ರಾಮ್ ಚರಣ್ ಒಪ್ಪಿದರೆ ನಾನು ಈಗಲೂ ಅದಕ್ಕೆ ಸಿದ್ಧ: ಮಾಜಿ ಮಿಸ್ ವರ್ಲ್ಡ್ ಮಾತು ಕೇಳಿ ದಂಗಾದ ಟಾಲಿವುಡ್ !!

Written by Soma Shekar

Published on:

---Join Our Channel---

ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದ್ದಾರೆ ಮಾಜಿ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್‌. ಇದೀಗ ನಟಿ ಹಾಗೂ ವಿಶ್ವ ಸುಂದರಿ ಮಾನುಷಿ ಅವರು ಆಡಿರುವ ಮಾತುಗಳು ಜನರ ಗಮನವನ್ನು ಸೆಳೆದಿದೆ. ಮಾನುಷಿ ಅವರು ಆಡಿದ ಮಾತುಗಳಿಗೆ ಇದೀಗ ಟಾಲಿವುಡ್ ಥ್ರಿಲ್ ಆಗಿದೆ. ತೆಲುಗು ಚಿತ್ರರಂಗದವರು ಮಾನುಷಿ ಚಿಲ್ಲರ್‌ ಮಾತನ್ನು ಕೇಳಿ ಖುಷಿಗೊಂಡಿದ್ದರೆ, ಮಾನುಷಿ ಅವರ ಮಾತುಗಳು ಚಿತ್ರರಂಗದಲ್ಲಿ ಸದ್ದು ಮಾಡಿದೆ, ಆದರೆ ಇದೇ ವೇಳೆ ಮಾನುಷಿಯ ಮಾತುಗಳಿಗೆ ನಟ ರಾಮ್ ಚರಣ್ ಅವರ ಪತ್ನಿ ಮಾತ್ರ ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಅದಂತೂ ಗೊತ್ತಿಲ್ಲ.

ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸಿನಿಮಾದಲ್ಲಿ ಮಾನುಷಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಥ್ರಿಲ್ ಆಗಿರುವ ಮಾನುಷಿ ಅವರು ಮೊದಲ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಹಳ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ. ನಿನ್ನೆ ಬಿಡುಗಡೆ ಆಗಿರುವ ಸಿನಿಮಾದ ಬಗ್ಗೆ ಎಲ್ಲೆಡೆಯಿಂದಲೂ ದೊಡ್ಡ ಮೆಚ್ಚುಗೆಯ ಮಾತುಗಳನ್ನು ಕೇಳಿ ಬರುತ್ತಿದ್ದು, ಇದು ಚಿತ್ರ ತಂಡಕ್ಕೆ ಸಹಜವಾಗಿಯೇ ಖುಷಿಯನ್ನು ನೀಡಿದೆ.

ಈ ಸಂತೋಷದ ಸಂದರ್ಭದಲ್ಲಿ ಮಾನುಷಿ ಚಿಲ್ಲರ್ ಅವರು ಆಡಿದ ಮಾತುಗಳು ಮಾದ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಮಾನುಷಿ ಚಿಲ್ಲರ್ ಅಂತದ್ದೇನು ಹೇಳಿದರು ತಿಳಿಯೋಣ ಬನ್ನಿ. ಮಾನುಷಿ ಗೆ ಅವರು ತ್ರಿಬಲ್ ಆರ್ ಸಿನಿಮಾ ಬಿಡುಗಡೆ ನಂತರ ಆ ಸಿನಿಮಾ ನೋಡಿ ಅವರಿಗೆ ನಾಯನ ನಟ ರಾಮ್ ಚರಣ್ ಅವರ ಮೇಲೆ ಸಿಕ್ಕಾಪಟ್ಟೆ ಲವ್ ಆಯಿತಂತೆ. ತಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ ಎನ್ನುವ ಮಾತನ್ನು ಹೇಳಿದ್ದಾರೆ.

ರಾಮ್ ಚರಣ್ ತೇಜಾ ಅವರಿಗೆ ಮದುವೆ ಆಗದೇ ಇದ್ದಿದ್ದರೆ ನಾನು ಅವರನ್ನು ಡೇಟ್ ಗೆ ಕರೆಯುತ್ತಿದ್ದೆ ಎಂದಿರುವ ಮಾನುಷಿ ಚಿಲ್ಲರ್ ಹಾಗೇ ಮಾತನ್ನು ಮುಂದುವರೆಸಿ, ಅವರಿಗೆ ಮದುವೆ ಆಗಿದ್ದರೂ ಪರವಾಗಿಲ್ಲ, ಅವರು ಈಗಲೂ ಒಪ್ಪಿದರೆ ನಾನು ಸಿದ್ಧ ಎನ್ನುವ ಮಾತನ್ನು ಮಾನುಷಿ ಹೇಳಿದ್ದಾರೆ. ಮಾನುಷಿ ಹೇಳಿದ ಈ ಮಾತುಗಳನ್ನು ಕೇಳಿ ನಟ ರಾಮ್ ಚರಣ್ ಅವರ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಮಾನುಷಿ ಅವರ ಮಾತುಗಳು ಇದೀಗ ದೊಡ್ಡ ಸುದ್ದಿಯಾಗಿದೆ.

Leave a Comment