ರಾಜಕುಮಾರನಿಲ್ಲದ ಅರಮನೆ ಬಿಟ್ಟು ಹೊರಟ ಪವರ್ ಸ್ಟಾರ್ ಆಪ್ತ: ಇನ್ಯಾವ ಹೀರೋ ಜೊತೆ ಕೆಲಸ ಮಾಡಲ್ಲ!!

Entertainment Featured-Articles Movies News
64 Views

ಸ್ಯಾಂಡಲ್ವುಡ್ ನ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮರಳಿ ಬಾರದ ಲೋಕಕ್ಕೆ ಹೋದ ಮೇಲೆ ಆ ನೋವನ್ನು ಮರೆಯುವುದು ನಾಡಿನ ಜನರಿಗೆ ಇನ್ನೂ ಸಾಧ್ಯವಾಗಿಲ್ಲ. ಪ್ರತಿದಿನವೂ ಒಂದಲ್ಲಾ ಒಂದು ವಿಚಾರವಾಗಿ ಅವರನ್ನು ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಸ್ಮರಿಸುತ್ತಲೇ ಇರುತ್ತಾರೆ. ಅಪ್ಪು ಅವರ ಅಗಲಿಕೆಯ ನೋವಿನಲ್ಲೇ ದಿನ ಕಳೆಯುತ್ತಿದ್ದ, ಅವರ ನೆರಳಿನಂತೆ ಸದಾ ಇದ್ದು, ಅಪ್ಪು ಅವರ ರಕ್ಷಣೆ ಮಾಡುತ್ತಿದ್ದ ಗನ್ ಮ್ಯಾನ್ ಚಲಪತಿ ಅವರು ತಮ್ಮ ಉದ್ಯೋಗವನ್ನು ತೊರೆದು ತಮ್ಮ ಊರನ್ನು ಸೇರಿದ್ದಾರೆ.

ಹಲವು ವರ್ಷಗಳಿಂದ ಪುನೀತ್ ಅವರಿಗೆ ಗನ್ ಮ್ಯಾನ್ ಆಗಿ ಸದಾ ಅವರ ಬೆನ್ನ ಹಿಂದೆಯೇ ಇರುತ್ತಿದ್ದ ಚಲಪತಿ ಅವರು ರಾಜಕುಮಾರ ನಿಲ್ಲದ ಅರಮನೆಯನ್ನು ತೊರೆದಿದ್ದಾರೆ. ಕೋಲಾರದ ಬಳಿ ಬಂಗಾರಪೇಟೆಗೆ ಮರಳಿರುವ ಚಲಪತಿ ಅವರು ಇತ್ತೀಚಿಗೆ ಮಾದ್ಯಮವೊಂದರ ಜೊತೆ ಮಾತನಾಡಿದ್ದು, ತಾನು ಕೆಲಸವನ್ನು ಬಿಟ್ಟು ಊರಿಗೆ ಹಿಂತಿರುಗಿದ್ದೇಕೆ ಎನ್ನುವ ಕಾರಣವನ್ನು ತಿಳಿಸಿದ್ದು, ಚಲಪತಿ ಅವರು ಮಾತು ಕೇಳಿ ಅಪ್ಪು ಅಭಿಮಾನಿಗಳು ಮತ್ತೊಮ್ಮೆ ಭಾವುಕರಾಗಿದ್ದಾರೆ. ‌

ಚಲಪತಿ ಅವರು ಅಪ್ಪು ಅವರ ಆಪ್ತ ಗನ್ ಮ್ಯಾನ್ ಆಗಿದ್ದವರು. ಸಹಜವಾಗಿಯೇ ಅಪ್ಪು ಅವರನ್ನು ಬಹಳ ಹತ್ತಿರದಿಂದ ನೋಡಿ, ಅರ್ಥ ಮಾಡಿಕೊಂಡಿದ್ದ ವ್ಯಕ್ತಿಯಾಗಿದ್ದರು. ಅಪ್ಪು ಅವರ ಅಗಲಿಕೆಯ ನಂತರ ಅದೇ ನೋವಿನಲ್ಲೇ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಕೆಲವು ದಿನಗಳ ಹಿಂದೆ ಉದ್ಯೋಗ ತೊರೆದಿದ್ದು, ಇನ್ನು ಮುಂದೆ ಯಾವುದೇ ಹೀರೋ ಜೊತೆ ತಾನು ಕೆಲಸ ಮಾಡುವುದಿಲ್ಲ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದಾರೆ.

ಚಲಪತಿ ಅವರು, ಅಪ್ಪು ಸರ್ ನಿಧನದ ಬಳಿಕ ನನಗೆ ಅಲ್ಲಿ ಕೆಲಸ ಇರಲಿಲ್ಲ. ಪ್ರತಿ ದಿನ ಅಲ್ಲಿ ಕೂತು ಎದ್ದು ಬರೆಬೇಕಿತ್ತು. ಅದೇ ಕಾರಣದಿಂದಾಗಿ ನಾನು ಕೆಲಸವನ್ನು ಬಿಟ್ಟೆ. ಆದರೆ, ಮುಂದೆ ಯಾವುದೇ ಹೀರೊ ಜೊತೆ ಕೆಲಸ ಮಾಡಲ್ಲ. ಅಪ್ಪು ಸರ್ ನೆನಪು ನನ್ನಲ್ಲಿ ಜೀವಂತವಾಗಿ ಉಳಿಯಬೇಕು ಎನ್ನುವ ಮಾತುಗಳನ್ನು ಹೇಳಿರುವ ಅವರು ಮುಂದೆ ಯಾರಾದರೂ ಉದ್ಯಮಿಗಳ ಬಳಿ ಕೆಲಸವನ್ನು ಮಾಡುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *