ರಾಜಸ್ಥಾನದ ಕನ್ಹಯ್ಯ ಲಾಲ್ ಹ ತ್ಯೆ: ಬೇರೆಲ್ಲಾ ನಟಿಯರ ಮೌನದ ನಡುವೆ ನಟಿ ಪ್ರಣೀತಾ ಸುಭಾಷ್ ಮೌನ ಪ್ರತಿಭಟನೆ,

Entertainment Featured-Articles Movies News

ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಲಾಲ್ ಹ ತ್ಯೆ ಯ ವಿಚಾರ ಇಡೀ ದೇಶದಲ್ಲಿ ತಲ್ಲಣವನ್ನು ಹುಟ್ಟು ಹಾಕಿದೆ. ದು ಷ್ಕ ರ್ಮಿಗಳು ಐಸಿಸ್ ಮಾದರಿಯ ಕೃತ್ಯವನ್ನು ಎಸಗಿ, ದು ಷ್ಕೃ ತ್ಯವನ್ನು ಮೆರೆದಿದ್ದು, ಈ ಘಟನೆಯ ನಂತರ ದೇಶವ್ಯಾಪಿಯಾಗಿ ಖಂಡನೆಗಳು ಕೇಳಿ ಬರುತ್ತಿವೆ‌. ಹ ತ್ಯೆ ಮಾಡಿದವರಿಗೆ ಕಠಿಣ ಶಿ ಕ್ಷೆ ಯನ್ನು ವಿಧಿಸಬೇಕೆನ್ನುವ ಕೂಗು ಕೇಳಿ ಬರುತ್ತಿದೆ. ಈಗ ಇವೆಲ್ಲವುಗಳ ನಡುವೆಯೇ ಸ್ಯಾಂಡಲ್ವುಡ್ ನ ನಟಿ ಪ್ರಣೀತಾ ಅವರು ಈ ವಿಚಾರವಾಗಿ ತಮ್ಮದೇ ಆದ ರೀತಿಯಲ್ಲಿ ಪ್ರ ತಿ ಭ ಟನೆಯನ್ನು ಮಾಡಿದ್ದು, ಅವರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಟಿ ಪ್ರಣೀತಾ ಅವರು ತಮ್ಮ ಕೈಯಲ್ಲಿ ಒಂದು ಬೋರ್ಡ್ ಅನ್ನು ಹಿಡಿದಿದ್ದು, ಅದರ ಮೇಲೆ ಹಿಂದೂಗಳ ಜೀವ ಮುಖ್ಯ ಎಂದು ಬರೆಯಲಾಗಿದೆ. ಯಾರಿಗಾದರೂ ಕೇಳಿಸುತ್ತಿದೆಯೇ? ಎನ್ನುವ ಪ್ರಶ್ನೆಯನ್ನು ಮಾಡಿದ್ದಾರೆ. ಇದೇ ವೇಳೆ ಪ್ರಣೀತ ಅವರು ಇನ್ನೊಂದು ಟ್ವೀಟ್ ಮಾಡಿದ್ದು ಅದರಲ್ಲಿ ಅವರು ನಾನು ಉದಯಪುರದ ವೀಡಿಯೋವನ್ನು ನೋಡಬಾರದಿತ್ತು. ಅದು ಸಂಪೂರ್ಣವಾಗಿ ಭ ಯೋ ತ್ಪಾ ದ ನೆ ಆಗಿದೆ. ಆ ವೀಡಿಯೋದ ಹಿನ್ನೆಲೆಯಲ್ಲಿ ಕೇಳಿಸುವ ಕಿರುಚಾಟಗಳು ನಮ್ಮ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತದೆ ಮತ್ತು ಕಾಡುತ್ತವೆ ಎಂದು ಬರೆದುಕೊಂಡಿದ್ದಾರೆ.

ಪ್ರವಾದಿ ಕುರಿತು ಬಿಜೆಪಿಯ ಉಚ್ಛಾಟಿತ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಯನ್ನು ಬೆಂಬಲಿಸಿ ಕನ್ಹಯ್ಯ ಲಾಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. ಇದರಿಂದಾಗಿ ಅವರ ತಲೆಯನ್ನು ಕತ್ತರಿಸಿ ಹಾಕಿರುವ ಆ ರೋ ಪಿ ಗಳು ನಂತರ ವೀಡಿಯೋ ಒಂದನ್ನು ಮಾಡಿದ್ದು ಅದರ ಮೂಲಕ ಹಂ ತ ಕ ರಾದ ಮೊಹಮ್ಮದ್ ರಿಯಾಜ್ ಮತ್ತು ಮೊಹಮ್ಮದ್ ಗೌಸ್ ಕೈ ಯಲ್ಲಿ ಚಾಕು ಹಿಡಿದು ಪ್ರಧಾನಿ ನರೇಂದ್ರ ಮೋದಿಯವರಿಗೂ ಬೆ ದ ರಿಕೆ ಹಾಕಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Leave a Reply

Your email address will not be published.