ರಾಜಮೌಳಿ ಸಿನಿಮಾಕ್ಕೆ ಗೂಗಲ್ ಕೊಟ್ಟ ಸರ್ಪ್ರೈಸ್: RRR ಎಂದು ಟೈಪ್ ಮಾಡಿ ಸರ್ಚ್ ಮಾಡಿ ಮ್ಯಾಜಿಕ್ ನೋಡಿ

Written by Soma Shekar

Published on:

---Join Our Channel---

ಬಾಹುಬಲಿ ಸಿರೀಸ್ ನಂತರ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದಲ್ಲಿ ತೆರೆಗೆ ಬಂದ ಸಿನಿಮಾ ತ್ರಿಬಲ್ ಆರ್. ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಗೆ ಬಂದ ಸಿನಿಮಾ ಹೊಸ ದಾಖಲೆಗಳನ್ನು ಬರೆಯಿತು. ಈ ಸಿನಿಮಾದಲ್ಲಿ ನಟ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ, ಯಂಗ್ ಟೈಗರ್ ಜೂನಿಯರ್‌ ಎನ್ ಟಿ ಆರ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಫಿಕ್ಷನ್ ನಲ್ಲಿ ಆ್ಯಕ್ಷನ್ ಥ್ರಿಲ್ಲರ್ ಆಗಿ ಮೂಡಿ ಬಂದ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಹಾಲಿವುಡ್ ನಟಿ ಓಲಿವಿಯಾ ಮೋರಿಸ್, ಬಾಲಿವುಡ್ ನಟ ಅಜಯ್ ದೇವಗನ್, ನಟಿ ಶ್ರೀಯಾ ಶರಣ್ ಹೀಗೆ ದೊಡ್ಡ ತಾರೆಗಳ ತಾರಾಗಣವು ಈ ಸಿನಿಮಾದ ಮತ್ತೊಂದು ವಿಶೇಷವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ವರ್ಷ ಮಾರ್ಚ್ 25 ಕ್ಕೆ ತೆರೆಗೆ ಬಂದ ತ್ರಿಬಲ್ ಆರ್ ಪ್ರಪಂಚದಾದ್ಯಂತ ಬಿಡುಗಡೆಯಾಗಿ 1100 ಕೋಟಿ ರೂ.ಗಳ ಕಲೆಕ್ಷನ್ ಮಾಡಿ ಬಾಲಿವುಡ್ ಸಿನಿಮಾಗಳನ್ನೂ ಹಿಂದೆ ಹಾಕಿತ್ತು. ಇಬ್ಬರು ಸ್ಟಾರ್ ನಟರ ನಟನೆ, ಮೇಕಿಂಗ್ ಹಾಗೂ ನಿರ್ದೇಶನ ಎಲ್ಲವನ್ನೂ ಸಹಾ ಪ್ರೇಕ್ಷಕರು ಹಾಡಿ ಹೊಗಳಿದರು. ಹೀಗೆ ಬೆಳ್ಳಿತೆರೆಯಲ್ಲಿ ಒಂದು ಮಿಂಚಿನಂತೆ ಬಂದು ಅಬ್ಬರಿಸಿದ ಈ ಸಿನಿಮಾ ಇದೀಗ ಆಗಸ್ಟ್ 15 ರಂದು ಕಿರುತೆರೆಗೆ ಎಂಟ್ರಿ ನೀಡುತ್ತಿರುವುದು ಪ್ರೇಕ್ಷಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಹೀಗೆ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಗಳಿಸಿ ಸದ್ದು ಮಾಡಿದ ಈ ಸಿನಿಮಾಕ್ಕೆ ಪ್ರಮುಖ ಸರ್ಚ್ ಇಂಜಿನ್ ಗೂಗಲ್ ಒಂದು ಸರ್ಪ್ರೈಸ್ ನೀಡಿದೆ.

ಹೌದು, ಗೂಗಲ್ ತ್ರಿಬಲ್ ಆರ್ ಸಿನಿಮಾಕ್ಕೆ ಹೊಸ ಸರ್ಪ್ರೈಸ್ ನೀಡಿದ್ದು, ಈ ಸರ್ಪ್ರೈಸ್ ಏನು ಎನ್ನುವುದಾದರೆ, ಗೂಗಲ್ ನಲ್ಲಿ ತ್ರಿಬಲ್ ಆರ್ ಸಿನಿಮಾ ಸರ್ಚ್ ಮಾಡಿದಾಗ, ಸರ್ಚ್ ಬಾರ್ ಕೆಳಗೆ ಕುದುರೆ ಮತ್ತು ಬೈಕ್ ಹೋಗುತ್ತಿರುವಂತೆ ಆ್ಯನಿಮೇಷನ್ ಮಾಡಲಾಗಿದ್ದು, RRR ಎಂದು ಟೈಪ್ ಮಾಡಿ ಸರ್ಚ್ ಮಾಡಿದ ಕೂಡಲೇ ಕುದುರೆ ಮತ್ತು ಬೈಕ್ ಬರುತ್ತಿದೆ. ಸಿನಿಮಾದಲ್ಲಿ ನಾಯಕ ನಟ ಎನ್ಟಿಆರ್ ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ರಾಮ್ ಚರಷ್ ತೇಜಾ ಕುದುರೆಯ ಮೇಲೆ ಸವಾರಿ ಮಾಡುವುದನ್ನು ನಾವು ನೋಡಬಹುದು, ಅದನ್ನೇ ಸಾಂಕೇತಿಕವಾಗಿ ತೋರಿಸುವಂತೆ ಈಗ ಗೂಗಲ್ ನಲ್ಲಿ ಕುದುರೆ ಮತ್ತು ಬೈಕ್ ಬರುತ್ತಿದೆ.

https://www.instagram.com/reel/ChMJZ4qjzT6/?igshid=YmMyMTA2M2Y=

ಸಿನಿಮಾದಲ್ಲಿ ಹೀರೋಗಳು ಬೈಕ್ ಮತ್ತು ಕುದುರೆ ಮೇಲೆ ಸವಾರಿ ಮಾಡಿ ಮಿಂಚಿದ್ದನ್ನು ಸಂಕೇತಿಸುವಂತೆ ಗೂಗಲ್ ಸರ್ಪ್ರೈಸ್ ನೀಡಿದ್ದು ಅಭಿಮಾನಿಗಳು ಇದನ್ನು ನೋಡಿ ಖುಷಿ ಪಡುತ್ತಿದ್ದಾರೆ. ಗೂಗಲ್ ನೀಡಿದ ಇಂತಹುದೊಂದು ಉಡುಗೊರೆ ಗೆ ಖುಷಿಗೊಂಡಿರುವ ತ್ರಿಬಲ್ ಆರ್ ಚಿತ್ರ ತಂಡವು ಸಹಾ ಈ ಖುಷಿಯನ್ನು ಶೇರ್ ಮಾಡಿಕೊಂಡಿರುವುದು ಮಾತ್ರವೇ ಅಲ್ಲದೇ ಗೂಗಲ್ ಗೆ ಧನ್ಯವಾದಗಳನ್ನು ಸಹಾ ತಿಳಿಸಿದ್ದಾರೆ. ಬೇಕಿದ್ದರೆ ನೀವು ಒಮ್ಮೆ ಗೂಗಲ್ ನಲ್ಲಿ RRR ಎಂದು ಟೈಪ್ ಮಾಡಿ ಸರ್ಚ್ ಕೊಟ್ಟು ನೋಡಿ ಹೊಸ ಸರ್ಪ್ರೈಸ್ ನಿಮ್ಮ ಕಣ್ಮುಂದೆ ಬರುತ್ತದೆ.

Leave a Comment