ನಮಗೆ ರಾಮ ಮಂದಿರ ಬೇಕಿಲ್ಲ ಎಂದು ಸರ್ಕಾರದ ಮುಂದೆ ಬೇರೊಂದು ಬೇಡಿಕೆಯಿಟ್ಟ ನಟ ಚೇತನ್

0
4437

ಸ್ಯಾಂಡಲ್ವುಡ್ ನಟ, ಸಾಮಾಜಿಕ ಹೋರಾಟಗಾರ ಆಗಿಯೂ ಹೆಸರನ್ನು ಮಾಡಿರುವ ನಟ ಚೇತನ್ (Chethan) ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಅವರು ಆಗಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಚೇತನ್ ಅವರು ಹತ್ತು ಹಲವು ವಿಚಾರಗಳ ಬಗ್ಗೆ ನೀಡುವ ಅಭಿಪ್ರಾಯ, ಕೊಡುವ ಹೇಳಿಕೆಗಳು ಆಗಾಗ ದೊಡ್ಡ ವಿ ವಾ ದವನ್ನೇ ಸೃಷ್ಟಿಸಿ ಬಿಡುತ್ತದೆ. ಅವರ ಮಾತುಗಳು ಚರ್ಚೆಯ ಕಾರಣವಾಗುತ್ತದೆ. ಅವರ ಮಾತಿಗೆ ಒಂದಷ್ಟು ಪರ ವಿ ರೋ ಧ ಅಭಿಪ್ರಾಯಗಳು ಹರಿದು ಬರುತ್ತವೆ. ಈಗ ನಟ ರಾಮ ಮಂದಿರದ(Ram Mandir) ಕುರಿತಾಗಿ ತಮ್ಮ ಮಾತಿನಲ್ಲಿ ಹೇಳಿದ ವಿಚಾರವೊಂದು ಮುನ್ನೆಲೆಗೆ ಬಂದಿದೆ.

ನಟ ಚೇತನ್ ಅವರು ರಾಮನಗರ(Ramanagara) ತಾಲೂಕಿನ ಕೂನಮುದ್ದನಹಳ್ಳಿಯಲ್ಲಿ ಮಾತನಾಡುವ ವೇಳೆ ರಾಮಮಂದಿರದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇಲ್ಲಿನ ದಲಿತ ಕಾಲೋನಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಚೇತನ ಅವರ ನೇತೃತ್ವದಲ್ಲಿ ಪ್ರ ತಿ ಭ ಟ ನೆ ಒಂದನ್ನು ನಡೆಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಚುನಾವಣೆಗಾಗಿ ಗಿಮಿಕ್ ಮಾಡುತ್ತಿವೆ. ನಮಗೆ ರಾಮ ಮಂದಿರದ ಅವಶ್ಯಕತೆ ಇಲ್ಲ. ದೇವಸ್ಥಾನಗಳು ನಮಗೆ ಬದುಕನ್ನು ಕಟ್ಟಿ ಕೊಡಿವುದಿಲ್ಲ. ರಾಮದೇವರ ಬೆಟ್ಟವನ್ನು ಸರ್ಕಾರವು ದಕ್ಷಿಣ ಅಯೋಧ್ಯೆ ಮಾಡಲು ಅನುಮತಿ ನೀಡಬಾರದು.

ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬಿದ್ದ ಹಾಸ್ಯ ನಟಿ: ಕೈ ಹಿಡಿದು ನೆರವು ನೀಡಿದ ಮೆಗಾಸ್ಟಾರ್ ಚಿರಂಜೀವಿ

ಸರ್ಕಾರವು ಅವೆಲ್ಲವನ್ನು ಬಿಟ್ಟು ಮೊದಲು ಜನರಿಗೆ ಮೂಲಸೌಕರ್ಯವನ್ನು ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ ಚೇತನ್ ಅವರು ಕೇಂದ್ರ ಬಜೆಟ್ ಬಗ್ಗೆ ಮಾತನಾಡಿ ಇದು ಶ್ರೀಮಂತರ ಪರವಾದ ಬಜೆಟ್. ಇದರಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ. ತೆರಿಗೆ ವಿನಾಯಿತಿಯಿಂದ ಬಡವರಿಗೆ ಯಾವ ಉಪಯೋಗವಾಗುವುದಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅವರು ಈ ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದ ಬಗ್ಗೆ ಸಹಾ ಮಾತನಾಡಿದ್ದಾರೆ.

ಹೌದು, ಚೇತನ್ ಅವರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ತಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳುತ್ತಾ, ನನ್ನದು ಸಮಾನತೆ ಪರವಾದ ಹೋ ರಾ ಟ ವಷ್ಟೇ ಎಂದು ಹೇಳಿದ್ದಾರೆ. ತಾನು ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಗಳಿಗೆ ಬೆಂಬಲ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here