ರಾಜ್ ಕುಂದ್ರಾ ವಿವಾದದ ನಂತರ ಶಿಲ್ಪಾ ಶೆಟ್ಟಿ ಜಾಗಕ್ಕೆ ಹೊಸ ಸೆಲೆಬ್ರಿಟಿಗಳು:ಪ್ರತಿ ವಾರ ಹೊಸ ಅತಿಥಿಗಳು.

Written by Soma Shekar

Published on:

---Join Our Channel---

ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ಆಗಿರುವ ರಾಜ್ ಕುಂದ್ರಾ ಅ ಶ್ಲೀ ಲ ಸಿನಿಮಾಗಳ ಪ್ರಕರಣದಲ್ಲಿ ಆರೋಪವನ್ನು ಎದುರಿಸುತ್ತಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರತಿದಿನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಅಲ್ಲದೇ ಈ ವಿಚಾರದಲ್ಲಿ ಕೆಲವು ನಟಿಯರ ಹೆಸರು ಕೂಡಾ ತಳಕು ಹಾಕಿಕೊಂಡಿದೆ. ಕೆಲವು ನಟಿಯರು ರಾಜ್ ಕುಂದ್ರಾ ಅವರ ಮೇಲೆ ಆ ರೋ ಪ ಮಾಡಿದ್ದಾರೆ‌. ಇಂತಹ ಸಂದಿಗ್ಧ ಪರಿಸ್ಥಿತಿಯಿಂದಾಗಿ ನಟಿ ಶಿಲ್ಪಾ ಶೆಟ್ಟಿ ಅವರೂ ಈಗ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಿದೆ. ಇದೇ ಕಾರಣದಿಂದಲೇ ಶಿಲ್ಪ ಶೆಟ್ಟಿ ಅವರು ಜಡ್ಜ್ ಮಾಡುತ್ತಿದ್ದ ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ಸೂಪರ್ ಡ್ಯಾನ್ಸರ್ ಚಾಪ್ಟರ್ 4 ಕಾರ್ಯಕ್ರಮದಿಂದ ಶಿಲ್ಪಾಶೆಟ್ಟಿ ಬ್ರೇಕ್ ತೆಗೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಶೋನಿಂದ ಬ್ರೇಕ್ ತೆಗೆದುಕೊಂಡು ಹೊರಗೆ ಬಂದಿರುವ, ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ವಾರ ಅತಿಥಿಗಳಾಗಿ ಬರುವವರು ಈ ಡಾನ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕಷ್ಟದ ದಿನಗಳನ್ನು ಎದುರಿಸುತ್ತಿರುವ ಶಿಲ್ಪಾಶೆಟ್ಟಿ ಅವರಿಗಾಗಿ ಅವರ ಅಭಿಮಾನಿಗಳು ಎಲ್ಲಾ ಕಷ್ಟಗಳು ಆದಷ್ಟು ಬೇಗ ದೂರವಾಗಲಿ ಎಂದು ಸೋಶಿಯಲ್ ಮೀಡಿಯಾ ಗಳಲ್ಲಿ ಶುಭವನ್ನು ಹಾರೈಸುತ್ತಿದ್ದಾರೆ. ಅಲ್ಲದೇ ಅಭಿಮಾನಿಯೊಬ್ಬರು ಶಿಲ್ಪಾ ಶೆಟ್ಟಿ ಅವರ ಮನೆಗೆ ಹೂಗುಚ್ಛವನ್ನು ಕಳಿಸುವ ಮೂಲಕ ಶಿಲ್ಪಾ ಅವರಿಗೆ ಶುಭವನ್ನು ಕೋರಿದ್ದಾರೆ.

ಶಿಲ್ಪಾ ಶೆಟ್ಟಿ ಡ್ಯಾನ್ಸ್ ಕಾರ್ಯಕ್ರಮಕ್ಕೆ ಮತ್ತೆ ಯಾವಾಗ ವಾಪಸ್ ಬರಲಿದ್ದಾರೆ ?? ಎನ್ನುವ ಪ್ರಶ್ನೆಯನ್ನು ಸಹ ಬಹಳಷ್ಟು ಜನ ಅಭಿಮಾನಿಗಳು ಮಾಡುತ್ತಿದ್ದಾರೆ. ಇದೇ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಇನ್ನೂ ಇಬ್ಬರು ಜಡ್ಜ್ ಗಳಿದ್ದಾರೆ. ಬಾಲಿವುಡ್ ಸಿನಿಮಾ ನಿರ್ದೇಶಕ ಅನುರಾಗ್ ಬಸು ಹಾಗೂ ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡುವ ಜನಪ್ರಿಯ ನೃತ್ಯ ನಿರ್ದೇಶಕಿ ಗೀತಾ ಕೌರ್ ಸಹಾ ಕಾರ್ಯಕ್ರಮದಲ್ಲಿ ಪ್ರಮುಖ ಜಡ್ಜ್ ಗಳಾಗಿದ್ದಾರೆ. ಈಗ ಅವರಿಬ್ಬರ ಜೊತೆಗೆ ಅತಿಥಿಗಳಾಗಿ ಬರುವವರು ಇನ್ನು ಮುಂದೆ ಶಿಲ್ಪಾಶೆಟ್ಟಿ ಅವರ ಜಾಗದಲ್ಲಿ ಜಡ್ಜ್ಮೆಂಟ್ ನೀಡಲಿದ್ದಾರೆ.

ರಾಜ್ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಡ್ಯಾನ್ಸ್ ಶೋ ನ ಶೂಟಿಂಗ್ ಗೆ ಹಾಜರಾಗಿರಲಿಲ್ಲ. ಬಹುಶಃ ಒಂದೆರಡು ಎಪಿಸೋಡ್ ಗಳ ನಂತರ ಅವರು ಬರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಗಳು ಅದಕ್ಕೆ ಪೂರಕವಾಗಿಲ್ಲ ಎನ್ನುವ ರೀತಿ ವಾತಾವರಣ ಕಾಣುತ್ತಿದೆ. ಆದ್ದರಿಂದಲೇ ಕಳೆದ ವಾರ ನಟಿ ಕರಿಷ್ಮಾ ಕಪೂರ್ ಶಿಲ್ಪಾ ಶೆಟ್ಟಿ ಅವರ ಜಾಗವನ್ನು ಅಲಂಕರಿಸಿದ್ದರು. ಈ ವಾರ ಜೆನಿಲಿಯಾ ಹಾಗೂ ರಿತೇಶ್ ದೇಶ್ಮುಖ್ ಅವರು ಆಗಮಿಸಲಿದ್ದಾರೆ. ಮುಂದಿನ ವಾರ ಮೌಸಮಿ ಚಟರ್ಜಿ ಹಾಗೂ ಸೋನಾಲಿ ಬೇಂದ್ರೆ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಇನ್ನು ವರದಿಗಳ ಪ್ರಕಾರ ಕಾರ್ಯಕ್ರಮದ ಆಯೋಜಕರು ಶಿಲ್ಪಾ ಶೆಟ್ಟಿ ತಮ್ಮ ಕಾರ್ಯಕ್ರಮದ ಒಂದು ಭಾಗವಾಗಿದ್ದಾರೆ. ಅವರು ಶೋ ಗೆ ಮರಳಿ ಬರುತ್ತಾರೆ. ಅವರು ವಾಪಸ್ ಆಗುವವರೆಗೂ ಸಹ ಅವರ ಸ್ಥಾನವನ್ನು ಅತಿಥಿ ಜಡ್ಜ್ ಗಳು ತುಂಬಲಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಶಿಲ್ಪಾ ಶೆಟ್ಟಿ ಸೂಪರ್ ಡ್ಯಾನ್ಸರ್ ಕಾರ್ಯಕ್ರಮಕ್ಕೆ ಮರಳಿ ಬರುವವರೆಗೂ ಸಹ ಅನುರಾಗ್ ಬಸು ಮತ್ತು ಗೀತಾ ಅವರ ಜೊತೆಗೆ ಅತಿಥಿಗಳಾಗಿ ಆಗಮಿಸುವ ಬಾಲಿವುಡ್ ನ ಸೆಲೆಬ್ರಿಟಿಗಳು ಶೋ ನಲ್ಲಿ ಸ್ಪರ್ಧಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್ ಗಳಿಗೆ ನ್ಯಾಯ ತೀರ್ಮಾನವನ್ನು ನೀಡಲಿದ್ದಾರೆ.

Leave a Comment