ರಾತ್ರಿ 2:15 ಕ್ಕೆ ಸೋನು ಜೊತೆ ರಾಕೇಶ್ ಗೆ ಏನಿತ್ತು ಮಾತು? ರೀಲ್ಸ್ ರಾಣಿ ಕೊಟ್ಟ ಶಾಕಿಂಗ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

Entertainment Featured-Articles Movies News

ದಿನ ಕಳೆದ ಹಾಗೆ ಬಿಗ್ ಬಾಸ್ ಓಟಿಟಿ ಕ್ರೇಜ್ ಸಹಾ ಹೆಚ್ಚಾಗುತ್ತಿದೆ. ಓಟಿಟಿಯಲ್ಲಿ ಕನ್ನಡದ ಬಿಗ್ ಬಾಸ್ ನ ಮೊದಲನೇ ಸೀಸನ್ ಕುರಿತು ಮೊದಲನೇ ವಾರದಲ್ಲೇ ಸಾಕಷ್ಟು ಸುದ್ದಿಗಳಾಗಿವೆ. ಓಟಿಟಿಯಲ್ಲಿ ಬಿಗ್ ಬಾಸ್ ಕೇವಲ ಅರವತ್ತು ದಿನಗಳು ಮಾತ್ರವೇ ನಡೆಯಲಿದೆ. ಆದ ಕಾರಣ ಎಲ್ಲಾ ಸ್ಪರ್ಧಿಗಳು ಈ ಸೀಮಿತ ಅವಧಿಯಲ್ಲೇ ತನ್ನ ಸರ್ವ ಪ್ರಯತ್ನ ಮಾಡಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲಬೇಕಿದೆ. ಇಲ್ಲವಾದರೆ ಟ್ರೋಫಿ ಕಡೆಯ ಅವರ ಪ್ರಯಾಣ ಖಂಡಿತ ಕಠಿಣವಾಗಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಕೆಲವು ಸ್ಪರ್ಧಿಗಳು ಮಾತ್ರ ಈಗಾಗಲೇ ತಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದು, ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಹಾ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ.

ರೀಲ್ಸ್ ಮೂಲಕ ಸಖತ್ ಸದ್ದು ಮಾಡಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯೊಳಕ್ಕೆ ಕಾಲಿಟ್ಟಾಗ ಹೊರಗೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ದೊಡ್ಡ ಅಸಮಾಧಾನ ನೆಟ್ಟಿಗರು ಹೊರ ಹಾಕಿದ್ದರು. ಆದರೆ ಮೊದಲ ವಾರದಲ್ಲೇ ಸೋನು ಎಲಿಮಿನೇಷನ್ ಎದುರಿಸುತ್ತಾರೆ ಎಂದು ಊಹೆ ಮಾಡಿದ್ದವರಿಗೆ ನಿರಾಶೆ ಆಗಿದೆ. ಸೋನು ಒಳ್ಳೆ ಓಟುಗಳನ್ನು ಪಡೆದು, ಜನರ ಬೆಂಬಲದಿಂದ ಎರಡನೇ ವಾರಕ್ಕೆ ಎಂಟ್ರಿ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರೀಲ್ಸ್ ರಾಣಿ ತಮ್ಮದೇ ಶೈಲಿಯ ಮಾತು ಹಾಗೂ ಕಿರಿಕ್ ಗಳಿಂದ ಸದ್ದು ಮಾಡಿದ್ದಾರೆ. ಸೋನು ಮಾತನಾಡುವ ವಿಧಾ‌ನ ಬಿಗ್ ಬಾಸ್ ಮನೆಯಲ್ಲಿ ಅನೇಕರ ತಕರಾರಿಗೆ ಕಾರಣವಾಗಿದೆ.

ಇದೇ ವಿಚಾರವಾಗಿ ನಟ ರಾಕೇಶ್ ಅಡಿಗ ಸೋನುಗೆ ಬುದ್ಧಿ ಮಾತನ್ನು ಹೇಳುವ ಪ್ರಯತ್ನವೊಂದನ್ನು ಮಾಡಿದ್ದಾರೆ. ಅದು ಯಾವ ಹೊತ್ತಿನಲ್ಲಿ ಎನ್ನುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೌದು, ರಾಕೇಶ್ ಅಡಿಗ ಅವರು ರಾತ್ರಿ 2:15 ರ ಸಮಯದಲ್ಲಿ ಸೋನು ಗೌಡಗೆ ಬುದ್ಧಿ ಮಾತನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹಗಲಿನಲ್ಲಿ ಯಾರೂ ನಿದ್ದೆ ಮಾಡುವ ಹಾಗಿಲ್ಲ. ರಾತ್ರಿ ಲೈಟ್ ಆಫ್ ಆದ ನಂತರವೇ ಎಲ್ಲರೂ ನಿದ್ರೆ ಮಾಡಬೇಕು. ಅದಕ್ಕಾಗಿ ಅನೇಕರು ಕಾಯುತ್ತಲೂ ಇರುತ್ತಾರೆ. ಆದರೆ ಒಮ್ಮೊಮ್ಮೆ ಮಾತಿನ ಭರದಲ್ಲಿ ಕೆಲವು ಸ್ಪರ್ಧಿಗಳು ನಿದ್ದೆ ಮಾಡುವುದನ್ನೇ ಮರೆಯುತ್ತಾರೆ.

ಈಗ ಅಂತಹುದೇ ಒಂದು ಕೆಲಸ ಮಾಡಿದ್ದಾರೆ ರಾಕೇಶ್ ಅಡಿಗ ಮತ್ತು ಸೋನು ಗೌಡ. ರಾತ್ರಿ 2:15 ರ ಸಮಯದಲ್ಲಿ ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಮತ್ತು ಸೋನು ಗೌಡ ಅವರ ನಡುವೆ ಮಾತುಕತೆ ನಡೆಯುತ್ತಿತ್ತು. ಆಗ ಅಲ್ಲಿಗೆ ರಾಕೇಶ್ ಅಡಿಗ ಸೋನು ಅವರನ್ನು ಮಾತನಾಡಿಸಲು ಬಂದರು. ಆಗ ಸೋನು ನೀನು ದಯವಿಟ್ಟು ಹೋಗಬೇಕು ಅಂತ ನನ್ನ ವಿನಂತಿ. ನನ್ನ ಮತ್ತು ನಿನ್ನ ವಿಷಯವನ್ನು ಬೇರೆಯವರ ಮುಂದೆ ಜಡ್ಜ್ ಮಾಡಬೇಡ. ನನಗೆ ಇಷ್ಟ ಆಗಲ್ಲ ಹೋಗು ಎಂದು ಸಿಟ್ಟಿನಿಂದ ಮಾತನಾಡಿದ್ದು, ಅವರ ಸಿಟ್ಟು ರಾಕೇಶ್ ಅವರಿಗೆ ಅರ್ಥವಾಗಿದೆ.

ಸೋನು ಮಾತಿಗೆ ಶಾಂತವಾಗಿ ಉತ್ತರ ನೀಡಿದ ರಾಕೇಶ್, ನನ್ನ ವಿಷಯ ಬಿಡಿ, ಇನ್ನು ಮುಂದೆ ಚೈತ್ರ ಅವರನ್ನು ಹೋಗೆ,ಬಾರೆ ಎಂದು ಕರೆಯಬೇಡ ಎನ್ನುವ ಬುದ್ಧಿ ಮಾತು ಹೇಳಿ ರಾಕೇಶ್ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಆಗ ಸೋನು ಗೌಡ, ಯಾರು ಏನೇ ಹೇಳಲಿ, ಎಷ್ಟೇ ಹೇಳಲಿ ಕೇಳುವ ಮೂಡ್ ನಲ್ಲಿಲ್ಲ. ಪದೇ ಪದೇ ಹೇಳಬೇಡಿ, ನನಗೆ ಅದು ಮರೆತು ಹೋಗುತ್ತದೆ ಎ‌ಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆ ಸೋನು ಗೌಡ ಶೋ ಗೆ ಬರಬಾರದಿತ್ತು ಎಂದವರಿಗಿಂತ ಅವರನ್ನು ಮನೆಯಲ್ಲೇ ಉಳಿಯುವ ಹಾಗೆ ಮಾಡಿರುವ ಪ್ರೇಕ್ಚಕರು ಯಾವ ಮಟ್ಟದಲ್ಲಿ ಅವರ ಆಟವನ್ನು ಮೆಚ್ಚಿದ್ದಾರೆ ನೀವೇ ಊಹಿಸಿ.

Leave a Reply

Your email address will not be published.