ರಾಜನಂದಿನಿ ನಂತರ ಮತ್ತೊಂದು ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲು ಸಜ್ಜಾದ ನಟಿ ಸೋನು ಗೌಡ: ಇಂತ ಪಾತ್ರ ಇದೇ ಮೊದಲು

0 5

ಸ್ಯಾಂಡಲ್ವುಡ್ ನಲ್ಲಿ ಇಂತಿ ನಿನ್ನ ಪ್ರೀತಿಯ, ಗುಳ್ಟು, ಯುವ ರತ್ನ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟಿ ಸೋನು ಗೌಡ ಈಗಾಗಲೇ ತಮ್ಮ ನಟನೆಯ ಮೂಲಕ ಸಿನಿ ಪ್ರಿಯರ ಅಭಿಮಾನವನ್ನು ಸಹಾ ಗಳಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಪಾತ್ರಗಳು ಕಲಾವಿದರ ನಟನೆಗೆ ಸವಾಲನ್ನು ಹಾಕುವಂತೆ ಹಾಗೂ ವಿಭಿನ್ನವಾಗಿ ಇರಬೇಕೆಂದು ಬಹಳಷ್ಟು ಜನ ಕಲಾವಿದರು ಬಯಸುತ್ತಾರೆ. ಈಗ ಅಂತಹುದೇ ಒಂದು ಸವಾಲಿನ ಪಾತ್ರವನ್ನು ನಿರ್ವಹಿಸಲು ನಟಿ ಸೋನು ಗೌಡ ಅವರು ಸಜ್ಜಾಗಿದ್ದಾರೆ.

ಹೌದು, ನಟಿ ಸೋನು ಗೌಡ ಅವರ ತಮ್ಮ ಮುಂದಿನ ಸಿನಿಮಾದಲ್ಲಿ ಲೈಂ ಗಿ ಕ ಕಾರ್ಯಕರ್ತೆಯ ಪಾತ್ರವನ್ನು ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಕನ್ನಡ ಸಿನಿಮಾ ನಟಿಯರು ಇತ್ತೀಚಿನ ದಿನಗಳಲ್ಲಿ ವೈವಿದ್ಯಮಯ ಪಾತ್ರಗಳ ಕಡೆಗೆ ಗಮನವನ್ನು ಹರಿಸುತ್ತಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಈಗಾಗಲೇ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ನಟಿ ಸೋನು ಗೌಡ ಅವರು ಇದೇ ಮೊದಲ ಬಾರಿಗೆ ಎನ್ನುವಂತೆ, ಅವರು ಹಿಂದೆಂದೂ ಮಾಡಿರದ ಪಾತ್ರವನ್ನು ಮಾಡಲು ಸಜ್ಜಾಗಿದ್ದು, ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಹಾಕಲು ಸಜ್ಜಾಗುತ್ತಿದ್ದಾರೆ.

ಸೋನು ಗೌಡ ಅವರು ಬಹುಭಾಷಾ ನಟಿಯಾಗಿದ್ದು, ವೈವಿದ್ಯಮಯ ಪಾತ್ರಗಳಿಂದಲೇ ಅವರು ಜನಪ್ರಿಯತೆ ಪಡೆದಿದ್ದು, ಈಗ ಲೈಂ ಗಿ ಕ ಕಾರ್ಯಕರ್ತೆಯ ಪಾತ್ರವನ್ನು ನಿರ್ವಹಿಸುವ ನಿರ್ಧಾರವನ್ನು ಮಾಡಿದ್ದಾರೆ. ಸೋನು ಗೌಡ ಅವರು
ಯುವಧೀರ ನಿರ್ದೇಶನದ `ಗುಡ್ ಗುಡ್ಡರ್ ಗುಡ್ಡೆಸ್ಟ್’ ಎನ್ನುವ ಹೊಸ ಸಿನಿಮಾದಲ್ಲಿ ಲೈಂ ಗಿ ಕ ಕಾರ್ಯಕರ್ತೆ ಆಗಿ ನಟಿಸುತ್ತಿದ್ದು, ಸಿನಿಮಾ ಚಿತ್ರೀಕರಣವು ಈಗಾಗಲೇ ಭರದಿಂದ ನಡೆಯುತ್ತಿದೆ. ಕೆಲವೇ ದಿನಗಳ ಹಿಂದೆಯಷ್ಟೇ ನಟಿ ಸೋನು ಗೌಡ ಅವರು ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ನಲ್ಲಿ ನಟಿಸಿದ್ದರು.

ಕನ್ನಡ ಕಿರುತೆರೆಯ ಜನಪ್ರಿಯ ಹಾಗೂ ಯಶಸ್ವಿ ಸೀರಿಯಲ್ ಎನಿಸಿಕೊಂಡಿರುವ ಜೊತೆ ಜೊತೆಯಲಿ ಸೀರಿಯಲ್ ನ ಪ್ರಮುಖ ಘಟ್ಟವಾಗಿದ್ದ ರಾಜನಂದಿನಿ ಅಧ್ಯಾಯದಲ್ಲಿ ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಂಡು ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಸೋನು ಗೌಡ ಅವರು ರಾಜನಂದಿನಿಯಾಗಿ ಕಾಣಿಸಿಕೊಂಡು ಆ ಪಾತ್ರಕ್ಕೆ ಜೀವ ತುಂಬಿದ್ದು, ಅವರ ಅಭಿಮಾನಿಗಳು ಹಾಗೂ ಕಿರುತೆರೆಯ ಪ್ರೇಕ್ಷಕರಿಗೂ ಸಹಾ ಖುಷಿಯನ್ನು ನೀಡಿದೆ.

Leave A Reply

Your email address will not be published.