ರಾಧೇ ಶ್ಯಾಮ್ ಸೋಲಿನ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಬಾಹುಬಲಿ ಖ್ಯಾತಿಯ ನಟ: ಏನಾಯ್ತು ಪ್ರಭಾಸ್ ಗೆ??

Entertainment Featured-Articles News

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯನ್ನು ಪಡೆದುಕೊಂಡಿರುವ ನಟ ಪ್ರಭಾಸ್ ಅವರ ವೃತ್ತಿ ಜೀವನದಲ್ಲಿ ಬಾಹುಬಲಿ ಬಹುದೊಡ್ಡ ತಿರುವನ್ನು ನೀಡಿರುವ ಸಿನಿಮಾ ಆಗಿದೆ. ಬಾಹುಬಲಿ ನಂತರ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಹಾಗೂ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಬಾಹುಬಲಿ ಸಿನಿಮಾದ ನಂತರ ದೊರೆತ ದೊಡ್ಡ ಹೆಸರಿನ ಪರಿಣಾಮ ಎನ್ನುವಂತೆ, ಅವರ ಹೊಸ ಸಿನಿಮಾಗಳು ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಬಾಹುಬಲಿ ನಂತರ ಪ್ರಭಾಸ್ ನಟಿಸಿರುವ ಎರಡು ಸಿನಿಮಾಗಳು ತೆರೆ ಕಂಡಿದೆ.

ಆ ಎರಡು ಸಿನಿಮಾಗಳು ಸಾಹೋ ಮತ್ತು ರಾಧೇಶ್ಯಾಮ್. ಈ ಎರಡು ಸಿನಿಮಾಗಳು ಕೂಡಾ ಬಹುಕೋಟಿ ವೆಚ್ಚದಲ್ಲಿ, ಅದ್ದೂರಿ ತಾರಾಗಣದಲ್ಲಿ ನಿರ್ಮಾಣವಾದ ಸಿನಿಮಾಗಳಾಗಿವೆ. ಆದರೆ ದುರದೃಷ್ಟವಶಾತ್ ಎರಡು ಸಿನಿಮಾಗಳೂ ಸಹಾ ನಿರೀಕ್ಷಿತ ಮಟ್ಟದ ಯಶಸ್ಸನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಒಂದರ್ಥದಲ್ಲಿ ಬಾಹುಬಲಿಯ ದೊಡ್ಡ ಯಶಸ್ಸು, ಆ ಸಿನಿಮಾದಲ್ಲಿನ ಪ್ರಭಾಸ್ ವರ್ಚಸ್ಸು, ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡ ಪರಿ, ನಂತರದ ಚಿತ್ರಗಳಿಗೆ ಭಾರೀ ಹೊ ಡೆ ತವನ್ನೇ ನೀಡಿದೆ ಎನ್ನಬಹುದು.

ಬಾಹುಬಲಿ ನೋಡಿದ ನಂತರ ಬಹಳಷ್ಟು ಜನ ಅಭಿಮಾನಿಗಳು ಪ್ರಭಾಸ್ ಅವರನ್ನು ಒಬ್ಬ ಮಾಸ್ ಹೀರೋ ಆಗಿ, ಭರ್ಜರಿ ಆಕ್ಷನ್ ಹೀರೋ ಆಗಿ ನೋಡುವ ನಿರೀಕ್ಷೆಯನ್ನು ಇಟ್ಟುಕೊಂಡಿರುವುದು ಸಹಜವಾಗಿದೆ. ಆದರೆ ರಾಧೇ ಶ್ಯಾಮ್ ನಲ್ಲಿ ಅಭಿಮಾನಿಗಳ ಈ ನಿರೀಕ್ಷೆ ಸುಳ್ಳಾಗಿದೆ. ಬಾಲಿವುಡ್ ನಲ್ಲಿ ರಾಧೇ ಶ್ಯಾಮ್ ನ ಹಿಂದಿ ವರ್ಶನ್ ಅಂತೂ ಸಂಪೂರ್ಣವಾಗಿ ಸೋತಿದೆ. ಸದ್ಯಕ್ಕಂತೂ ಅಭಿಮಾನಿಗಳ ನಿರೀಕ್ಷೆ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಲಾರ್ ಸಿನಿಮಾದ ಮೇಲೆ ನೆಟ್ಟಿದೆ. ಮತ್ತೆ ತಮ್ಮ ಅಭಿಮಾನ ನಟನನ್ನು ಮಾಸ್ ಅವತಾರದಲ್ಲಿ ಸಲಾರ್ ನಲ್ಲಿ ನೋಡಬಹುದು ಎನ್ನುವ ನಿರೀಕ್ಷೆಗಳು ಅಭಿಮಾನಿಗಳಲ್ಲಿ ದಟ್ಟವಾಗಿದೆ.

ಸ್ವಲ್ಪ ಸಮಯದ ಹಿಂದೆ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಪ್ರಭಾಸ್ ಅವರಿಗೆ ಗಾಯವೊಂದು ಆಗಿತ್ತು. ಆಗ ಅವರು ಗಾಯಕ್ಕೆ ಚಿಕಿತ್ಸೆ ಪಡೆದಿದ್ದರು. ಆದರೆ ಈಗ ಅದಕ್ಕೆ ಸಂಪೂರ್ಣ ಚಿಕಿತ್ಸೆಯನ್ನು ಪಡೆಯುವ ಸಲುವಾಗಿ ಪ್ರಭಾಸ್ ಅವರು ಸ್ಪೇನ್ ದೇಶಕ್ಕೆ ಹೋಗಿದ್ದಾರೆ. ಅಲ್ಲಿನ ಬಾರ್ಸಿಲೋನಾದಲ್ಲಿ ನಟ ಪ್ರಭಾಸ್ ಸಣ್ಣದೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಸರ್ಜರಿ ಚಿಕ್ಕದೇ ಆದರೂ ವೈದ್ಯರು ಪ್ರಭಾಸ್ ಅವರಿಗೆ ವಿಶ್ರಾಂತಿ ಪಡೆಯುವಂತೆ ಸಲಹೆಯನ್ನು ನೀಡಿದ್ದಾರೆ.

ರಾಧೇ ಶ್ಯಾಮ್ ಸಿನಿಮಾದ ನಂತರ ಪ್ರಭಾಸ್ ಅವರು ಕೂಡಾ ಅಷ್ಟಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಶಸ್ತ್ರಚಿಕಿತ್ಸೆಯ ವಿಷಯ ತಿಳಿದು ಅವರ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳ ಮೂಲಕ ಬೇಗ ಚೇತರಿಸಿಕೊಳ್ಳುವಂತೆ ನಟನಿಗೆ ಶುಭ ಹಾರೈಸಿದ್ದಾರೆ‌‌. ಸಲಾರ್ ಸಿನಿಮಾದ ಮೂಲಕ ಫೀನಿಕ್ಸ್ ಹಕ್ಕಿಯ ಹಾಗೆ, ಭರ್ಜರಿ ಮಾಸ್ ಅವತಾರದಲ್ಲಿ ಮತ್ತೊಮ್ಮೆ ಪ್ರಭಾಸ್ ಎದ್ದು ಬರಲಿದ್ದಾರೆ ಎನ್ನುವ ಆಶಯವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *