ರಾಖೀ ಸಾವಂತ್ ಗಾಗಿ ನೀರಿನಂತೆ ಹಣ ಖರ್ಚು ಮಾಡುತ್ತಿರುವ ಆಕೆಯ ಹೊಸ ಬಾಯ್ ಫ್ರೆಂಡ್ ಕೊಟ್ಟ ಗಿಫ್ಟ್ ಶಾಕಿಂಗ್!!

Entertainment Featured-Articles Movies News

ಬಾಲಿವುಡ್ ನ ಡ್ರಾಮಾ ಕ್ವೀನ್ ರಾಖೀ ಸಾವಂತ್ ಮತ್ತೊಮ್ಮೆ ತಮ್ಮ ಖಾಸಗಿ ಜೀವನದ ವಿಚಾರದಿಂದಾಗಿ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ರಾಖೀ ಸಾವಂತ್ ತಾವು ತಮ್ಮ ಪತಿ ರಿತೇಶ್ ನಿಂದ ದೂರವಾಗಿದ್ದು, ಈಗ ಆದಿಲ್ ಖಾನ್ ದುರಾನಿ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಮಾದ್ಯಮಗಳ ಜೊತೆಗೆ ಹಂಚಿಕೊಂಡಿದ್ದರು. ತಮ್ಮ ಹೊಸ ಬಾಯ್ ಫ್ರೆಂಡ್ ಅನ್ನು ಎಲ್ಲರಿಗೂ ಅವರೂ ಪರಿಚಯವನ್ನು ಮಾಡಿಸಿದ್ದರು. ಇನ್ನು ಇತ್ತೀಚಿಗಷ್ಟೇ ರಾಖೀ ತಮ್ಮ ಹೊಸ ಗೆಳೆಯನ ಜೊತೆಗೆ ಏರ್ ಪೋರ್ಟ್ ನಲ್ಲಿ ಕ್ಯಾಮೆರಾ ಕಣ್ಣುಗಳಿಗೆ ಕಾಣಸಿಕೊಂಡಿದ್ದರು.

ಈ ವೇಳೆ ರಾಖಿ ತಾನು ದುಬೈ ಗೆ ಹೋಗುತ್ತಿರುವ ವಿಚಾರವನ್ನು ಹಂಚಿಕೊಂಡರು. ಅಲ್ಲದೇ ಮಾತನಾಡುತ್ತಾ ಆದಿಲ್ ಖಾನ್ ತಮಗಾಗಿ ನೀಡಿರುವ ದುಬಾರಿ ಉಡುಗೊರೆಗಳ ಕುರಿತಾಗಿಯೂ ರಾಖೀ ಹೇಳಿದ್ದು, ಆದಿಲ್ ಖಾನ್ ರಾಖೀ ಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಬಿಗ್ ಬಾಸ್ 15 ಕ್ಕೆ ರಾಖೀ ಎಂಟ್ರಿಯಿಂದ ಹಿಡಿದು ರಾಖೀ ಶೋ ನಿಂದ ಹೊರಗೆ ಬಂದ ಮೇಲೆಯೂ ಸಖತ್ ಸುದ್ದಿಗಳಾಗುತ್ತಲೇ ಇದೆ.

ಏಕೆಂದರೆ ಕೆಲವು ವರ್ಷಗಳಿಂದ ರಾಖೀ ತನಗೆ ಮದುವೆಯಾಗಿದೆ ಎಂದಿದ್ದರೇ ವಿನಃ ಅವರ ಪತಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ರಾಖಿಯ ಮದುವೆಯ ವಿಷಯವೇ ಸುಳ್ಳು ಎನ್ನಲಾಗಿತ್ತು. ಆಗಲೇ ರಾಖೀ ಪತಿ ಸಮೇತ ಬಿಗ್ ಬಾಸ್ ಗೆ ಎಂಟ್ರಿ ನೀಡಿ ಎಲ್ಲರಿಗೂ ಗಂಡನ ಪರಿಚಯ ಮಾಡಿಕೊಟ್ಟರು. ಆದರೆ ಬಿಗ್ ಬಾಸ್ ಮನೆಯಲ್ಲಿ ನಡೆದ ಕೆಲವು ಘಟನೆಗಳ ನಂತರ ಶೋ ಮುಗಿದ ಕೂಡಲೇ ರಾಖೀ ತಮ್ಮ ಪತಿಯಿಂದ ದೂರಾದರು. ಆ ಬೇಸರದಲ್ಲಿ ಇರುವಾಗಲೇ ಹೊಸದಾಗಿ ಆದಿಲ್ ಖಾನ್ ರಾಖೀ ಜೀವನ ಪ್ರವೇಶ ಮಾಡಿದ್ದಾರೆನ್ನಲಾಗಿದೆ.

ಇ ಟೈಮ್ಸ್ ರಾಖಿ ಮತ್ತು ಆದಿಲ್ ಅವರ ಸಂದರ್ಶನವನ್ನು ಮಾಡಿದೆ. ಈ ವೇಳೆ ಇಬ್ಬರೂ ಒಬ್ಬರನ್ನೊಬ್ಬರು ಹೊಗಳಿದ್ದಾರೆ. ರಾಖೀ ಆಗ ಮಾತನಾಡುತ್ತಾ, ಆದಿಲ್ ತನಗಾಗಿ ದುಬೈನಲ್ಲಿ ಒಂದು ಮನೆ ಖರೀದಿ ಮಾಡಿದ್ದಾರೆ, ತನಗಾಗಿ ಒಂದು ಬಿಎಂಡಬ್ಲ್ಯೂ ಕಾರನ್ನು ಉಡುಗೊರೆ ನೀಡಿದ್ದಾರೆ ಎನ್ನುವ ವಿಚಾರಗಳನ್ನು ಹೇಳಿದ್ದಾರೆ. ಅಲ್ಲದೇ ನನಗೆ ಅವರ ಪ್ರೀತಿಯೊಂದೇ ಸಾಕು, ಅವರು ಬಹಳ ಪ್ರಾಮಾಣಿಕ, ಇಲ್ಲದೇ ಹೋದರೆ ಯಾವ ಹುಡುಗ ತಾನೇ ತಾನು ಇಷ್ಟ ಪಟ್ಟ ಹುಡುಗಿಯನ್ನು ಇಷ್ಟು ಬೇಗ ತಮ್ಮ ಕುಟುಂಬಕ್ಕೆ ಪರಿಚಯ ಮಾಡ್ತಾನೆ ಎಂದಿದ್ದಾರೆ.

ರಾಖಿ ಆದಿಲ್ ತಮಗಾಗಿ ಖರೀದಿ ಮಾಡಿರುವ ಮನೆಯ ಬೆಲೆಯ ಬಗ್ಗೆ ಏನೂ ಮಾತನಾಡಿಲ್ಲವಾದರೂ ದುಬೈನಲ್ಲಿ ಖರೀದಿ ಮಾಡಿದ್ದಾರೆ ಎಂದರೆ ಅದು ಕೋಟಿಗಳಲ್ಲೇ ಇರುತ್ತದೆ ಎನ್ನುವುದು ಸತ್ಯ. ಇನ್ನು ಆದಿಲ್ ರಾಖಿಯಲ್ಲಿ ಬದಲಾವಣೆ ಅನ್ನೋದಾದ್ರೆ ಆಕೆ ಹೀಗೆ ಹೆಚ್ಚು ಗ್ಲಾಮರ್ ಆಗಿರೋ ಡ್ರೆಸ್ ಧರಿಸೋದು ಬದಲಾಯಿಸಿಕೊಳ್ಳಬೇಕು ಎಂದಿದ್ದು, ರಾಖಿ ಜೊತೆ ಮುಂಬೈನಲ್ಲಿ ಡಾನ್ಸ್ ಅಕಾಡೆಮಿ ತೆರೆಯುವ ಕನಸು ಇದೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published.