ರಾಮನವಮಿ ದಿನ ಆದಿಪುರುಷ್ ನಿರ್ದೇಶಕ ಓಂ ರಾವಂತ್ ಹೀಗಾ ಮಾಡೋದು?? ಪ್ರಭಾಸ್ ಅಭಿಮಾನಿಗಳು ಸಿಟ್ಟು

Entertainment Featured-Articles News Viral Video

ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ ನಟ ಪ್ರಭಾಸ್ ಮತ್ತು ಬಾಲಿವುಡ್ ಸಿನಿಮಾಗಳ ನಿರ್ದೇಶಕ ಓಂ ರಾವತ್ ಕಾಂಬಿನೇಷನ್ ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಆದಿಪುರುಷ್. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕೃತಿ ಸೆನನ್ ಮತ್ತು ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಪ್ರಮುಖವಾದ ಪಾತ್ರಗಳಲ್ಲಿ ನಟಿಸುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಸಹಾ ಹುಟ್ಟು ಹಾಕಿದೆ. ರಾಮಾಯಣದ ಕಥಾ ಹಂದರದೊಂದಿಗೆ ತೆರೆಗೆ ಬರಲಿರುವ ಈ ಸಿನಿಮಾದಲ್ಲಿ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಸಿನಿಮಾ ಮುಂದಿನ ವರ್ಷದ ಜನವರಿ 12 ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಮಾಹಿತಿಯನ್ನು ನೀಡಿದೆ. ಅಲ್ಲದೇ ಈ ಸಿನಿಮಾ 3 ಡಿ ವರ್ಷನ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎನ್ನುವುದು ಮತ್ತೊಂದು ವಿಶೇಷವಾಗಿದೆ. ಮೊದಲ ಬಾರಿಗೆ ಪ್ರಭಾಸ್ ಇಂತಹುದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇವೆ.

ಆದಿಪುರುಷ್ ಸಿನಿಮಾ ಫಸ್ಟ್ ಲುಕ್ ಗಾಗಿ ಅಭಿಮಾನಿಗಳು ಬಹಳ ಉತ್ಸಾಹದಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಅಲ್ಲದೇ ರಾಮ‌ ನವಮಿಯ ವಿಶೇಷ ಸಂದರ್ಭದಲ್ಲಿ ಆದಿಪುರುಷ್ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಲಿದೆ ಎನ್ನುವ ಸುದ್ದಿಯೊಂದು ಮಾದ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲೇ ಅಭಿಮಾನಿಗಳು ಕೂಡಾ ಬಹಳ ಉತ್ಸುಕರಾಗಿದ್ದರು, ನಿರ್ದೇಶಕ ಓಂ ರಾವತ್ ಅವರೊಂದು ಸರ್ಪ್ರೈಸ್ ಕೊಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಇದಕ್ಕೆ ತಕ್ಕಂತೆ ನಿರ್ದೇಶಕ ಸರ್ಪ್ರೈಸ್ ಏನೋ ನೀಡಿದ್ದಾರೆ, ಆದರೆ ಮುಂದೆ ಆಗಿದ್ದು ಅನಿರೀಕ್ಷಿತ.

ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ನಿರ್ದೇಶಕ ಓಂ ರಾವತ್ ಅವರು ಒಂದು ವೀಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ವೀಡಿಯೋದಲ್ಲಿ ಅವರು ಆದಿಪುರುಷ್ ಸಿನಿಮಾ ಸೆಟ್ಟೇರಿದ ಮೇಲೆ ಅಭಿಮಾನಿಗಳು ಪ್ರಭಾಸ್ ಪಾತ್ರದ ಬಗ್ಗೆ ಊಹೆ ಮಾಡಿ ಸಿದ್ಧಪಡಿಸಿದ್ದ ಎಲ್ಲಾ ಫೋಟೋಗಳನ್ನು ಸೇರಿಸಿ ಒಂದು ವೀಡಿಯೋ ಮಾಡಿ ಶೇರ್ ಮಾಡಿದ್ದಾರೆ ನಿರ್ದೇಶಕ ಓಂ ರಾವತ್ ಅವರು. ಆದರೆ ಈ ವೀಡಿಯೋ ಅಭಿಮಾನಿಗಳನ್ನು ಸಂತೃಪ್ತಿ ಪಡಿಸುವಲ್ಲಿ ವಿಫಲವಾಗಿದೆ.

ರಾಮನವಮಿಯ ವಿಶೇಷ ದಿನದಂದು ಆದಿಪುರಷ್ ನ ಫಸ್ಟ್ ಲುಕ್ ಸಿಗುತ್ತದೆ ಎಂದು ಕಾದಿದ್ದ ಅಭಿಮಾನಿಗಳ ಓಂ ರಾವತ್ ಶೇರ್ ಮಾಡಿದ ವೀಡಿಯೋ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ನಲ್ಲಿ ಪ್ರಭಾಸ್ ಅಭಿಮಾನಿಗಳು ತಮ್ಮ ಸಿಟ್ಟು ಹಾಗೂ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಒಟ್ಟಾರೆ ಅಭಿಮಾನಿಗಳಿಗೆ ಇಂದು ದೊಡ್ಡ ನಿರಾಸೆ ಎದುರಾಗಿದೆ. ಪ್ರಸ್ತುತ ನಟ ಪ್ರಭಾಸ್ ಸಲಾರ್, ಸ್ಪಿರಿಟ್, ಪ್ರಾಜೆಕ್ಟ್ ಕೆ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published.