್ಗೆ ಮೆಚ್ಚುಗೆ ಗಳು ಕೂಡಾ ಹರಿದು ಬಂದಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

- Advertisment -