ರಾಜ್ಯ ರಾಜಕಾರಣದ ವಿಪ್ಲವ ಸುಖಾಂತ್ಯ: ಕೋಡಿ ಮಠದ ಶ್ರೀಗಳ ಅಚ್ಚರಿಯ ಭವಿಷ್ಯವಾಣಿ

Written by Soma Shekar

Published on:

---Join Our Channel---

ರಾಜ್ಯ ರಾಜಕಾರಣದಲ್ಲಿ ಎದ್ದಿರುವ ರಾಜಕೀಯ ಸಮಸ್ಯೆಗಳು ಶೀಘ್ರದಲ್ಲೇ ಸುಖಾಂತ್ಯವನ್ನು ಕಾಣಲಿದೆ ಎನ್ನುವುದಾಗಿ ಕೋಡಿ ಮಠದ ಶ್ರೀಗಳು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳವರು ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಕುರಿತಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಕೋಡಿ ಶ್ರೀಗಳವರು ರಾಜ್ಯದಲ್ಲಿ ಎದ್ದಿರುವ ರಾಜಕೀಯ ವಿಪ್ಲವವದು ಸುಖಾಂತ್ಯವನ್ನು ಕಾಣಲಿದೆ ಎನ್ನುವ ಭರವಸೆಯೊಂದನ್ನು ನೀಡುವ ಮೂಲಕ ಎಲ್ಲರ ಗಮನವನ್ನು ಅವರ ಭವಿಷ್ಯವಾಣಿ ಕಡೆ ಸೆಳೆದಿದ್ದಾರೆ.

ಕೋಡಿ ಶ್ರೀಗಳವರು ಮಾತನಾಡುತ್ತಾ ಮಾರ್ಮಿಕವಾದ ನುಡಿಗಳ ಮೂಲಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಬೇಟೆಗಾರನೊಬ್ಬನಿಂದ ತಪ್ಪಿಸಿಕೊಂಡ ಜಿಂಕೆ ಓಡಿ ಹೋಗಿತ್ತು. ಸನ್ಯಾಸಿಯೊಬ್ಬನ ಎದುರು ಜಿಂಕೆ ಹಾದುಕೊಂಡು ಓಡಿ ಹೋಗಿತ್ತು. ಜಿಂಕೆಯ ಬಗ್ಗೆ ಬೇಟೆಗಾರ ಸನ್ಯಾಸಿಯನ್ನು ಕೇಳಿದಾಗ ಅವರಿಗೊಂದು ದ್ವಂದ್ವ ಉಂಟಾಗಿತ್ತು. ಏಕೆಂದರೆ ಜಿಂಕೆ ಓಡಿಹೋದ ದಿಕ್ಕು ಹೇಳಿದರೆ ಅದರ ಸಾ ವಿ ಗೆ ಅದು ಕಾರಣವಾಗುತ್ತದೆ. ಒಂದು ವೇಳೆ ಹೇಳದೇ ಹೋದರೆ ಅದರಿಂದ ಸುಳ್ಳನಾಡುವ ಎಂಬ ಸಂಕಟ ಉಂಟಾಯಿತು.

ಇದೇ ವಿಚಾರ ರಾಜಕೀಯದ ಬಗ್ಗೆ ಹೇಳಲು ತೊಡಕಾಗುತ್ತದೆ ಎಂದಿರುವ ಕೋಡಿ ಶ್ರೀಗಳವರು, ಆದರೆ ಸದ್ಯವೇ ಈ ಸ್ಥಿತಿ ಸುಖಾಂತ್ಯ ಕಾಣಲಿದೆ ಎನ್ನುವ ಭವಿಷ್ಯವಾಣಿ ನುಡಿದಿದ್ದಾರೆ. ಸಂಕ್ರಾಂತಿಯೊಳಗೆ ಬಹುದೊಡ್ಡ ಅ ವ ಘಡ ಸಂಭವಿಸಲಿದೆ ಎಂದಿರುವ ಅವರು ಅದು ಜಗತ್ತನ್ನು ತಲ್ಲಣಿಸುವ ಅವಘಡ ಆಗಲಿದೆ ಎಂದಿದ್ದಾರೆ. ಆಗಸ್ಟ್ ಮೂರನೇ ವಾರದಿಂದ ರೋಗ ರುಜಿನಗಳು ಹೆಚ್ಚಾಗಲಿವೆ ಎಂದು ಸಹಾ ಭವಿಷ್ಯವಾಣಿ ಮಾಡಿದ್ದಾರೆ.

ಜನವರಿಯ ವರೆಗೂ ರೋಗ ರುಜಿನಗಳು ಹೀಗೆ ಇರಲಿದ್ದು ಜನ ಭಯದಿಂದ ಸಾಯುತ್ತಾರೆ ಎಂದು ನುಡಿದಿದ್ದಾರೆ. ನವೆಂಬರ್ ಹಾಗೂ ಸಂಕ್ರಾಂತಿಯ ನಡುವೆ ದೇಶದಲ್ಲೊಂದು ದೊಡ್ಡ ರಾಜಕೀಯ ಅವಘಡ ಸಂಭವಿಸಲಿದೆ, ಅದು ಜಾಗತಿಕ ಮಟ್ಟದಲ್ಲೊಂದು ತಲ್ಲಣಕ್ಕೆ ಕಾರಣವಾಗಲಿದೆ ಎನ್ನುವ ಸೂಚನೆಯನ್ನು ಕೋಡಿ ಶ್ರೀಗಳು ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ.

Leave a Comment